ತಂದೆ & ತಂದೆಯ ಪ್ರೇಯಸಿಯನ್ನ ಕೊಂದ ಮಗ mysore saaksha tv
ಮೈಸೂರು : ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ.
ಶಿವಪ್ರಕಾಶ್ ಮತ್ತು ಲತಾ ಮೃತರಾಗಿದ್ದು, ಸಾಗರ್ ಕೊಲೆ ಆರೋಪಿಯಾಗಿದ್ದಾನೆ. ಲತಾ ಮನೆಗೆ ನುಗ್ಗಿದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಈ ವೇಳೆ ಆಕೆಯ ಪುತ್ರ ನಾಗಾರ್ಜುನ್ ಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಬಳಿಕ ಸಾಗರ್ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಈ ಸಂಬಂಧ ಮೈಸೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಗರ್ ಬಂಧನಕ್ಕಾಗಿ ಪೆÇಲೀಸರು ಬಲೆ ಬೀಸಿದ್ದಾರೆ.