ಔಷಧಿ ತಲುಪಿಸಲು ಡ್ರೋನ್ ಬಳಕೆ, ಸ್ಪೈಸ್ ಜೆಟ್ ನಿಂದ ಹೊಸ ಸೇವೆ
ಹೊಸದಿಲ್ಲಿ: ಲಸಿಕೆಗಳು, ಜೀವರಕ್ಷಕ ಔಷಧಗಳು ಮತ್ತು ಅಗತ್ಯ ವಸ್ತುಗಳನ್ನು ಸಾಗಿಸಲು ಡ್ರೋನ್ ವಿತರಣಾ ಸೇವೆಯನ್ನು ಪರಿಚಯಿಸಲು ಯೋಜಿಸಲಾಗಿದೆ ಎಂದು ಸ್ಪೈಸ್‌ಜೆಟ್ ಶನಿವಾರ ಹೇಳಿದೆ.
50 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಿದ ಉನ್ನತ-ಮಟ್ಟದ ಡ್ರೋನ್‌ಗಳಿಗಾಗಿ ಥ್ರೊಟಲ್ ಏರೋಸ್ಪೇಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಏಯೋಲಾಜಿಕ್ ಡ್ರೋನ್ ಸಾಫ್ಟ್‌ವೇರ್ ನಿರ್ವಹಣೆಯನ್ನು ಒದಗಿಸಲಿದೆ.
ಭಾರತದಲ್ಲಿ ಸರಕು ತಲುಪಿಸುವ ರೀತಿಯನ್ನ ಬದಲಾಯಿಸುವ ಸಾಮರ್ಥ್ಯವಿರುವಂತಹ 0-5 ಕೆಜಿ, 5-10 ಕೆಜಿ ಮತ್ತು 10-25 ಕೆಜಿ ಭಾರವನ್ನ ಹೊರಬಲ್ಲ ಕಸ್ಟಮೈಸ್ ಮಾಡಿದ ಡ್ರೋನ್‌ಗಳನ್ನು ಪರಿಚಯಿಸಲು ಯೋಜಿಸಿದೆ ಎಂದು ಸ್ಪೈಸ್‌ಜೆಟ್ ಹೇಳಿಕೆಯಲ್ಲಿ ತಿಳಿಸಿದೆ.
“ಸ್ಪೈಸ್‌ಎಕ್ಸ್‌ಪ್ರೆಸ್ ಕಂಪನಿ, ಲಸಿಕೆಗಳು, ಜೀವ ಉಳಿಸುವ ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗಳಿಗೆ ತಲುಪಿಸಲು ಇ ಸಾಹಸಕ್ಕೆ ಕೈ ಹಾಕಿದೆ. ಸಾಂಪ್ರದಾಯಿಕ ಸಾರಿಗೆ ವಿಧಾನಗಳಿಂದ ಎಮೆರ್ಜೆನ್ಸಿ ಸಮಯದಲ್ಲಿ ತಲುಪಲು ಕಷ್ಟವಾಗುತ್ತದೆ” ಎಂದು ಸ್ಪೈಸ್‌ಜೆಟ್ ಶನಿವಾರ ಹೇಳಿದೆ.
ತನ್ನ ಡ್ರೋನ್ ಸೇವೆಗಾಗಿ ಏರ್‌ಲೈನ್‌ನ ಆರಂಭಿಕವಾಗಿ 10 ಜಿಲ್ಲೆಗಳನ್ನು 150 ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದೆ. ಇದು ತಿಂಗಳಿಗೆ 25,000 ಕ್ಕೂ ಹೆಚ್ಚು ವಿತರಣೆಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ.
BVLOS ಪ್ರಯೋಗ ಮೌಲ್ಯಮಾಪನ ಮತ್ತು ಮಾನಿಟರಿಂಗ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಸ್ಪೈಸ್‌ಎಕ್ಸ್‌ಪ್ರೆಸ್‌ಗೆ ಮೇ 2020 ರಲ್ಲಿ ಪ್ರಾಯೋಗಿಕ BVLOS ಡ್ರೋನ್ ಪ್ರಯೋಗಗಳನ್ನು ನಡೆಸಲು ನಿಯಂತ್ರಕರಿಂದ ಔಪಚಾರಿಕ ಅನುಮತಿಯನ್ನು ನೀಡಲಾಯಿತು.