ನಾಳೆ ಅಂದ್ರೆ ಸೆ. 18 ರಂದು ಕನ್ನಡದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಷ್ನು ದಾದನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನೂ ವಿಷ್ಣುವರ್ಧನ್ ಜನ್ಮದಿನದ ಪ್ರಯುಕ್ತ ವಿಶೇಷವಾಗಿ ಹಾಡೊಂದನ್ನು ರಿಲೀಸ್ ಮಾಡಲಾಗ್ತಿದ್ದು, ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ. ಹೌದು ನಾಳೆ. ಅಂದ್ರೆ ಸೆ. 18 ರಂದು “ವಿಶ್ವಕೊಬ್ಬ ಕೋಟಿಗೊಬ್ಬ” ವಿಷ್ಣು 70 ನಾಟ್ ಔಟ್ ಎಂಬ ಶೀರ್ಷಿಕೆಯಡಿ ಹಾಡು ರಿಲೀಸ್ ಆಗಲಿದೆ.
ಮ್ಯಾಉಸಿಕ್ ಬಜಾರ್ ಅರ್ಪಿಸುತ್ತಿರುವ ಈ ವಿಶೇಷ ಹಾಡಿಗೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಂಗೀತ – ಸಾಹಿತ್ಯವಿದೆ. ಇನ್ನೂ ಈ ವಿಷ್ಣುದಾದನ ಸ್ಮರಣೆಯಲ್ಲಿ ಮೂಡಿಬಂದ ಈ ಹಾಡಿಗೆ ಹರ್ಷ ಉಪ್ಪರ್, ವಿನಯ್ , ಸಚಿನ್ ಅರಬಳ್ಳಿ ಅವರು ಧ್ವನಿಯಾಗಿದ್ದಾರೆ. ಇನ್ನೂ ದಾದನ ಬರ್ತ್ ಡೇ ಪ್ರಯುಕ್ತ ಇಂದು ಸಂಜೆ 4 ಗಂಟೆಗೆ ಸಾಹಸಸಿಂಹ ಡಾ. ವಿಷ್ಣು ವರ್ಧನ್ ಕಾಮನ್ ಡಿಪಿ ಸಹ ಲೋಕಾರ್ಪಣೆಗೊಳ್ಳಲಿದೆ.