ಏರ್ ಆಂಬ್ಯುಲೆನ್ಸ್ ಮೂಲಕ ಕೊರೊನಾ ಸೋಂಕಿತೆಗೆ ಚಿಕಿತ್ಸೆ ಕೊಡಿಸಿದ ‘ರಿಯಲ್ ಹೀರೋ’ ಸೋನು..!
ಮುಂಬೈ : ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಬಡವರು , ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ನೆರವಾಗುತ್ತಲೇ ಇರುವ ಸೋನು ರೀಲ್ ಲೈಫ್ ನಲ್ಲಿ ಖಳನಾಯಕನೇ ಆದ್ರೂ ರಿಯಲ್ ಲೈಫ್ ನಲ್ಲಿ ರಿಯಲ್ ಹೀರೋ ಆಗಿ ಶೈನ್ ಆಗ್ತಿದ್ದಾರೆ. ಕಳೆದ ವಾರ ಖುದ್ದು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಸೋನು ಚಿಕಿತ್ಸೆ ಪಡೆದು ಗುಣಮುಖರಾದ್ರು. ಆಧ್ರೂ ಈ ನಡುವೆ ತಮ್ಮ ಸಮಾಜಮುಖಿ ಕಾರ್ಯಗಳನ್ನ ಮಾತ್ರ ನಿಲ್ಲಿಸಿರಲಿಲ್ಲ..
ಅಗತ್ಯ ಸೇವಗೆಳನ್ನು ಸೋನು ಸೂದ್ ಮಾಡುತ್ತಿದ್ದಾರೆ. ಕೊರೊನಾವೈರಸ್ನಿಂದ ಬಳಲುತ್ತಿದ್ದ ರೋಗಿಯನ್ನು ನಾಗಪುರದಿಂದ ಹೈದರಾಬಾದ್ ಗೆ ಏರ್ ಆಂಬುಲೆನ್ಸ್ ವಿಮಾನ ಮೂಲಕ ಕರೆತಂದು ಸೋನು ಸೂದ್ ಚಿಕಿತ್ಸೆ ಕೊಡಿಸಿದ್ದಾರೆ. 25 ವರ್ಷದ ಹುಡುಗಿ ಕೋವಿಡ್ನಿಂದ ತೀವ್ರ ಬಳಲುತ್ತಿದ್ದರು. ಚಿಕಿತ್ಸೆಗಾಗಿ ನಾಗಪುರದ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಶ್ವಾಸಕೋಶ ಕಸಿ ಮತ್ತು ಇನ್ನು ಕೆಲವು ವಿಶೇಷ ಚಿಕಿತ್ಸೆ ಮಾಡಿಬೇಕಾದ ಕಾರಣ, ಹೈದರಾಬಾದ್ ನ ಅಪೊಲೊ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ ಎಂದು ವೈದ್ಯರು ಸೂಚಿಸಿದರು.
ಈ ಕುಟುಂಬಕ್ಕೆ ನೆರವಾದ ಸೋನು ಹೈದರಾಬಾದ್ನ 6 ವೈದ್ಯರ ತಂಡದೊಂದಿಗೆ ನಾಗಪುರದಿಂದ ಹೈದರಾಬಾದ್ ಅಪೊಲೊ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ. ಅಪೊಲೋ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ ಶೇ.20ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು. ನಾನು ಖಂಡಿತ ಅವಳು 25 ವರ್ಷದ ಯುವತಿ, ಕಠಿಣ ಯುದ್ಧ ಮಾಡುತ್ತಾಳೆ. ಇದರಿಂದ ಹೊರಬರುತ್ತಾಳೆ. ಅದಕ್ಕಾಗಿ ನಾವು ಈ ಅವಕಾಶವನ್ನು ಪಡೆದುಕೊಂಡೆವು. ಅವಳಿಗೆ ಚಿಕಿತ್ಸೆ ನೀಡಲು ದೇಶದ ಅತ್ಯುತ್ತಮ ವೈದ್ಯರತಂಡವನ್ನು ಸಂಪರ್ಕಿಸಿ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗಿ ಹಿಂದಿರುಗುತ್ತಾರೆ ಎಂದು ಹೇಳಿದ್ದಾರೆ.








