ಹುಟ್ಟು ಹಬ್ಬದ ದಿನವೇ ಸಪ್ತಪದಿ ತುಳಿದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ನಟಿ ಸೋನಲ್ (Sonal) ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಚಂದನವನದ ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tarun Sudhir) ಅವರೊಂದಿಗೆ ನಟಿ ಸೋನಲ್ ಸಪ್ತಪದಿ ತುಳಿದಿದ್ದಾರೆ. ಆಪ್ತರು, ಕುಟುಂಬಸ್ಥರು, ಹಿತೈಷಿಗಳು, ಗಣ್ಯ ವ್ಯಕ್ತಿಗಳು ಈ ಮದುವೆ (marriage) ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಮದುವೆ ಕುರಿತು ಮಾತನಾಡಿರುವ ನಟಿ ಸೋನಲ್, ಇನ್ನು ಮುಂದೆ ಹೊಸ ಜೀವನ ಆರಂಭಿಸುತ್ತೇವೆ ಎನ್ನುವ ಖುಷಿ ಆಗುತ್ತಿದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಆಗಲು ನಟ ದರ್ಶನ್ ಕಾರಣ. ಅಂದುಕೊಂಡಂತೆ ಆಗಿದ್ದರೆ, ನಟ ದರ್ಶನ್ ಜವಾಬ್ದಾರಿ ಹೊತ್ತು ಮದುವೆ ಮಾಡುತ್ತಿದ್ದರು. ಆದರೆ, ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹೀಗಾಗಿ ದರ್ಶನ್ ಮದುವೆಗೆ ಬಂದಿಲ್ಲ. ಜೈಲಿನಲ್ಲಿಯೇ ಕುಳಿತು ನವ ಜೋಡಿಗೆ ಆಶೀರ್ವದಿಸಿದ್ದಾರೆ. ಇದು ತರುಣ್ ಅವರಿಗೆ ಕೂಡ ಬೇಸರ ತರಿಸಿದೆ.
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ಸಪ್ತಪದಿ ತುಳಿದಿದ್ದಾರೆ. ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ.