ಕಾಂಗ್ರೆಸ್ – ಬಿಜೆಪಿಗರ ನಡುವೆ ಸ್ಟೇಜ್ ಮೇಲೆ ಹೈಡ್ರಾಮಾ..!

1 min read
Ramnagar DK Suresh Protest Saaksha Tv

ಕಾಂಗ್ರೆಸ್ – ಬಿಜೆಪಿಗರ ನಡುವೆ ಸ್ಟೇಜ್ ಮೇಲೆ ಹೈಡ್ರಾಮಾ..!

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಂಪೇಗೌಡ ಹಾಗೂ ಅಂಬೇಡ್ಕರ್ ಪುತ್ಥಳಿ ಉದ್ಘಾಟನಾ ಸಮಾರಂಭದಲ್ಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ , ಅಶ್ವಥ್ ನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಿದ್ರು..

ಈ ವೇಳೆ ಅಶ್ವಥ್ ನಾರಾಯಣ್ ಅವರು ಮಾತನಾಡುವಾಗ ಯಾರೂ ಅಭಿವೃದ್ಧಿ ಮಾಡಿಲ್ಲಾ , ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದು ಹೇಳಿದ್ರು.. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ , ಅಶ್ವಥ್ ನಾರಾಯಣ್ ಮಾತಾನಡುತ್ತಿದ್ದ ಮೈಕ್ ಬಳಿಯೇ ನೇರವಾಗಿ ಬಂದು  ಏನೆಲ್ಲಾ ಅಭಿವೃದ್ಧಿ ಮಾಡಿದ್ದೀಯಾ ಅಂತಾ ಸಚಿವರಿಗೆ ಏಕವಚನದಲ್ಲೇ ಪ್ರಶ್ನೆ ಮಾಡಿದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ  ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಎದುರು ದಲಿತ ಮುಖಂಡರು ಡಿಕೆ ಶಿವಕುಮಾರ್  ಗೆ ಜೈಕಾರ ಹಾಕುವ ಮೂಲಕ ಮತ್ತಷ್ಟು ಪರಿಸ್ಥಿತಿ ಉದ್ವಿಗ್ನಗೊಳಿಸಿದ್ರು.. ಈ  ಪ್ರಸಂಗ ಸಿಎಂ ಅವರನ್ನು ಮುಜುಗರಕ್ಕೀಡು ಮಾಡಿತು..

 

Dalita Leaders Saaksha Tv

 

ಇದೇವೇಳೆ ಸಂಸದ ಡಿಕೆ ಸುರೇಶ್ ಅವರು ,  ನೀವೂ ಅಧಿಕಾರಕ್ಕಾಗಿ ಬಂದಿದ್ದೀರಾ ನಾವೂ ಕೂಡ ಸ್ವಾಗತ ಮಾಡ್ತೇವೆ. ರೇಷ್ಮೆಗೆ ಬೆಲೆ ಬಂದಿದ್ದು ಬಿಜೆಪಿಯಿಂದಲ್ಲ. ಈ ಜಿಲ್ಲೆಗೆ ಉಸ್ತುವಾರಿ ಸಚಿವರೇ ಇಲ್ಲ. ನಿಮ್ಮ ನೋಟಿಪಿಕೇಷನ್ ತೆಗೆದು ನೋಡಿ. ರಾಜ್ಯದ ಯಾವುದೇ ಜಿಲ್ಲೆಗೂ ಉಸ್ತುವಾರಿ ಸಚಿವರ ನೇಮಕ ಮಾಡಿಲ್ಲ ಎಂದು ಕಿಡಿಕಾರಿದ್ರು.

ಅಲ್ಲದೇ ನಿಮ್ಮ ಪಕ್ಕದಲ್ಲಿ  ಕುಳಿತಿರುವವರು ಜಿಲ್ಲಾ ಉಸ್ತುವಾರಿ ಸಚಿವರು ಅಂತ ಹೇಳ್ಕೋತಿದ್ದಾರಲ್ಲ..?? , ಒಂದು ಇನ್ವಿಟೇಷನ್ ಕಳಿಸಿ‌ ಕಾರ್ಯಕ್ರಮಕ್ಕೆ ಬನ್ನಿ ಅಂತಾ ಹೇಳ್ತಾರೆ. ಅಭಿವೃದ್ಧಿ ವಿಚಾರದ ಚರ್ಚೆಗೆ ಒಂದು ಸಭೆ ಫಿಕ್ಸ್ ಮಾಡಿ. ಆರ್.ಎಸ್.ಎಸ್ ಸಂಸ್ಕೃತಿ ಇದೇನಾ ಅಂತ ಇದೇ ವೇಳೆ ಗುಡುಗಿದ್ರು..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd