‘ನೀವು ನಮಗೆ ಬುದ್ದಿ ಕಲಿಸಲು ಬರಬೇಡಿ’ ಬರಬೇಡಿ: ‘ರಿಯಲ್ ಹೀರೋ’ ವಿರುದ್ಧ ವೈದ್ಯರ ಆಕ್ರೋಶ
ಸದಾ ನೆಗೆಟಿವ್ ರೋಲ್ಸ್ ಗಳಲ್ಲೇ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ರೀಲ್ ಲೈಫ್ ನ ವಿಲ್ಲನ್ ಸೋನು ಸೂದ್ ಆಫ್ ಸ್ಕ್ರೀನ್ ನ ರಿಯಲ್ ಹೀರೋ ಅನ್ನೋದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕಳೆದ ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಬಡವರು , ಶ್ರೀಮಂತರು ಅಂತ ನೋಡದೇ ಅಗತ್ಯವಿದ್ದರಿಗೆ ಸಹಾಯ ಮಾಡುತ್ತಲೇ ಇರುವ ಸೋನು ಬಡವರ ಪಾಲಿನ ದೇವರಾಗಿದ್ದಾರೆ.. ಸದಾ ಟ್ವೀಟ್ ಮೂಲಕ ಜಾಗೃತಿ ಮೂಡಿಸುವ ಇತರರಿಗೆ ಸಹಾಯ ಮಾಡುವ ಸೋನು ಸೂದ್ ಅವರು ಇತ್ತೀಚೆಗೆ ಮಾಡಿದ್ದ ಟ್ವೀಟ್ ಒಂದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಸೋನು ಮಾಡಿದ್ದ ಟ್ವೀಟ್ ಏನು..?
‘ಒಂದು ಸರಳ ಪ್ರಶ್ನೆ, ಇಂಜೆಕ್ಷನ್ ಒಂದು ಎಲ್ಲಿಯೂ ಲಭ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿರುವಾಗ ವೈದ್ಯರು ಏಕೆ ಅದೇ ಇಂಜೆಕ್ಷನ್ ಎನ್ನು ಎಲ್ಲ ರೋಗಿಗಳಿಗೂ ರೆಕೆಮೆಂಡ್ ಮಾಡುತ್ತಿದ್ದಾರೆ.. ಆಸ್ಪತ್ರೆಗಳಿಗೇ ಆ ಇಂಜೆಕ್ಷನ್ ಸಿಗದೇ ಇರುವಾಗ ಸಾಮಾನ್ಯ ವ್ಯಕ್ತಿಗೆ ಹೇಗೆ ಸಿಗಲು ಸಾಧ್ಯ.. ಆ ಇಂಜೆಕ್ಷನ್ ಬದಲಿಗೆ ಬೇರೆ ಔಷಧಗಳನ್ನು ಬಳಸಿ ಜೀವ ಉಳಿಸುವ ಪ್ರಯತ್ನ ಮಾಡಲಾಗುತ್ತಿಲ್ಲ ಏಕೆ..’ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಸೋನು ಅಭಿಮಾನಿಗಳು ಸೋನು ಅವರನ್ನ ಬೆಂಬಲಿಸಿದ್ರೆ ಇನ್ನೂ ಹಲವರು ವೈದ್ಯರ ಪರ ಕಮೆಂಟ್ ಮಾಡಿದ್ದಾರೆ.. ಈ ಟ್ವೀಟ್ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಅಮಿತ್ ತಂಡಾನಿ ಎಂಬ ವೈದ್ಯರು ಸೋನು ಸೋದ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ‘ನಾವು ನಿಮಗೆ ನಟನೆ ಹೇಳಿಕೊಟ್ಟಿಲ್ಲ. ದಯವಿಟ್ಟು ನೀವು ನಮಗೆ ಚಿಕಿತ್ಸೆ ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡಬೇಡಿ’ ಎಂದಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, ‘ನಿಮ್ಮ ಪ್ರಶ್ನೆಗಳಿಗೆ ಒಂದು ಸಾಲಿನಲ್ಲಿ ಉತ್ತರ ನೀಡುತ್ತೇನೆ. ನೀವು ಅರ್ಜೆಂಟ್ ಆಗಿ ಎಲ್ಲಿಗಾದರೂ ನಿಮ್ಮ ಕಾರಿನಲ್ಲಿ ಹೋಗುವಾಗ ಪೆಟ್ರೋಲ್ ಖಾಲಿಯಾದರೆ ಅರ್ಜೆಂಟ್ ಇದೆ ಎಂದು ಪೆಟ್ರೋಲ್ ಬದಲು ಡೀಸೆಲ್ ಹಾಕಿಸಿಕೊಂಡು ಹೋಗುತ್ತೀರೇನು..’ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬರು ‘ಎಲ್ಲ ಔಷಧಗಳಿಗೂ ಪರ್ಯಾಯ ಔಷಧಗಳು ಇರುವುದಿಲ್ಲ. ನಿಮ್, ಮೆದುಳಿನಲ್ಲಿ ಇನ್ನಷ್ಟು ಗ್ರೇ ಮ್ಯಾಟರ್ ಇರಬೇಕಿತ್ತು . ಹೀಗಾಗಿಯೇ ನಿಮ್ಮಂತಹ ಬುದ್ಧಿವಂತರು ವೈದ್ಯರಾಗುವುದಿಲ್ಲ, ನಟರಾಗುತ್ತಾರೆ ‘ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.