ನಟ ಸೋನು ಸೂದ್ ಗೆ ಐಟಿ ಶಾಕ್ : ಕಚೇರಿಗಳ ಮೇಲೆ ದಾಳಿ Sonu Sood saaksha tv
ನವದೆಹಲಿ : ರಿಯಲ್ ಹೀರೋ, ಬಹುಭಾಷಾ ನಟ ಸೋನು ಸೂದ್ ಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಅವರ ಕಚೇರಿಗೆಗಳ ಮೇಲೆ ದಾಳಿ ನಡೆಸಿದೆ.
ಇತ್ತೀಚೆಗೆ ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ಮಧ್ಯೆ ಒಪ್ಪಂದ ನಡೆದಿದ್ದು, ಈ ವೇಳೆ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ಐಟಿ ಅಧಿಕಾರಿಗಳು ಮುಂಬೈ ಕಚೇರಿ ಮತ್ತು ಲಕ್ನೋದಲ್ಲಿರುವ ಕಂಪನಿ ಸೇರಿದಂತೆ ಒಟ್ಟು ಆರು ಕಡೆ ದಾಳಿ ನಡೆಸಿದ್ದಾರೆ.
ಅಂದಹಾಗೆ ಈ ಹಿಂದೆ 2012 ರಲ್ಲಿ ಕೂಡ ತೆರಿಗೆ ವಂಚನೆ ಆರೋಪದ ಮೇಲೆ ಸೋನು ಸೂದ್ ಅವರ ಕಚೇರಿಗಳ ಮೇಲೆ ದಾಳಿ ನಡೆದಿತ್ತು.









