ನಟ ಸೋನು ಸೂದ್ ಬಗ್ಗೆ ನೀವು ತಿಳಿದಿರದ ಅಪರೂಪದ ಸಂಗತಿಗಳು

1 min read
actor Sonu sood

ನಟ ಸೋನು ಸೂದ್ ಬಗ್ಗೆ ನೀವು ತಿಳಿದಿರದ ಅಪರೂಪದ ಸಂಗತಿಗಳು

ಸೋನು ಸೂದ್ ಅವರು ತಾನೊಬ್ಬ ಕೇವಲ ಒಳ್ಳೆಯ ನಟನಷ್ಟೇ ಅಲ್ಲ ಜೊತೆಗೆ ಉತ್ತಮ ವ್ಯಕ್ತಿತ್ವವುಳ್ಳ ರಿಯಲ್ ಹೀರೋ ಎಂದು ಸಾಬೀತುಪಡಿಸಿದ್ದಾರೆ. ಅವರು ನಟ ಮಾತ್ರವಲ್ಲದೆ ನಿರ್ಮಾಪಕ ಮತ್ತು ರೂಪದರ್ಶಿ ಕೂಡ ಆಗಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಕೂಡ ಅವರು ತಮ್ಮ ಛಾಪು ಮೂಡಿಸಿದ್ದಾರೆ.
ಸೋನು ಬಗ್ಗೆ ತಿಳಿದಿರದ ಅಪರೂಪದ ಕೆಲವು ಸಂಗತಿಗಳು ಇಲ್ಲಿದೆ.

1. ಸೋನು ಸೂದ್ ಪಂಜಾಬ್ ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು ಮತ್ತು ನಾಗ್ಪುರದಲ್ಲಿ ಬೆಳೆದರು. ಅವರ ತಂದೆಯ ಹೆಸರು ಶಕ್ತಿ ಸಾಗರ್ ಮತ್ತು ಅವರ ತಾಯಿಯ ಹೆಸರು ಸರೋಜ್ ಸೂದ್. ಅವರ ತಂದೆ ಉದ್ಯಮಿಯಾಗಿದ್ದರೆ, ತಾಯಿ ಶಿಕ್ಷಕಿಯಾಗಿದ್ದಾರೆ.
ಅವರ ಸಹೋದರಿಯ ಹೆಸರು ಮೋನಿಕಾ ಮತ್ತು ಅವರು ವಿಜ್ಞಾನಿಯಾಗಿದ್ದಾರೆ.
Sonu soodu

2. ಪದವಿ ಪಡೆದ ನಂತರ ಸೋನು ಸೂದ್ ಮುಂಬೈಗೆ ಹೋದರು. ಅಲ್ಲಿ ಅವರು ಖಾಸಗಿ ಕಂಪನಿಯಲ್ಲಿ ಫೀಲ್ಡ್ ವರ್ಕ್ ಕೆಲಸ ಮಾಡುತ್ತಿದ್ದರು. ಆದ್ದರಿಂದ ಅವರು ರೈಲಿನಲ್ಲಿ ತಿರುಗಾಡಲು ಮಾಸಿಕ ಪಾಸ್ ಪಡೆದರು. ಆ ಸಮಯದಲ್ಲಿ ಸೋನು ಸೂದ್ ಇತರ ಜನರೊಂದಿಗೆ ಒಂದು ಕೋಣೆಯಲ್ಲಿ ವಾಸವಾಗಿದ್ದರು. ಕೆಲಸದ ಸಮಯದಲ್ಲಿ ಅವರ ಮಾಸಿಕ ವೇತನ ಕೇವಲ 4,500 ರೂ ಆಗಿತ್ತು.

3. ಕರಾಟೆ ಕುಂಗ್ ಫೂ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿರುವ ಶ್ರೇಷ್ಠ ನಟ ಜಾಕಿ ಚಾನ್, ಸೋನು ಸೂದ್ ಅವರ ಸ್ನೇಹಿತ.‌ ಭಾರತದಲ್ಲಿ ಕುಂಗ್ ಫೂ ಯೋಗ ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಲು ಸೋನುಗೆ ಅವಕಾಶ ಸಿಕ್ಕಿತು. ಹೀಗೆ ಅವರು ಸ್ನೇಹಿತರಾದರು.

4. ತೆಲುಗು ಚಿತ್ರ ಅರುಂಧತಿ ಚಿತ್ರದಲ್ಲಿನ ನಟನೆಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತ್ಯುತ್ತಮ ಖಳನಾಯಕನ ಪಾತ್ರಕ್ಕಾಗಿ ಆಂಧ್ರಪ್ರದೇಶ ರಾಜ್ಯ ನಂದಿ ಪ್ರಶಸ್ತಿ ಮತ್ತು ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.

5. ಸೋನುಗೆ ಕುಡಿಯುವ ಅಥವಾ ಧೂಮಪಾನದಂತಹ ಚಟಗಳಿಲ್ಲ. ಅವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಾರೆ. ಅವರು ಪ್ರತಿದಿನ ಜಿಮ್‌ಗೆ ಹೋಗುತ್ತಾರೆ. ಅವರ ಇತರ ಹವ್ಯಾಸಗಳು ಗಿಟಾರ್ ನುಡಿಸುವುದು ಮತ್ತು ಕಿಕ್ ಬಾಕ್ಸಿಂಗ್ .

6. ಸೋನು ಗಣೇಶ ದೇವರ ದೊಡ್ಡ ಅಭಿಮಾನಿ. ಆದರೆ ತಾಯಿ ತೀರಿಕೊಂಡ ನಂತರ ಸತತ ನಾಲ್ಕು ವರ್ಷಗಳ ಕಾಲ ಅವರು ಪ್ರಾರ್ಥನೆ ‌ಸಲ್ಲಿಸಿರಲಿಲ್ಲ.

7. ಸೋನುಗೆ ಐಷಾರಾಮಿ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಒಂದು ದಿನ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬೆಂಕಿ ಕಾಣಿಸಿಕೊಂಡಿತು ಮತ್ತು ಇಬ್ಬರು ಅದರಿಂದ ಅದೃಷ್ಟವಶಾತ್ ತಪ್ಪಿಸಿಕೊಂಡರು.

8. ಕೊರೋನಾ ಅವಧಿಯಲ್ಲಿ ಅವರು ಮಾಡಿದ ಪ್ರತಿಯೊಂದೂ ಕಾರ್ಯವು ಎಲ್ಲರಿಗೂ ತಿಳಿದಿದೆ. ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ಅವರ ಊರಿಗೆ ವಾಪಸ್ ಕಳುಹಿಸಲು ಸೋನು ಮುಂದಾಗಿದ್ದರು.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#actor #Sonusood

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd