ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಾಹಿತ್ಯ ಸರ್ಕಲ್:‌ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ

Namratha Rao by Namratha Rao
October 31, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸಾಹಿತ್ಯ ಸರ್ಕಲ್:‌ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ:

 

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯ ಈ ಕಾಲಘಟ್ಟದಲ್ಲಿ ಅಡಿಗರು ಬದುಕಿದ್ದರೆ ಅವರ ನಿಲುವೇನಿರುತ್ತಿತ್ತು ಎನ್ನುವ ಊಹೆಯನ್ನು ಕೆಲವರು ಮಾಡುತ್ತಿದ್ದಾರೆ. ಈ ಊಹೆಯಿಂದ ಅವರನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ತುರ್ತು ಪರಿಸ್ಥಿತಿ ಹೇರಲ್ಪಟ್ಟ ಕಾಲಕ್ಕೆ ಅಡಿಗರು ಪಕ್ಕಾ ಜನಸಂಘಿಯಾಗಿದ್ದರು. ಅವರು ತುರ್ತು ಪರಿಸ್ಥಿತಿಯ ಹೇರಿಕೆಯ ಪರವಾಗಿದ್ದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆ ಸಮಯದಲ್ಲಿ ನಾಡಿನ ತುಂಬೆಲ್ಲ ಸಂಚರಿಸಿ ಅವರು ಸಭೆಗಳನ್ನುದ್ದೇಶಿಸಿ ಘನ ಘೋರ ಭಾಷಣ ಮಾಡಿದ ದಾಖಲೆಗಳಿವೆ. ಹಾಗೆ ಪ್ರತಿ ಸಲ ಭಾಷಣ ಮಾಡುವಾಗಲೂ ಅವರನ್ನು ಬಂಧಿಸಲಾಗುತ್ತದೆ ಎಂದು ಸ್ವತಃ ಅವರು ಮತ್ತು ಅವರ ಅನುಯಾಯಿಗಳು ನಂಬಿದ್ದರು ಮತ್ತು ಅದಕ್ಕಾಗಿ ಕಾದಿದ್ದರು. ಆದರೆ ಆಗಿನ ಮುಖ್ಯ ಮಂತ್ರಿ ದೇವರಾಜ್ ಅರಸ್ ಬಹಳ ಬುದ್ಧಿವಂತಿಕೆಯಿಂದ ಅವರನ್ನು ಬಂಧಿಸಲೇ ಇಲ್ಲ. Because he was not a threat. ಇದು ಅವರಿಗೆ ಸ್ವಲ್ಪ ಮುಖಭಂಗವನ್ನೂ ಉಂಟು ಮಾಡಿತ್ತು.

 

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರು ಎನ್ನುವ ಕಾರಣವನ್ನು ಮುಂದೊಡ್ಡಿ ಅವರು ಇಂದು ಬದುಕಿದ್ದರೆ  ಮೋದಿ ಆಡಳಿತ ಜಾರಿ ಮಾಡಿದ ಈ ಅಘೋಷಿತ ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದರು ಎಂದು ಅನಿಸುವುದಿಲ್ಲ. ಆದ್ವಾನಿ ಈಗಲೂ ಬದುಕಿದ್ದಾರೆ, ಅವರೂ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಬಂಧಿಸಲ್ಪಟ್ಟು ಜೈಲು ಸೇರಿದವರು, ಆದರೆ ಇಂದಿನ ಸರಕಾರದ ವಿರುದ್ಧ ಒಂದಾದರೂ ಹೇಳಿಕೆಯನ್ನು ಅವರು ನೀಡಿದ್ದಾರೆಯೆ. ಹಾಗೆಯೇ ಅಡಿಗರೂ ಬಿಜೆಪಿಯ ಸದಸ್ಯರಾಗಿ ಚುನಾವಣೆ ಸ್ಪರ್ಧಿಸಿದವರು ನಂತರ ಅವರ ನಿಧನದವರೆಗೂ ಅದೇ ಸಿದ್ದಾಂತಕ್ಕೆ ಜೋತು ಬಿದ್ದವರು ಮತ್ತು ಅವರ ಕಾವ್ಯ ಹೆಚ್ಚು ಹೆಚ್ಚು ಬಲ ಪಂಥೀಯವಾಗುತ್ತ ಕೋಮು ಭಾವನೆಯನ್ನು ಉದ್ರೇಕಿಸುವ ‘ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ’ ದಂತಹ ಕವಿತೆಯನ್ನು ಬರೆಯುವವರೆಗೆ ಹೋಗಿ ತಲುಪಿತ್ತು. 

 

ಈ ಹಿನ್ನೆಲೆಯಲ್ಲಿ ಅಡಿಗರು ಬದುಕಿದ್ದರೆ ಇಂದಿನ ಸರಕಾರದ ವಿರುದ್ಧವಾಗಿ ಒಂದು ಮಾತನ್ನಾದರೂ ಆಡುತ್ತಿದ್ದರು ಎಂದು ಸಹ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಬೇಂದ್ರೆ ಬದುಕಿದ್ದರೆ ವಿರೋಧಿಸುತ್ತಿದ್ದರು ಎಂದೆನಿಸುತ್ತದೆ. ವಿಪರ್ಯಾಸವೆಂದರೆ ಬೇಂದ್ರೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ್ದರು. ತುರ್ತು ಪರಿಸ್ಥಿತಿ ಘೋಷಣೆ ಹಿಂದೆ ಕೋಮು ಭಾವನೆ ಉದ್ರೇಕಿಸುವ ಉದ್ದೇಶ ಇರಲಿಲ್ಲವಾಗಿತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲಾಗಲಿ ಯಾವುದೇ ಕೋಮಿನ ಧಾರ್ಮಿಕ ಚಟುವಟಿಕೆಗಳ ಮೇಲಾಗಲಿ ಯಾವ ನಿರ್ಭಂದವನ್ನು ಹೇರುವ ಉದ್ದೇಶವೂ ಇರಲಿಲ್ಲ. ಹಾಗಾಗಿ ಅದನ್ನು ಕೇವಲ ರಾಜಕೀಯ ಆಯಾಮದಲ್ಲಿ ಮಾತ್ರ ನೋಡಿದವರ ಸಂಖ್ಯೆ ಹೆಚ್ಚಿತ್ತು. ಅದೇ ಕಾರಣಕ್ಕಾಗಿ ನಂತರದ ಚುನಾವಣೆಯಲ್ಲಿ Cow belt ನ ಹೊರಗೆ ಇಂದಿರಾಗೆ ಸೋಲಾಗಿರಲಿಲ್ಲ. ಮಹರಾಷ್ಟ್ರ ಮತ್ತು ದಕ್ಷಿಣದ ಎಲ್ಲ ರಾಜ್ಯಗಳೂ ಇಂದಿರಾ ಪರವಾಗಿಯೇ Solid  ಆಗಿ ಮತ ಚಲಾಯಿಸಿದ್ದವು.

 

ಕಾರಂತರ ʻಬೆಟ್ಟದ ಜೀವ’ ಕಾದಂಬರಿ ಎನ್ನುವ ಸದಾಕಾಲದ ವಿಸ್ಮಯ: 

 

ಲಂಕೇಶರು ಅಂದಂತೆ ’ಕಾರಂತರು ತಮ್ಮ ಕಾದಂಬರಿಗಳಲ್ಲಿ ಬದುಕನ್ನು ದಾಖಲಿಸುತ್ತಲೇ ಅದನ್ನೊಂದು ಅದ್ಭುತ ಕಲಾಕೃತಿಯನ್ನಾಗಿ ಮಾಡುತ್ತಾರೆ’  ಬೆಟ್ಟದ ಜೀವ ಅವರ ಅಂತಹ  ಕೃತಿಗಳಲ್ಲಿ ಒಂದು. ಮೇಲು ನೋಟಕ್ಕೆ ಇದು ಕಗ್ಗಾಡಿನಲ್ಲಿ ಬದುಕಿದ ಒಂದು ಕುಟುಂಬದ ಜೀವನದ ದಾಖಲೆಯಂತೆ ಕಂಡು ಬಂದರೂ ಒಂಟಿತನ ಬಹಿರಂಗ ಹಾಗೂ ಅಂತರಂಗವನ್ನು ಕಾಡುವ ಪರಿಯನ್ನು ನಿರ್ವಹಿಸಿದ ರೀತಿ ಇದನ್ನು ಒಂದು ಉತ್ತಮ ಕಲಾಕೃತಿಯನ್ನಾಗಿ ಮಾಡಿದೆ.

 

 ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನ ಒಂಟಿ ಮನೆಯಲ್ಲಿ ಬದುಕುತ್ತಿರುವ ಒಂದು ವೃದ್ದ ದಂಪತಿಗಳ ಬದುಕಿನ ಕಥೆ ಇದು. ಇಂತಹ ಪ್ರದೇಶಗಳಲ್ಲಿ ಎರಡು ಮೂರು ಕಿಲೋಮೀಟರ ಅಂತರದಲ್ಲಿಯೂ ಮನುಷ್ಯರ ಇನ್ನೊಂದು ವಾಸಸ್ಥಳ ಸಿಗುವುದು ವಿರಳ. ಈಗಲೂ ಈ ಪ್ರದೇಶದಲ್ಲಿ ಇಂತಹದ್ದೇ ವಾತಾವರಣದಲ್ಲಿ ಬದುಕುತ್ತಿರುವವರನ್ನು ಅಪರೂಪಕ್ಕಾದರೂ ಕಾಣಬಹುದು. ನನ್ನ ಹತ್ತಿರದ ಸಂಬಂಧಿಯೊಬ್ಬ ಈಗಲೂ ಒಂಟಿಯಾಗಿ ಕಾಡಿನ ನಡುವಿನ ಮನೆಯಲ್ಲಿ ಕಾಲ ಕಳೆಯುತ್ತಿರುವುದನ್ನು ನಾನು ಬಲ್ಲೆ. ಹೆಂಡತಿ ಸತ್ತು ಹದಿನೈದು ವರ್ಷವಾಗಿದೆ. ಮಗ ಮತ್ತು ಮಗಳು ಬೇರೆ ಊರಿನಲ್ಲಿ ತಮ್ಮ ತಮ್ಮ ಸಂಸಾರದೊಂದಿಗೆ ಇದ್ದಾರೆ. ಒಂದೆರಡು ಮೈಲುಗಳ ಆಸುಪಾಸಿನಲ್ಲಿ ಕೇವಲ ಕಾಡು ಹೊರತಾಗಿ ಬೇರೆ ಮನೆಗಳಿಲ್ಲ. ತನಗೆ ಬಾಯಿ ತೆರೆದು ಮಾತನಾಡುವುದೇ ಮರೆತು ಹೋಗಿದೆ ಎನ್ನುತ್ತಾನೆ. ಹಾಗಾಗಿ ಅಪರೂಪಕ್ಕೊಮ್ಮೆ ನೆಂಟರ ಮನೆಗೆ ಹೋದರೆ ಏನು ಮಾತನಾಡುವುದು ಎಂದು ತೋಚದೆ ಅಲ್ಲಿಯೂ ಬಾಯಿ ಮುಚ್ಚಿ ಸುಮ್ಮನೆ ಕುಳಿತು ಬಿಡುತ್ತೇನೆ ಎಂದು ಈಗ ಕೆಲವು ವರ್ಷಗಳ ಹಿಂದೆ ಸಿಕ್ಕಾಗ ನನ್ನ ಹತ್ತಿರ ಹೇಳಿ ಕೊಂಡಿದ್ದ. ಮನುಷ್ಯರ ಮುಖ ನೋಡಲೆಂದೇ ಎರಡು ಕಿಲೋಮೀಟರ್ ದೂರದ ಊರಿಗೆ ವಾರಕ್ಕೊಮ್ಮೆ ಹೋಗಿ ಬರುತ್ತಾನಂತೆ. ನಗರದಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರವಲ್ಲ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೇ ಅವನ ಈ ಬದುಕಿನ ಸ್ಥಿತಿ ವಿಚಿತ್ರವೆನಿಸಿತು. ನಗರದಲ್ಲಿ ಜನಸಾಗರದ ಮಧ್ಯೆಯೆ ಇದ್ದು ಒಂಟಿತನ ಅನುಭವಿಸುವುದು ಮತ್ತೊಂದು ರೀತಿ. 

 

ಇರಲಿ. ಈಗ ಕಾರಂತರ ’ಬೆಟ್ಟದ ಜೀವ’ ಕಾದಂಬರಿಯ ವಿಷಯಕ್ಕೆ ಬರುವುದಾದರೆ – ಅರವತ್ತು ದಾಟಿದ ಗೋಪಾಲಯ್ಯ ಮತ್ತು ಅವನ ಹೆಂಡತಿ ಶಂಕರಿ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನಲ್ಲಿ ಅಡಿಕೆ ತೋಟ ಮಾಡಿಕೊಂಡು ಒಂಟಿ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸುತ್ತಮುತ್ತ ಆಸುಪಾಸಿನ ಎರಡು ಮೂರು ಮೈಲುಗಳ ಅಂತರದಲ್ಲಿ  ಮತ್ತೊಂದು ಮನುಷ್ಯ ವಸತಿ ಇಲ್ಲ. ನಾಲ್ಕೂ ದಿಕ್ಕಿನಲ್ಲೂ ಗುಡ್ಡ ಹತ್ತಿ ಇಳಿದು ಕಾಡು ದಾಟಿದ ಮೇಲೆಯೆ ಇನ್ನೊಂದು ಮನೆ ಗೋಚರವಾಗುವುದು. ಅಷ್ಟು ದುರ್ಗಮ ಪ್ರದೇಶ ಅದು. ಮಗಳು ಮದುವೆಯಾಗಿ ಮೊದಲ ಹೆರಿಗೆಯ ಸಮಯದಲ್ಲಿ ಖಾಯಿಲೆಯಿಂದ ಸತ್ತು ಎಷ್ಟೋ ವರ್ಷಗಳಾಗಿವೆ. ಮಗ ಕಾಲೇಜು ಶಿಕ್ಷಣ ಮುಗಿಸಿದವನು ಮನೆಗೆ ತಿರುಗಿ ಬಂದಿಲ್ಲ. ಹದಿನೈದು ವರ್ಷ ಕಳೆದಿದೆ. ಅವನು ಎಲ್ಲಿದ್ದಾನೆ ಎನ್ನುವುದು ಈ ವೃದ್ದ ತಂದೆ ತಾಯಿಗಳಿಗೆ ತಿಳಿದಿಲ್ಲ. ಈ ಕೊರಗು ಅವರನ್ನು ಪ್ರತಿ ಕ್ಷಣವೂ ಕಾಡುತ್ತಿದೆ. ಆದರೂ ಗೋಪಾಲಯ್ಯ ಜೀವನೋತ್ಸಾಹವನ್ನು ಕಳೆದು ಕೊಳ್ಳದೆ ಕೃಷಿಯಲ್ಲಿ ತೊಡಗಿಸಿಕೊಂಡು ದಿನಕ್ಕೊಂದು ಸಾಹಸ ಮೆರೆಯುತ್ತಿದ್ದಾರೆ. ಬಹು ಧೀಮಂತ ಬದುಕು ಅವರದು. ಮೇಲ್ಮೇಲೆ ಗಂಡ ಹೆಂಡತಿ ಇಬ್ಬರೂ ನವ ದಂಪತಿಗಳಂತೆ ವಿನೋದದಿಂದ ದಿನ ಕಳೆಯುತ್ತಿರುವಂತೆ ಕಂಡರೂ ಮಕ್ಕಳ ಅಗಲಿಕೆಯ ನೋವು ಪ್ರತಿ ಗಳಿಗೆಯೂ ಅವರನ್ನು ಅಂತರಂಗದಲ್ಲಿ ಕೊರೆಯುತ್ತಿರುವುದನ್ನು ಕಾರಂತರು ಚಿತ್ರಿಸಿದ ರೀತಿ ಅನನ್ಯವಾದುದು. ಬಾಹ್ಯ ಬದುಕಿನ ಒಂಟಿತನ ಬೇಸರವನ್ನಷ್ಟೇ ಉಂಟು ಮಾಡಿದರೆ ಕರುಳ ಕುಡಿಗಳ ಅಗಲಿಕೆಯಿಂದ ಉಂಟಾದ ಒಂಟಿತನದ ಆಂತರ್ಯದ ಬೇಗೆ ಎಡೆಬಿಡದೆ ಶೇಷ ಬದುಕಿನುದ್ದಕ್ಕೂ ಮನುಷ್ಯನ ಬದುಕನ್ನು ಹೈರಾಣುಗೊಳಿಸುತ್ತದೆ. ಹೀಗೆ ಅವರ ಬದುಕಿನ ಅಂತರಂಗ ಬಹಿರಂಗಗಳೆರಡನ್ನೂ ಆವರಿಸಿದ ಒಂಟಿತನದ ಕಲಾತ್ಮಕ ಅನಾವರಣವೇ ಈ ಕಾದಂಬರಿಯ ವಿಶೇಷ.

ಬೇಂದ್ರೆ ಎಂಬ ಪೊಯೆಟ್‌ ಆಫ್‌ ಪ್ಲೆಂಟಿ:

 

ಬೇಂದ್ರೆ ಬದುಕಿದ್ದರೆ ಈಗ ನೂರಿಪ್ಪತೈದು ತುಂಬುತ್ತಿತ್ತು. ಬೇಂದ್ರೆಯವರ ಬಗ್ಗೆ ಎಷ್ಟೆಲ್ಲಾ ಜನ ಎಷ್ಟೆಲ್ಲಾ ಸಂಗತಿಗಳನ್ನು ಹೇಳಿ ಆಗಿದೆ. ಹೇಳಲಿಕ್ಕೆ ಇನ್ನು ಏನೂ ಉಳಿದಿಲ್ಲ ಅಂದುಕೊಂಡಂತೆ ಮತ್ತಷ್ಟು ಹೊಸ ವಿಷಯಗಳು ಅವರ ಬಗ್ಗೆ, ಅವರ ಬರಹದ ಬಗ್ಗೆ ಹೊರಬರುತ್ತಲೇ ಇವೆ. He was a poet of plenty. ಅಲ್ಲದೆ ಅವರ ವ್ಯಕ್ತಿತ್ವದ ಬಗ್ಗೆ ಒಂದು ನಿಗೂಢತೆ ಅಂದರೆ ಅವರನ್ನು ಪೂರ್ತಿಯಾಗಿ ಅರಿಯಲು ಸಾಧ್ಯವಾಗದ ಒಂದು ಅಪರಿಚಿತ ಭಾಗ ಅವರ ದೈನಂದಿನ ವ್ಯವಹಾರಿಕ ಮಾತುಕತೆಗಳಲ್ಲಿ ನಿರಂತರವಾಗಿ ಅವರು ಬದುಕಿದಷ್ಟೂ ಕಾಲ ಹೊರಬರುತ್ತಲೇ ಇತ್ತು. ಈ ಅರ್ಥದಲ್ಲಿಯೂ He was a person of plenty. ಬೇಂದ್ರೆಯವರ ಬಗ್ಗೆ ನಮಗೆ ಎಲ್ಲ ತಿಳಿಯಿತು ಅಂದುಕೊಳ್ಳುತ್ತಿದ್ದಂತೆ ಅವರ ಒಂದು ಚತೋರೋಕ್ತಿಯೋ ಅಥವಾ ಒಂದು ಕವಿತೆಯೋ ನಾವು ಆವರೆಗೆ ಕಂಡಿರದ ಬೇಂದ್ರೆಯನ್ನು ತೋರಿಸಿ ಬೆರಗು ಮಾಡಿಬಿಡುತ್ತದೆ. ಇದು ಬೇಂದ್ರೆಯವರ ನಿಜವಾದ ಮಾಂತ್ರಿಕತೆ. ಅವರ ಈ ಮಾಂತ್ರಿಕತೆಗೆ ಮರುಳಾಗದ ಕನ್ನಡ ಓದುಗನಿರಲಿಕ್ಕಿಲ್ಲ.

 

ಅವರು ಅನೇಕ ಸಲ ಕವಿತೆಗಳನ್ನು ಕನಸಿನಲ್ಲಿ ಪಡೆದುಕೊಂಡೆ ಎನ್ನುತ್ತಾರೆ. ಇದು ಅವರ ಕವಿತೆಗಳ ಸುತ್ತಲೂ ನಾವು ಅರಿಯದ ಒಂದು ನಿಗೂಢತೆಯನ್ನು ಸೃಷ್ಟಿ ಮಾಡಿರುವುದೂ ಉಂಟು. ಕನಸು ಎಂದೆಂದೂ ನಿಗೂಢ ತಾನೆ. ಹಾಗೆಯೇ ಇನ್ನೊಂದು ಕುತೂಹಲದ ಸಂಗತಿಯೆಂದರೆ ಅವರು ತಾನು ಹಿಂದಿನ ಜನ್ಮದಲ್ಲಿ ಕವಿ ಕಾಳಿದಾಸನಾಗಿದ್ದೆ ಎಂದು ನಂಬಿದ್ದರಂತೆ. ಜಗತ್ತಿನ ಯಾವುದೇ ಭಾಷೆಯ ಅತ್ಯುತ್ತಮ ಕವಿಯ ಹೋಲಿಕೆಯಲ್ಲಿ ಸರಿಸಮನಾಗಿ ನಿಲ್ಲುವ ಬೇಂದ್ರೆ ಕನ್ನಡಕ್ಕೆ ದೊರೆತಿದ್ದು ಈ ನೆಲದ ಭಾಗ್ಯ.

 

-ಶ್ರೀಪಾದ ಹೆಗಡೆ, 

ನಿವೃತ್ತ ಬಿಎಸ್‌ಎನ್‌ಎಲ್‌ ಉದ್ಯೋಗಿ, ಸಾಹಿತ್ಯಾಸಕ್ತರು ಹಾಗೂ ಹವ್ಯಾಸಿ ಬರಹಗಾರರು, 

ಬೆಂಗಳೂರು

Tags: #saakshatvadigabiopicskaranthalifestorypoliticsspecial article
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram