ಸಿನಿಮಾದಲ್ಲಿ ಸೋನು ಸೂದ್ ಗೆ ಹೊಡೆದ ಕಾರಣಕ್ಕೆ ಟಿವಿ ಪೀಸ್ ಪೀಸ್ ಮಾಡಿದ ಬಾಲಕ
ಮುಂಬೈ : ಮೊದಲ ಬಾರಿಗೆ ಲಾಕ್ ಡೌನ್ ಆದ ಸಂದರ್ಭದಿಂದ ಹಿಡಿದು ಇಲ್ಲಿಯರೆಗೂ ಬಡವರಿಗೆ ಸಹಾಯದ ಅನಿವಾರ್ಯತೆ ಇರುವವರಿಗೆ ಮಬಾಲಿವುಡ್ ನಟ ಸೋನು ಸೂದ್ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಜನರ ಪಾಲಿನ ಹೀರೋ ಆಗಿದ್ದಾರೆ.. ಎಷ್ಟರ ಮಟ್ಟಿಗೆ ಅಂದ್ರೆ ಜನ ಈಗ ಅವರನ್ನ ವಿಲ್ಲನ್ ಪಾತ್ರದಲ್ಲಿ ನೋಡೋದಕ್ಕೂ ಒಪ್ಪದಂತಹ ಪರಿಸ್ಥಿತಿ ಇದೆ.. ಇಲ್ಲೊಬ್ಬ ಪುಟ್ಟ ಬಾಲಕ ಸಿನಿಮಾದಲ್ಲಿ ಸೋನು ಸೂದ್ ಗೆ ಹೊಡೆದಿದಕ್ಕೆ ತನ್ನ ಮನೆಯ ಟಿವಿಯನ್ನ ಕುಟ್ಟಿ ಪುಡಿಪುಡಿ ಮಾಡಿಹಾಕಿದ್ದಾನೆ..
ಹೌದು.. ದೂಕುಡು ಸಿನಿಮಾದಲ್ಲಿ ಹೊಡೆದದ್ದಕ್ಕೆ ಬಾಲಕ ಸಿಟ್ಟಿನಿಂದ ಮನೆಯ ಟಿವಿಯನ್ನು ಪೀಸ್ ಪೀಸ್ ಮಾಡಿರುವ ಘಟನೆ ಸಂಗರೆಡ್ಡಿಯಲ್ಲಿ ನಡೆದಿದೆ.. 7 ವರ್ಷದ ಬಾಲಕ ವಿರಾಟ್ , ನಟ ಸೋನುಸೂದ್ ಸಹಾಯ ಬಯಸಿ ಬಂದವರಿಗೆ ನೆರವಾಗುವುದನ್ನು ನೋಡಿದ್ದಾನೆ. ಆತನ ಮನಸ್ಸಿನಲ್ಲಿ ಸೋನು ಸೂದ್ ಆದರ್ಶ ವ್ಯಕ್ತಿಯಾಗಿ ಉಳಿದುಬಿಟ್ಟಿದ್ದಾರೆ. ಆದರೆ ಬಾಲಕ ವಿರಾಟ್ ದೂಕುಡು ಚಿತ್ರ ನೋಡುವಾಗ ಕಕ್ಕಾಬಿಕ್ಕಿಯಾಗಿದೆ. ಮಹೇಶ್ ಬಾಬು ಅಭಿನಯದ ಆ ಚಿತ್ರದಲ್ಲಿ ಸೋನು ಸೂದ್ ಖಳನಾಯಕನಾಗಿ ಅಭಿನಯಿಸಿದ್ದಾರೆ. ಅದರಲ್ಲಿ ಮಹೇಶ್ ಬಾಬು ಸೋನು ಸೂದ್‍ರನ್ನು ಸದೆಬಡಿಯುವದನ್ನು ನೋಡಿದ ಬಾಲಕನಿಗೆ ಕೋಪ ಬಂದಿದೆ. ಸೋನು ಸೂದ್ ಅವರಿಗೆ ಹೊಡೆತುತ್ತಿದ್ದಾರಲ್ಲ ಎಂದು ಬಾಲಕ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.
ಬಾಲಕ ವಿರಾಟ್ ಟಿವಿ ಪುಡಿ ಮಾಡಿದ ವೀಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡು, ಅರೆ, ಟಿವಿ ಪುಡಿ ಮಾಡಬೇಡ ಕಣಪ್ಪಾ, ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಸದ್ಯ ಅವರ ಈ ಟ್ವೀಟ್ ವೈರಲ್ ಆಗಿದೆ.
ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು : ದರ್ಶನ್
`ದಾಸ’ನಿಂದ ಆತ್ಮೀಯ ಸ್ನೇಹಿತ ದೂರ : 18 ವರ್ಷಗಳ ಸ್ನೇಹಕ್ಕೆ ಬಿತ್ತಾ ಬ್ರೇಕ್..?