ಟೀಂ ಇಂಡಿಯಾದ ಸೌತ್ ಆಫ್ರಿಕಾ ಪ್ರವಾಸ ಫಿಕ್ಸ್
ಒಮಿಕ್ರಾನ್ ವೈರಸ್ ಭೀತಿಯಿಂದ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿತ್ತು.
ಆದರೆ ಈಗ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟನೆ ನೀಡಿದ್ದಾರೆ.
ಈಗಿರುವ ಪ್ಲಾನ್ನಂತೆಯೇ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್, 3 ಏಕದಿನ ಮತ್ತು 4 ಟಿ-20 ಪಂದ್ಯಗಳನ್ನು ಆಡಬೇಕಿತ್ತು.
ಆದರೆ ಈಗ ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಸರಣಿಗಳು ನಡೆಯಲಿವೆ. ಟಿ-20 ಸರಣಿಯನ್ನು ಮುಂದೂಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ಹೆಚ್ಚಾಗಿದೆ.
ಆದರೆ ಬಿಸಿಸಿಐ ಆಟಗಾರರನ್ನು ಬಯೋಬಬಲ್ನಲ್ಲಿ ಇಡುವ ಕಾರಣದಿಂದ ಪ್ರವಾಸಕ್ಕೆ ತೊಂದರೆ ಇಲ್ಲ ಎಂದು ತಿಳಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ನೆದರ್ಲೆಂಡ್ ಇತ್ತೀಚೆಗೆ ಒಮಿಕ್ರಾನ್ ಸೋಂಕು ಹರಡಿದ ಬಳಿಕ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು.
ಹೀಗಾಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕೂಡ ಅನಿಶ್ಚಿತತೆಯಲ್ಲಿತ್ತು. ಈಗ ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ಪ್ರವಾಸ ಖಚಿತವಾಗಿದೆ.









