ಇನ್ಮುಂದೆ ಸೌದಿ ಅರೆಬಿಯಾದ ಪಠ್ಯದಲ್ಲಿರಲಿದೆ ರಾಮಾಯಣ , ಮಹಾಭಾರತ..! ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದ ಪ್ರಿನ್ಸ್..!

1 min read

ಇನ್ಮುಂದೆ ಸೌದಿ ಅರೆಬಿಯಾದ ಪಠ್ಯದಲ್ಲಿರಲಿದೆ ರಾಮಾಯಣ , ಮಹಾಭಾರತ..! ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದ ಪ್ರಿನ್ಸ್..!

ಸೌದಿ ಅರೇಬಿಯಾದಲ್ಲಿ ಕೆಲ ವರ್ಷಗಳಿಂದ ಅಲ್ಲಿನ ಪ್ರಿನ್ಸ್ ಅನೇಕ ಬದಲಾವಣೆಗಳನ್ನ ತರುತ್ತಿದ್ದು ಮಹಿಳೆಯರಿಗಾಗಿಯೂ ಹೊಸ ಹೊಸ ಕಾನೂನುಗಳು ಹಾಗೂ ಸ್ವಂತ್ರಸ್ಯ ನೀಡುತ್ತಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ಚಲಾವಣೆ ಮಾಡಲು ಮಹಿಳೆಯರಿಗೆ ಅವಕಾಶ ನೀಡಿರುವ ಪ್ರಿನ್ಸ್ ಬೇರೆ ಬೇರೆ ಕ್ಷೇತ್ರಗಳಲ್ಲೂ ಸಹ ಬದಲಾವಣೆಗಳನ್ನ ತರುತ್ತಿದ್ದಾರೆ. ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಒಮದು ರೀತಿ ಮಹತ್ವದ ಬೆಳವಣಿಗೆ ತಂದಿದ್ದಾರೆ.

ವಿಷನ್ 2030 ಅಡಿಯಲ್ಲಿ ಪ್ರಿನ್ಸ್ ಮೊಹಮ್ಮದ್ ಸೌದಿ ಅರೇಬಿಯಾದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನ ತಂದಿದ್ದಾರೆ. ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಜ್ಞಾನ ತುಂಬಲು ಮುಂದಾಗಿದ್ದಾರೆ. ಈ ಪ್ರಯೋಗದ ಭಾಗವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಇನ್ಮೇಲೆ ತಮ್ಮ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನೂ ಅಭ್ಯಸಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಇರುವ ಜ್ಞಾನವನ್ನ ಹೆಚ್ಚಿಸಲು ಹಾಗೂ ಭಾರತೀಯ ಸಂಸ್ಕೃತಿಗಳಾದ ಯೋಗ ಹಾಗೂ ಆಯುರ್ವೇದದ ಮೇಲೂ ಗಮನ ನೀಡಲಾಗಿದೆ.

ಸೌದಿ ಅರೇಬಿಯಾ ಪಠ್ಯ ಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನ ಸೇರಿಸೋದ್ರ ಜೊತೆಗೆ ವಿಷನ್ 2030 ಭಾಗವಾಗಿ ಇಂಗ್ಲೀಷ್ ಭಾಷೆ ಕಡ್ಡಾಯವಾಗಿ ಇದೆ. ಪಠ್ಯಕ್ರಮದ ವಿಚಾರದ ಕುರಿತಾಗಿ ಟ್ವಿಟರ್ನಲ್ಲಿ ನೌಫ್ ಅಲ್ ಮರ್ವಾಲ್ ಎಂಬವರು ಹೊಸ ಪಠ್ಯಕ್ರಮದ ಮಾಹಿತಿಯನ್ನ ಶೇರ್ ಮಾಡಿದ್ದಾರೆ.

ಇದಷ್ಟೇ ಅಲ್ಲದೇ ಹಿಂದೂ ಸಂಪ್ರದಾಯ , ಭೌದ್ಧಿ ಸಮುದಾಯದ ಬಗ್ಗೆ, ಕರ್ಮ , ಧರ್ಮ ಈ ಕುರಿತಾದ ವಿಚಾರಗಳ ಬಗ್ಗೆಯೂ ಅಲ್ಲಿನ ಮಕ್ಕಳಿಗೆ ಅಭ್ಯಾಸ ಮಾಡಿಸಲು ದಿಟ್ಟ ಹೆಜ್ಜೆ ಇಟ್ಟಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd