ನಾಗಪುರ : ಜಿಮ್ ತರಬೇತುದಾರನೊಬ್ಬ ತನ್ನ ತಂದೆಯ ಕುತ್ತಿಗೆಯನ್ನು ಕಚ್ಚಿದ್ದಲ್ಲದೇ, ಜನನಾಂಗವನ್ನೇ ಕತ್ತರಿಸಿ ಹತ್ಯೆಮಾಡಿದ ಪೈಶಾಚಿಕ ಘಟನೆ ನಾಗಪುರದ ಹುಡುಕೇಶ್ವರದಲ್ಲಿ ನಡೆದಿದೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ. ವಿಕ್ರಾಂತ್ ಬಂಧಿತ ಆರೋಪಿ. ಹತ್ಯೆಗೀಡಾದ ವ್ಯಕ್ತಿ ಹೆಸರು ವಿಜಯ್ (55). ಪೊಲೀಸರು ಹೇಳುವ ಪ್ರಕಾರ, ಪೈಶಾಚಿಕ ರೀತಿಯಲ್ಲಿ ಕೊಲೆ ನಡೆಸಿದ ಬಳಿಕವೂ ವಿಕ್ರಾಂತ್ ಬಹಳ ವ್ಯಗ್ರನಾಗಿದ್ದ. ಆತನನ್ನು ನಿಯಂತ್ರಿಸಲು ಹರಸಾಹಸ ಪಡೆಬೇಕಾಯಿತು. ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಕೊಲೆ ಪ್ರಕರಣದ ಸೆಕ್ಷನ್ ಹಾಕಲಾಗಿದೆ.
ಏನಿದು ಘಟನೆ..?
ಕುಟುಂಬಸ್ಥರು ನೀಡಿದ ಮಾಹಿತಿ ಪ್ರಕಾರ, ವಿಕ್ರಾಂತ್ ಹಿಂದಿ ಸಿನಿಮಾದ ಡೈಲಾಗ್ ಗಳನ್ನು ಹೇಳುತ್ತ ವಿಲಕ್ಷಣವಾಗಿ ವರ್ತಿಸುತ್ತಿದ್ದ. ಇದ್ದಕ್ಕಿದ್ದಂತೆ ತಂದೆಯ ಮೇಲೆರಗಿದ ವಿಕ್ರಾಂತ್, ಸಿನಿಮಾಗಳಲ್ಲಿ ಪಿಶಾಚಿ ಕತ್ತಿನ ಭಾಗಕ್ಕೆ ಕಚ್ಚಿ ರಕ್ತ ಹೀರುವಂತೆ ಅದೇ ಶೈಲಿಯಲ್ಲಿ ತಂದೆಯ ಕತ್ತನ್ನೂ ಕಚ್ಚಿದ್ದ. ರಕ್ತ ಸೋರ ತೊಡಗಿದ ಬಳಿಕ ತಂದೆಯನ್ನು ವರಾಂಡಕ್ಕೆ ಎಳೆದೊಯ್ದ ವಿಕ್ರಾಂತ್ ಅಲ್ಲಿ ಅವರ ಜನನಾಂಗವನ್ನೇ ಕತ್ತರಿಸಿ ಹಾಕಿದ. ತೀವ್ರ ರಕ್ತ ಸ್ರಾವದ ಕಾರಣ ತಂದೆ ವಿಜಯ್ ಅಲ್ಲೇ ಮೃತಪಟ್ಟರು. ಆದಾಗ್ಯೂ, ವಿಕ್ರಾಂತ್ ನ ವಿಚಿತ್ರ ವರ್ತನೆ ನಿಂತಿರಲಿಲ್ಲ. ತಂದೆಯನ್ನು ಕಾಪಾಡಲು ಬಂದ ತಾಯಿ ಮತ್ತ ಸಹೋದರಿಯನ್ನೂ ಆತ ಬೆದರಿಸಿ ಹಿಂದಕ್ಕೆ ಅಟ್ಟಿದ್ದನಂತೆ.