Sourav Ganguly | ರಾಜಕೀಯಕ್ಕೆ ಸೌರವ್ ಗಂಗೂಲಿ..!!
ಟೀಂ ಇಂಡಿಯಾ ಕ್ರಿಕೆಟರ್, ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಟ್ವಿಟ್ಟರ್ ವೇದಿಕೆಯಾಗಿ ಆಸಕ್ತಿದಾಯಕ ಟ್ವೀಟ್ ಮಾಡಿದ್ದಾರೆ.
ಗಂಗೂಲಿ ಟ್ವಿಟ್ಟರ್ ನಲ್ಲಿ ನೀಡಿದ ಹೇಳಿಕೆಗಳು ಅವರು ಶೀಘ್ರದಲ್ಲಿಯೇ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದಂತೆ. ಪ್ರಸ್ತುತ ದಾದಾ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2022 ವರ್ಷದೊಂದಿಗೆ ನಾ ಕ್ರಿಕೆಟ್ ಕೆರಿಯರ್ ನಲ್ಲಿ 30 ವರ್ಷಗಳು ಸಂಪೂರ್ಣಗೊಂಡಿವೆ. 1992ರಲ್ಲಿ ಕ್ರಿಕೆಟ್ ನಲ್ಲಿ ನನ್ನ ಜರ್ನಿ ಶುರುವಾಯ್ತು. ಈ ಮೂವತ್ತು ವರ್ಷ ಕ್ರಿಕೆಟ್ ನನಗೆ ಸಾಕಷ್ಟು ನೀಡಿದೆ. ನಾನು ಕ್ರಿಕೆಟ್ ಗೆ ಸಾಕಷ್ಟು ಸೇವೆ ಮಾಡಿದ್ದೇನೆ. ಮುಖ್ಯವಾಗಿ ಕ್ರಿಕೆಟ್ ಅನ್ನು ಪ್ರೀತಿಸುವ ಪ್ರತಿ ವ್ಯಕ್ತಿ ನನಗೆ ಬೆಂಬಲ ನೀಡಿದ್ದು, ನನಗೆ ತುಂಬಾ ಖುಷಿ ನೀಡಿದೆ. ಇಷ್ಟು ವರ್ಷ ನನಗೆ ಬೆಂಬಲ ನೀಡಿದ ಪ್ರತಿ ಒಬ್ಬರಿಗೂ ಧನ್ಯವಾದಗಳು. ಇನ್ನು ಈ ದಿನದೊಂದಿಗೆ ನಾನು ಹೊಸ ಜರ್ನಿಯನ್ನ ನಡೆಸಲು ಪ್ಲಾನ್ ಮಾಡುತ್ತಿದ್ದೇನೆ. ಜನರಿಗೆ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಹೊಸ ಜೀವನವನ್ನು ಆರಂಭಿಸಲು ಬಯಸುತ್ತಿರುವ ನನಗೆ ನಿಮ್ಮ ಬೆಂಬಲ ಇರಬೇಕು ಎಂದು ಸೌರವ್ ಬೆಂಬಲವಾಗಿ ನಿಂತಿದ್ದಾರೆ.
ಇನ್ನು ಸೌರವ್ ಗಂಗೂಲಿ ಶೀಘ್ರದಲ್ಲಿಯೇ ಬಿಜೆಪಿ ಪಾಳಯ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಈಗಾಗಲೇ ಸಾಕಷ್ಟು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೌರವ್ ಗಂಗೂಲಿ ಅವರನ್ನ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಹೀಗಾಗಿಯೇ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಅಲ್ಲದೇ ಗಂಗೂಲಿ ಸ್ಥಾನಕ್ಕೆ ಈಗಿನ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ಮೇ 29 ರಂದು ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಫೈನಲ್ ಪಂದ್ಯ ವೀಕ್ಷಿಸಿಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅತಿಥಿಯಾಗಿ ಆಗಮಿಸಿದ್ದರು. ಈ ಸಮಯದಲ್ಲಿ ಗಂಗೂಲಿ ಜೊತೆ ಅಮಿತ್ ಶಾ ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ ನಡೆಸಿದ್ದರಂತೆ. ಪ್ರಸ್ತುತ ಬೆಂಗಾಲ್ ನಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿಗೆ ಎದುರಾಗಿ ಗಂಗೂಲಿಯಂತಹ ವ್ಯಕ್ತಗಳು ಅವಶ್ಯಕ ಎಂದು ಬಿಜೆಪಿ ಭಾವಿಸಿದೆ. ಆದ್ರೆ ದಾದಾ ಅವರನ್ನು ರಾಜ್ಯ ರಾಜಕಾರಣಕ್ಕೆ ಸೀಮಿತ ಮಾಡುತ್ತಾರೋ ಅಥವಾ ರಾಷ್ಟ್ರ ರಾಜಕಾರಣಕ್ಕೆ ಎಳೆದುತರುತ್ತಾರೋ ಎಂಬೋದನ್ನ ಕಾದು ನೋಡಬೇಕಾಗಿದೆ.
ಅಂದಹಾಗೆ ಗಂಗೂಲಿ ತನ್ನ ಕ್ಯಾಪ್ಟನ್ಸಿಯಿಂದ ಟೀಂ ಇಂಡಿಯಾಗೆ ಹೊಸ ಚಾರ್ಮ್ ತಂದುಕೊಟ್ಟಿದ್ದರು. ಡೆರಿಂಗ್ ಅಂಡ್ ಡ್ಯಾಷಿಂಗ್ ಕ್ಯಾಪ್ಟನ್ ಆಗಿ ಹೆಸರಾಗಿದ್ದ ಗಂಗೂಲಿ, ದಾಲ್ಮಿಯಾ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಏಕಚಕ್ರಾಧಿಪತಿಯಾಗಿ ಮೆರೆದಿದ್ದರು. ಇನ್ನು 1992 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಗಂಗೂಲಿ, ಟೀಂ ಇಂಡಿಯಾ ಪರ 113 ಟೆಸ್ಟ್ ಪಂದ್ಯಗಳು, 311 ಏಕದಿನ ಪಂದ್ಯಗಳನ್ನಾಡಿದ್ದಾರೆ. ಗಂಗೂಲಿ ಕ್ಯಾಪ್ಟನ್ಸಿಯಲ್ಲಿ ಗಂಗೂಲಿ ವಿದೇಶಗಳಲ್ಲಿ 11 ಟೆಸ್ಟ್ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.