Sonia Gandhi : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ…
ಉಸಿರಾಟದ ತೊಂದರೆಯಿಂದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 76 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಚೆಸ್ಟ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಅರೂಪ್ ಬಸು ಮತ್ತು ಅವರ ತಂಡದ ಮೇಲ್ವಿಚಾರಣೆಯಲ್ಲಿ ಸೋನಿಯಾ ಗಾಂಧಿ ಅವರನ್ನ “ಜ್ವರದ ಕಾರಣ” ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಂಗಾ ರಾಮ್ ಆಸ್ಪತ್ರೆಯ ಟ್ರಸ್ಟ್ ಸೊಸೈಟಿಯ ಅಧ್ಯಕ್ಷ ಡಿಎಸ್ ರಾಣಾ ಅವರು ಹೇಳಿದರು. ಸೋನಿಯಾ ಗಾಂಧಿ ಅವರನ್ನು ನಿಗಾದಲ್ಲಿ ಇರಿಸಿ ವಿಚಾರಿಸಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಬುಲೆಟಿನಲ್ಲಿ ತಿಳಿಸಿದೆ.
ಉಸಿರಾಟದ ಸೋಂಕಿನಾಗಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದು ಈ ವರ್ಷ ಎರಡನೇ ಬಾರಿ. ಇತ್ತೀಚೆಗೆ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ನ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಸೋನಿಯಾ ಗಾಂಧಿ ಪ್ರಸ್ತಾಪಿಸಿದ್ದಾರೆ. ಭಾರತ್ ಜೊಡೋ ಯಾತ್ರೆಯೊಂದಿಗೆ ತನ್ನ ಇನ್ನಿಂಗ್ಸ್ ಮುಕ್ತಾಯಗೊಳ್ಳಬಹುದು ಎಂದು ಹೇಳಿದ್ದರು.
Sonia Gandhi Admitted To Delhi Hospital Due To Fever