ಸೌದಿ ಅರೇಬಿಯಾ ಬದಲಿಗೆ ಅಮೆರಿಕಾದಿಂದ ಹೆಚ್ಚು ತೈಲ ಆಮದಿಗೆ ಭಾರತ ನಿರ್ಧಾರ..!
ನವದೆಹಲಿ: ಭಾರತವು ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಹೌದು ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬ ಮನವಿಯನ್ನ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ, ಒಪೆಕ್ ನಿರಾಕರಿಸಿರುವುದನ್ನ ಖಂಡಿಸಿರುವ ಭಾರತ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳ ಪಟ್ಟಿ: ಟಾಪ್ 5 ನಲ್ಲಿ ಭಾರತ..!
ಇನ್ನೂ ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ. ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡುವ ಒಪೆಕ್ ರಾಷ್ಟ್ರಗಳ ನಿರ್ಧಾರದಿಂದ ದೇಶದಲ್ಲಿ ತೈಲೋತ್ಪನ್ನಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸೌದಿ ಅರೇಬಿಯಾದಿಂದ ಮುಂದಿನ ತಿಂಗಳು ಕೂಡ ಕಚ್ಚಾ ತೈಲ ಭಾರತಕ್ಕೆ ಬರಲಿದೆ. ಮೇ ಬಳಿಕ ಸೌದಿ ಅರೇಬಿಯಾದಿಂದ ಎಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಮಾಡಬೇಕು ಎಂಬ ಬಗ್ಗೆ ನಂತರ ತೀರ್ಮಾನಿಸಲಾಗುತ್ತದೆ.