ನಟಿ ಸೌಂದರ್ಯ ಅತ್ತಿಗೆಯಿಂದ ಸೌಂದರ್ಯ ಸ್ಮರಣಾರ್ಥ ವಿಶೇಷ ಚೇತನರ ಶಾಲೆ; ಅಮರ ಸೌಂದರ್ಯ ಫೌಂಡೇಷನ್ ವತಿಯಿಂದ ಭೂಮಿ ಪೂಜೆ..
ಬೆಂಗಳೂರು, ಜನವರಿ28: ಚಿತ್ರ ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಹೆಲಿಕಾಪ್ಟರ್ ದುರ್ಮರಣಕ್ಕೆ ಈಡಾಗಿ 17 ವರ್ಷಗಳು ಸಂದಿದೆ. ಏಪ್ರಿಲ್ 17, 2004 ರಂದು ನಡೆದ ಆ ದುರಂತ ಘಟನೆಯನ್ನು ಕರ್ನಾಟಕದ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ.
ಅವರ ನೆನಪನ್ನು ಸದಾ ಜೀವಂತವಾಗಿ ಇರಿಸುವ ಪ್ರಯತ್ನದ ಫಲವಾಗಿ ಅಮರನಾಥ್ ಅವರ ಪತ್ನಿ ನಿರ್ಮಲಾ ಅಮರನಾಥ್ ‘ಅಮರ ಸೌಂದರ್ಯ ಫೌಂಡೇಶನ್’ ಎಂಬ ಹೆಸರಿನಲ್ಲಿ ಶಾಲೆಯೊಂದನ್ನು ತೆರೆದಿದ್ದಾರೆ. ಈ ಶಾಲೆ ಕಲಿಕೆಯ ಸಾಮರ್ಥ್ಯವಿಲ್ಲದ ಮಕ್ಕಳು, ನಿಧಾನವಾಗಿ ಕಲಿಯುವ ಮಕ್ಕಳು ಇತ್ಯಾದಿ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಜೀವನಕ್ಕೆ ಅತ್ಯಗತ್ಯ ಪಾಠಗಳನ್ನು ಕಲಿಸಿ ಎಲ್ಲರಂತೆ ಬದುಕಲು ಸಿದ್ಧಗೊಳಿಸುವ ಉದ್ದೇಶವನ್ನು ಹೊಂದಿದೆ.
ಅಮರ ಸೌಂದರ್ಯ ಫೌಂಡೇಶನ್ ವತಿಯಿಂದ 27 ಜನವರಿ 2021 ಬುಧವಾರದಂದು ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಾಸುವೆಘಟ್ಟಹಳ್ಳಿ ಸರ್ಕಾರಿ ಶಾಲೆಯ ಸಮೀಪ ಇರುವ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿರುವ ಸ್ವಂತ ಜಮೀನಿನಲ್ಲಿ ವಿಶೇಷ ಸಾಮರ್ಥ್ಯ ಮಕ್ಕಳಿಗಾಗಿ ವಿನ್ಯಾಸಗೊಂಡ ವಸತಿ ವ್ಯವಸ್ಥೆ ಸಹಿತ ಇರುವ ನವನಾವೀನ್ಯ ಶಾಲೆಯ ಭೂಮಿ ಪೂಜೆ ನೆರವೇರಿಸಲಾಯಿತು. ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಯಲಹಂಕ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್.ಆರ್ ವಿಶ್ವನಾಥ್, ಸಾಸುವೆ ಘಟ್ಟ ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ಪ್ರಮುಖರು, ಚಲನಚಿತ್ರ ರಂಗದ ಗಣ್ಯರು ಮತ್ತು ಕರ್ನಾಟಕ ಸರ್ಕಾರದ ಗಣ್ಯ ಅಧಿಕಾರಿಗಳು ಸಮಕ್ಷಮದಲ್ಲಿ ಕಟ್ಟಡದ ಭೂಮಿ ಪೂಜೆ ಸಾಕಾರಗೊಂಡಿತು.
ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಅಮರನಾಥ್ ಮಾತನಾಡಿ 15 ವರ್ಷಗಳಿಂದ ಡಾಲರ್ಸ್ ಕಾಲೋನಿಯಲ್ಲಿ ಈ ಶಾಲೆಯನ್ನು ನಡೆಸುತ್ತಿದ್ದು, ಜಾಗದ ಕೊರತೆಯಿಂದ ಅನೇಕ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಗರದಿಂದ ತುಸು ದೂರದ ಪ್ರಶಾಂತ ವಾತಾವರಣದಲ್ಲಿ ಶಾಲೆ ಪ್ರಾರಂಭಿಸಲು ಯೋಜನೆ ರೂಪಿಸಿದ್ದೇವೆ
ನನ್ನ ನಾದಿನಿ ಖ್ಯಾತ ಚಲನಚಿತ್ರ ನಟಿ ದಿವಂಗತ ಸೌಂದರ್ಯ ಮತ್ತು ಅವರ ಅಣ್ಣ ಹಾಗೂ ನನ್ನ ಪತಿ ದಿವಂಗತ ಅಮರನಾಥ ಅವರ ಆಶಯಗಳಿಗೆ ಅನುಗುಣವಾಗಿ ಈ ಕಾರ್ಯ ಕ್ರಮ ರೂಪಿಸಲು ನನಗೆ ಸ್ಪೂರ್ತಿ ಸಿಕ್ಕಿದೆ. ನನ್ನ ಜೊತೆ ನನ್ನ ಶಾಲಾ ನಿರ್ದೇಶಕ ಮಂಡಳಿ ಈ ಕೈಂಕರ್ಯದಲ್ಲಿ ಸಕ್ರಿಯ ಪಾತ್ರ ವಹಿಸಲಿದೆ ಎಂದು ಹೇಳಿದರು.
ಶಾಲೆಯನ್ನು ₹7 ಕೋಟಿ ವೆಚ್ಚದಲ್ಲಿ ಒಂದು ವರ್ಷದೊಳಗೆ ನಿರ್ಮಿಸಲಾಗುತ್ತಿದ್ದು, ಪ್ರತಿ ಕೋಣೆಯಲ್ಲಿ ವಿಭಿನ್ನ ಆಟಿಕೆ, ಆಹಾರ ತಜ್ಞರು, ವೈದ್ಯರು ಮತ್ತು ನುರಿತ ಶಿಕ್ಷಕ ವರ್ಗವಿರಲಿದೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
— Saaksha TV (@SaakshaTv) January 27, 2021
ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿhttps://t.co/COtsY4G6S3
— Saaksha TV (@SaakshaTv) January 27, 2021