ಸ್ಪೇನ್ ನಲ್ಲಿ ಹೊಸದಾಗಿ 1,61,688 ಕೋವಿಡ್ ಪ್ರಕರಣಗಳು ಪತ್ತೆ
1 min read
ವಿಶ್ವಾದ್ಯಂತ ಕೋವಿಡ್ ಆತಂಕ ದಿನೇ ದಿನೇ ಹೆಚ್ಚುತ್ತಿದೆ.. ಕೋವಿಡ್ ದೈನಂದಿನ ಕೇಸ್ ಗಳು ಹೆಚ್ಚುತ್ತಲೇ ಇರುವ ಬೆನ್ನಲ್ಲೇ ಸ್ಪೇನ್ ನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಕೋವಿಡ್ ಮಹಾಸ್ಪೋಟವಾಗಿದೆ.. ಹೊಸದಾಗಿ 1,61,688 ಪ್ರಕರಣಗಳು ವರದಿಯಾಗಿವೆ.
ಇದೇ ಅವಧಿಯಲ್ಲಿ 74 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ಈ ದೇಶದಲ್ಲಿ ಇದುವರೆಗೆ ಒಟ್ಟು 62,94,745 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 89,405 ಮಂದಿ ಮೃತಪಟ್ಟಿದ್ದಾರೆ.