ಮೋದಿಗಾಗಿ ಬಿಜೆಪಿ ಮಹಿಳಾ ಮೋರ್ಚ ಕಾರ್ಯಕರ್ತರಿಂದ ವಿಶೇಷ ಪೂಜೆ
ಮಂಡ್ಯ: ಮೊನ್ನೆ ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಪ್ಲೈಓವರ್ ಮೇಲೆ 15-20 ನಿಮಿಷ ಸಿಲುಕಿದ್ದು ಇದು ಭದ್ರತೆ ವೈಫಲ್ಯದಿಂಧ ನಡೆದಿದೆ. ಇಂದು ಈ ಕುರಿತು ಜಿಲ್ಲೆಯ ಮದ್ದೂರಿನಲ್ಲಿರುವ ಕಾಶಿವಿಶ್ವೇಶ್ವರ ದೇವಸ್ಥಾನದಲ್ಲಿ ಮದ್ದೂರು ಬಿಜೆಪಿ ಮಹಿಳಾ ಮೋರ್ಚ ಕಾರ್ಯಕರ್ತರು ಮೃತ್ಯುಂಜಯ ಜಪ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಲ್ಲದೇ ಪಂಜಾಬ್ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ನಮಗೆ ತಿಳದಿದೆ. ದೇವರ ದಯೆಯಿಂದ ಮೋದಿಯವರಿಗೆ ದೊಡ್ಡ ಅವಘಡದಿಂದ ಪಾರಾಗಿದ್ದಾರೆ. ಅವರು ನಮ್ಮ ದೇಶದ ಅಭಿವೃದ್ಧಿಗೆ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಜೊತೆ ನಾವೆಲ್ಲರೂ ಕೈ ಜೊಡಿಸಿ, ದೇಶವನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗೊಣಾ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ತಾಲೂಕು ಅಧ್ಯಕ್ಷೆ ಶ್ವೇತಾ, ಮಹಿಳಾ ಮೋರ್ಚಾ ಕಾರ್ಯದರ್ಶಿ ಮಮತಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿ ಪ್ರಾರ್ಥನೆ.