ಕೊರೊನಾ ಸೋಂಕಿಗೆ ತುತ್ತಾದ ಸರಕಾರಿ ನೌಕರರಿಗೆ ವಿಶೇಷ ರಜೆ Saaksha Tv
ಬೆಂಗಳೂರು: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಸರಕಾರಿ ನೌಕರರು ಚಿಕಿತ್ಸೆ ಪಡೆಯಲು ಸರಕಾರ ವಿಶೇಷ ಸಾಂಧರ್ಬಿಕ ರಜೆಯನ್ನು ಘೋಷಣೆ ಮಾಡಿದೆ.
ಕೊರೊನಾ ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಈ ಹಿನ್ನಲೆ ರೋಗವು ಸರಕಾರಿ ನೌಕರರಿಗು ತಗಲುತ್ತಿದ್ದು, ಚಿಕಿತ್ಸೆ ಪಡೆಯಲು ಸರಕಾರ 7 ದಿನಗಳ ವಿಶೇಷ ರಜೆಯನ್ನು ಘೋಷಣೆ ಮಾಡಿದೆ. ಹಾಗೇ ಸರಕಾರಿ ನೌಕರ ಅಥವಾ ಆತನ ಕುಟುಂಬ ಕೊರೊನಾ ಸೋಂಕಿಗೆ ತುತ್ತಾದರೆ, ಅವರು ಇದ್ದ ಪ್ರದೇಶವನ್ನು ಕಂಟೊನ್ಮೆಂಟ್ ಜೋನ್ ಎಂದು ಘೋಷಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
ಅಲ್ಲದೇ ಕಂಟೋನ್ಮಂಟ್ ಜೋನ್ ಎಂದು ಘೋಷಿಸಿದ ಪ್ರದಶದಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದ್ದರೆ, ಅಂತಹ ಪ್ರದೇಶದಲ್ಲಿ ಸರಕಾರಿ ನೌಕರ ವಾಸವಾಗಿದ್ದರೆ ಅವರಿಗು ಸಹಿತ 7 ದಿನಗಳ ವಿಶೇಷ ರಜೆಯನ್ನು ಮಂಜೂರು ಮಾಡಲಾಗಿದೆ.