ಸೋನು ಸೂದ್ ಮುಂದಿನ ಪ್ರಧಾನಿ ಆಗಬೇಕು ಎಂದ ರಾಖಿಗೆ – ‘ರಿಯಲ್ ಸ್ಟಾರ್’ ಕೊಟ್ಟ ಉತ್ತರ ಎಲ್ಲರ ಹೃದಯ ಗೆದ್ದಿದೆ..!
ಮುಂಬೈ: ಇತ್ತೀಚೆಗೆ ಬಾಲಿವುಡ್ ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ಇತ್ತೀಚೆಗೆ ಸೋನು ಸೂದ್ ಅಥವ ಸಲ್ಮಾನ್ ಖಾನ್ ಈ ದೇಶದ ಪ್ರಧಾನಿಯಾಗಬೇಕು.. ಅವರು ನಿಜವಾದ ಹೀರೋಗಳು.. ಸಂಕಷ್ಟದ ಸಂರ್ಭದಲ್ಲಿ ಬಡ ಜನರಿಗೆ ಸಹಾಯ ಮಾಡ್ತಿರುವ ಸೋನು ಸೂದ್ ಪ್ರಧಾನಿ ಆಗುವುದು ನನ್ನ ಆಸೆ ಎಂದು ಹೇಳಿಕೊಂಡಿದ್ರು..
ರಾಖಿ ಅವರ ಈ ಹೇಳಿಕೆಗೆ ಸಾಕಷ್ಟು ಮಂದಿ ಸಹಮತವನ್ನ ಹೊರಹಾಕಿದ್ದರು.. ಸೋನು ದೇಶದ ಪ್ರದಾನಿಯಾಗಬೇಕೆಂಬ ಅಭಿಪ್ರಾಯವನ್ನೂ ಹೊರಹಾಕಿದ್ದರು.. ಕಲೆಲವರು ರಾಖಿ ಸಾವಂತ್ ಕಾಲೆಳೆದಿದ್ದರು.. ಇದೀಗ ಈ ವಿಚಾರ ಸೋನು ಅವರ ಗಮನಕ್ಕೂ ಬಂದಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಸೋನು ಸೂದ್ , ನಾನು ಸಾಮಾನ್ಯ ಮನುಷ್ಯನಾಗಿ ಇರುವುದೇ ಉತ್ತಮ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸೋನು ಮಾತನಾಡಿದ ಸೋನು ಸೂದ್ ‘ನಿನ್ನೆ 41,660 ರಿಕ್ವೆಸ್ಟ್ ಗಳು ಬಂದಿವೆ. ಎಲ್ಲರನ್ನೂ ತಲುಪಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಲ್ಲರನ್ನೂ ತಲುಪಬೇಕಾದರೆ 14ವರ್ಷಗಳು ಬೇಕಾಗುತ್ತೆ. ಅಂದರೆ 2035ಕ್ಕೆ ಆಗಬಹುದು’ ಎಂದು ಹೇಳಿದ್ದಾರೆ.