Bollywood : ಟ್ಯಾಕ್ಸ್ ತಪ್ಪಿಸಲು ಯತ್ನ : ಸೋನಮ್ ಪತಿ ವಿರುದ್ಧ ಇ ಕಾಮರ್ಸ್ ಕಂಪನಿ ಆರೋಪ
ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಆನಂದ್ ಅಹೂಜಾ ವಿರುದ್ಧ ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಗಂಭೀರ ಆರೋಪ ಹೊರಿಸಿದೆ. ಆನಂದ್ ಅಹುಜಾ ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆರೋಪ ಮಾಡಿದೆ. ಅಂದ್ಹಾಗೆ ಕೆಲ ದಿನಗಳ ಹಿಂದೆ ಆನಂದ್ ಅಹುಜಾ ಅವರು ಇದೇ ಶಿಪ್ಪಿಂಗ್ ಕಂಪನಿ ಮೇಲೆ ಆರೋಪ ಮಾಡಿದ್ದರು. ಆದ್ರೀಗ ಕಂಪನಿ ಆನಂದ್ ಅವರ ಮೇಲೆ ಪ್ರತ್ಯಾರೋಪ ಮಾಡಿದೆ.
ಆನಂದ್ ಅಹುಜಾ ತಮ್ಮ ಗ್ರಾಹಕ ಸೇವೆಗಾಗಿ ಅಂತಾರಾಷ್ಟ್ರೀಯ ಶಿಪ್ಪಿಂಗ್ ಕಂಪನಿಯ ವಿರುದ್ಧ ಟ್ವೀಟ್ ಮಾಡಿದ್ದರು. ಅದೇ ಕಂಪನಿ ಈಗ ಟ್ಯಾಕ್ಸ್ ಪಾವತಿ ತಪ್ಪಿಸಲು ಆನಂದ್ ಅಹುಜಾ ತಪ್ಪು ದಾಖಲೆ ನೀಡಿದ್ದಾರೆ ಎಂದು ಆರೋಪಿಸಿದೆ. ಆನಂದ್ ಅಹುಜಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಂಪನಿಯು, ಸಮಸ್ಯೆಯಾಗಿರುವುದು ಅವರ ಸೇವೆಗಳಿಂದಲ್ಲ, ಬದಲಾಗಿ ಆನಂದ್ ಅಹುಜಾ ಒದಗಿಸಿದ ದಾಖಲೆಗಳು ಸರಿಯಿಲ್ಲ ಎಂದು ಬರೆದುಕೊಂಡಿದೆ.
ಅಲ್ಲದೇ ಆನಂದ್ ಅಹುಜಾ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದಂತೆ, ನಾವು ವಸ್ತುಗಳನ್ನು ನಮ್ಮಲ್ಲಿ ಉಳಿಸಿಕೊಂಡಿಲ್ಲ. ಇದು ಗ್ರಾಹಕ ಸೇವೆಯ ಗುಣಮಟ್ಟದ ಪ್ರಶ್ನೆಯಲ್ಲ. ಆನಂದ್ ಅಹುಜಾ ಖರೀದಿ ಮಾಡಿದ ಸ್ನೀಕರ್ಸ್ ಬೆಲೆಯನ್ನು ತಪ್ಪಾಗಿ ನೀಡಿದ್ದಾರೆ. ಇದರಿಂದಾಗಿ ಅವರು ಕಡಿಮೆ ಮೊತ್ತದ ತೆರಿಗೆ ಮತ್ತು ಸುಂಕ ಪಾವತಿ ಮಾಡಿದಂತಾಗುತ್ತದೆ ಎಂದು ತಿಳಿಸಿದೆ.
Cinema: 1.4 ಕೋಟಿ ಬಾರಿ ವೀಕ್ಷಣೆ ಕಂಡ ಕಲಾವತಿ ಹಾಡು