ಸೌದಿ ಅರೇಬಿಯಾ : ಕೆಂಪು ಪಟ್ಟಿಯಲ್ಲಿರುವ ಭಾರತ ಸೇರಿ ಬೇರೆ ದೇಶಗಳಿಗೆ ಭೇಟಿ ನೀಡಿದ್ರೆ 3 ವರ್ಷ ಪ್ರಯಾಣ ನಿಷೇಧ
ಸೌದಿ ಅರೇಬಿಯಾ : ಕೊರೊನಾ ತಡೆಗೆ ಸೌದಿ ಅರೇಬಿಯಾ ಸಾಕಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ.. ಇದರ ಭಾಗವಾಗಿ ಭಾರತ ಸೇರಿ ಅನೇಕ ದೇಶಗಳ ಜನರ ಪ್ರವೇಶ ನಿಷೇಧಿಸಿದೆ.. ಜೊತೆಗೆ ತಮ್ಮ ದೇಶದ ನಾಗರೀಕರು ಸಹ ಈ ದೇಶಗಳಿಗೆ ಪ್ರಯಾಣಿಸುವಂತಿಲ್ಲ ಎಂದು ಆದೇಶ ಹೊರಡಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾವು ರಾಜ್ಯದ ‘ಕೆಂಪು ಪಟ್ಟಿಯಲ್ಲಿರುವ’ ದೇಶಗಳಿಗೆ ಪ್ರಯಾಣಿಸುವ ನಾಗರಿಕರಿಗೆ ಮೂರು ವರ್ಷಗಳ ಪ್ರಯಾಣ ನಿಷೇಧವನ್ನು ವಿಧಿಸಲಿದೆ ಎಂದು ವರದಿಯಾಗಿದೆ..
ಅಲ್ಲದೇ 2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಮೇ ತಿಂಗಳಲ್ಲಿ ವಿದೇಶ ಪ್ರವಾಸ ಮಾಡಲು ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೆಸರು ಹೇಳಲು ಬಯಸದ ಆಂತರಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವರದಿ ಹೇಳಿದೆ. ಹೀಗಾಗಿ ಯಾರಾದರೂ ಭಾಗಿಯಾಗಿದ್ದಾರೆಂದು ಸಾಬೀತಾದರೆ ಅವರು ಹಿಂದಿರುಗಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಾರಿ ದಂಡ ವಿಧಿಸಲಾಗುತ್ತದೆ. ಮೂರು ವರ್ಷಗಳವರೆಗೆ ಪ್ರಯಾಣದಿಂದ ನಿಷೇಧಿಸಲಾಗುವುದು, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಆರಂಭವಾದ ಬಳಿಕ 2020 ರ ಮಾರ್ಚ್ ನಂತರ ಮೊದಲ ಬಾರಿಗೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ವಿದೇಶದಲ್ಲಿ ಪ್ರಯಾಣಿಸಲು ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಂಪು ಪಟ್ಟಿಯಲ್ಲಿ – ಭಾರತ ಅಫ್ಘಾನಿಸ್ತಾನ, ಬ್ರೆಜಿಲ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ಈಜಿಪ್ಟ್, ಅರ್ಜೆಂಟೀನಾ, ಇಥಿಯೋಪಿಯಾ, ಇಂಡೋನೇಷ್ಯಾ, ಲೆಬನಾನ್, ವಿಯೆಟ್ನಾಂ , ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳು ಸೇರಿವೆ. ಈ ದೇಶಗಳಿಗೆ ಪ್ರಯಾಣಿಸುವುದಾಗಲಿ , ಈ ದೇಶಗಳಿಂದ ತಮ್ಮ ದೇಶಗಳಿಗೆ ಪ್ರವೇಶುವುದುಕ್ಕೂ ಸೌದಿ ನಿಷೇಧ ಹೇರಿದೆ..
ಅಲ್ಲದೇ ನಾಗರಿಕರು ನೇರವಾಗಿ ಅಥವಾ ಬೇರೆ ದೇಶದ ಮೂಲಕ ಈ ಕೆಂಪು ಪಟ್ಟಿಯಲ್ಲಿರುವ ದೇಶಕ್ಕೆ ಪ್ರಯಾಣಿಸುವುದು ನಿಷೇಧವಾಗಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸದ ಅಥವಾ ಹೊಸ ತಳಿಗಳು ಕಂಡು ಬಂದಿರುವ ದೇಶಗಳಿಗೆ ಪ್ರಯಾಣ ನಿಷೇಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿದರು.
ಬಣ್ಣಿಸಲು ಪದಗಳಿಲ್ಲ : ಬಿ.ಎಸ್.ವೈ ಅವರನ್ನು ಕೊಂಡಾಡಿದ ನಮೋ
ದೌರ್ಜನಕ್ಕೆ ಒಳಗಾದ ಮಹಿಳೆಯರ ನೆರವಿಗಾಗಿ ಸಹಾಯವಾಣಿ..!
ಬಸವರಾಜ್ ಬೊಮ್ಮಾಯಿಗೆ ಮೋದಿ ಅಭಿನಂದನೆ