ಆಸ್ತಿಗಾಗಿ ತಂದೆಯನ್ನೇ ಕೊಂದಿದ್ದ ಮಗ – ಚಿಕ್ಕಪ್ಪ 1 ವರ್ಷದ ಬಳಿಕ ಅರೆಸ್ಟ್..!
ಬೆಂಗಳೂರು : ಕೋಟ್ಯಂತರ ರೂಪಾಯಿ ಆಸ್ತಿಗಾಗಿ ಸುಪಾರಿ ಕೊಟ್ಟು ಅಪ್ಪನನ್ನೇ ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಮಗ ಹಾಗೂ ಆತನ ಚಿಕ್ಕನನ್ನ ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ ಒಂದು ವರ್ಷ ಹಿಂದೆ ಈ ಘಟನೆ ನಡೆದಿತ್ತು. ಇದೀಗ ತಡವಾಗಿ ಆರೋಪಿಯನ್ನ ಹುಡುಕಿ ಬಂಧಿಸಲಾಗಿದೆ. ತಲಘಟ್ಟಪುರ ಪೊಲೀಸರು ಆರೋಪಿಗಳಿಬ್ಬರನ್ನೂ ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ. ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತರು. ಮಾಧವ್ ಹೈತ್ಯೆಗೆ ಒಳಗಾಗಿದ್ದ ದುರ್ದೈವಿ. ಮಗ ಹರಿಕೃಷ್ಣ ತಂದೆಯ ಹತ್ಯೆಗೆ 25 ಲಕ್ಷ ಸುಪಾರಿ ನೀಡಿದ್ದ. ಈ ಹೇಯ ಕೃತ್ಯದಲ್ಲಿ ಹರಿಕೃಷ್ಣಗೆ ಆತನ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಸಾಥ್ ನೀಡಿದ್ದ.
#GOBackModi ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ‘ಕಿರಾತಕ ಬೆಡಗಿ’ ಓವಿಯ್ಯಾ!
2020 ಫೆ.14ರಂದು ಗುಬ್ಬಲಾಳ ರಸ್ತೆಯಲ್ಲಿ ಹತ್ಯೆ ನಡೆದಿತ್ತು. ಮಾಧವ್ ಹತ್ಯೆಗೈದಿದ್ದ ಐವರು ಸುಫಾರಿ ಹಂತಕರನ್ನ ಪೊಲೀಸರು ಬಂಧಿಸಿದ್ದರು. ರಿಯಾಜ್ ಅಹಮದ್, ಶಾರುಖ್ ಖಾನ್, ಸೈಯ್ಯದ್ ಸಲ್ಮಾನ್, ಆದಿಲ್ ಖಾನ್, ಷಹಬಾಜ್ ನಜೀರ್ ಬಂಧತರಾಗಿದ್ದರು. ಬಳಿಕ ತಂದೆ ಚಿಕ್ಕಪ್ಪ ತಪ್ಪಿಸಿಕೊಂಡಿದ್ರು. ಇದೀಗ ಬರೋಬ್ಬರಿ 1 ವರ್ಷದ ಬಳಿಕ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮತ್ತೊಬ್ಬ ಬಾಲಿವುಡ್ ನ ಯುವ ನಟ ಆತ್ಮಹತ್ಯೆಗೆ ಶರಣು..!
ಕೋಟ್ಯಂತರ ಮೌಲ್ಯದ ಬಳ್ಳಾರಿ ಸ್ಟೀಲ್ & ಅಲಾಯ್ ಲಿಮಿಟೆಡ್ ಕಂಪನಿ ಮಾಲೀಕನಾಗಿದ್ದ ಮಾಧವ್ ಮೈನಿಂಗ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದ. ಈ ವೇಳೆ ಆಸ್ತಿ ಮಾರಾಟ ಮಾಡುವಂತೆ ಮಾಧವ್ ಗೆ ಮಗ ಹಾಗೂ ಸಹೋದರ ಸೂಚಿಸಿದ್ದರು. ಆದ್ರೆ ಮಾಧವ್ ಇವರ ಸಲಹೆಯನ್ನ ತಳ್ಳಿ ಹಾಕಿದ್ದ. ಹೀಗಾಗಿ ಸುಪಾರಿ ಹಂತಕರ ನೆರವಿನಿಂದ ಮಾಧವ್ ಹತ್ಯೆಗೈದಿದ್ದಾರೆ.