ಎಬಿ ಡಿವಿಲಿಯರ್ಸ್ ..! ಕ್ರೀಡಾಭಿಮಾನಿಗಳ ಎದೆಬಡಿತ ಹೆಚ್ಚಿಸುವ ಆಟಗಾರ. ಮೈದಾನದಲ್ಲಿ ಸಿಂಹದಂತೆ ಘರ್ಜಿಸುವ ಪ್ರಳಯಾಂತಕ.
ಆಧುನಿಕ ಕ್ರಿಕೆಟ್’ನ ಸೂಪರ್’ಸ್ಟಾರ್, ಮಿ.360. ಎಬಿಡಿ ಆರ್’ಸಿಬಿ ತಂಡದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಎಬಿಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಅನೇಕಾನೇಕ ದಾಖಲೆಗಳು ಈತನ ಬುಟ್ಟಿಯಲ್ಲಿ ಸೇರಿಕೊಂಡಿವೆ. ಈತ ಆಡದ ಆಟಗಳಿಲ್ಲ. ಮಾಡದ ದಾಖಲೆಗಳಲ್ಲಿಲ್ಲ. ಕ್ರೀಡಾ ಕ್ಷೇತ್ರವೊಂದೇ ಅಲ್ಲ ಸಂಗೀತದಲ್ಲೂ ಈತ ಪಂಟರ್. ಅಂದ್ಹಾಗೆ ಇಂದು ಎಬಿಡಿಗೆ ಹುಟ್ಟುಹಬ್ಬದ ಸಂಭ್ರಮ.
ಬ್ಯಾಟ್ ಹಿಡಿದು ಮೈದಾನಕ್ಕಿಳದರೇ ಚೆಂಡಿಗೆ ಅಷ್ಠ ದಿಕ್ಕುಗಳನ್ನು ತೋರಿಸೋ ಎಬಿಡಿ ಖದರ್ ಗೆ ಮನಸೋಲದವರೇ ಇಲ್ಲ. ಐಪಿಎಲ್ ನಲ್ಲಿ ಆರ್ ಸಿಬಿ ಪರ ಅಬ್ಬರಿಸುವ ಈ ಸೂಪರ್ ಸ್ಟಾರ್, ಆರ್ ಸಿಬಿ ಅಭಿಮಾನಿಗಳ ಪಾಲಿನ ದೇವರು. ತಂಡ ಸಂಕಷ್ಟದಲ್ಲಿದ್ದಾಗ ಅತಿ ಭಯಂಕರನಂತೆ ಘರ್ಜಿಸಿ ಗೆಲುವು ತಂದುಕೊಡುವ ಅಬ್ಬಾಸ್ ಬ್ಯಾಟಿಂಗ್, ಶಹಬ್ಬಾಸ್ ಹೇಳಲೇಬೇಕು. ಏಕದಿನ ಕ್ರಿಕೆಟ್’ನಲ್ಲಿ ಅತಿವೇಗದ ಅರ್ಧ ಶತಕ, ಶತಕ ಹಾಗೂ 150 ರನ್ ಸಿಡಿಸಿದ ಬ್ಯಾಟ್ಸ್’ಮನ್ ಎಂಬ ದಾಖಲೆ ಬರೆದಿರುವ ಎಬಿಡಿ, ಏಕದಿನ ಖಾತೆಯಲ್ಲಿ 24 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎಬಿಡಿ ಬಳಿ 21 ಶತಕಗಳಿವೆ. ಇವುಗಳಲ್ಲಿ ಗೆಲುವಿನ ಸರಾಸರಿಯೇ ಹೆಚ್ಚಿರುವುದು ವಿಶೇಷ. ಇನ್ನು ಎಬಿಡಿ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
36 ವರ್ಷಗಳಲ್ಲಿ ಮೂರು ಜನ್ಮದ ಸಾಧನೆ ಮಾಡಿರುವ ಡಿವಿಲಿಯರ್ಸ್ ಬಗ್ಗೆ 36 ದಿನ ಬರೆದರೂ ಮುಗಿಯುವುದಿಲ್ಲವೆನೋ. ಎಬಿಡಿ ಒಬ್ಬ ಕ್ರಿಕೆಟರ್ ಆಗಿ ಎಲ್ಲರಿಗೂ ಗೊತ್ತು, ಅದನ್ನು ಬಿಟ್ಟು ಅವರೊಬ್ಬ ಸೂಪರ್ ಮ್ಯಾನ್. ಅವರು ಕೇವಲ ಎಬಿಡಿ ಅಲ್ಲ ಎ ಟು ಝಡ್.
ದಕ್ಷಿಣ ಆಫ್ರಿಕಾದ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆ, ಶಾಲಾದಿನಗಳಲ್ಲಿ ಈಜುಕೋಳದಲ್ಲಿ ದಾಖಲೆ, ದಕ್ಷಿಣ ಆಫ್ರಿಕಾವನ್ನು ಬ್ಯಾಡ್ಮಿಂಟನ್ ತಂಡದಲ್ಲಿ ಪ್ರತಿನಿಧಿಸಿದ್ದು. ಡೆವಿಸ್ ಕಪ್ ಟೆನಿಸ್ ಟೀಂ ಪ್ರತಿನಿಧಿತ್ವ ಎಬಿಡಿ ಹೆಸರಲ್ಲಿದೆ. ಇನ್ನು ದಕ್ಷಿಣ ಆಫ್ರಿಕ ಪರ ದೇಶಿ ಕ್ರಿಕೆಟ್ ದಾಖಲೆಗಳಿಗೆ ಎಬಿಡಿಯೇ ವಾರಸುದಾರ.
ಒಬ್ಬನೇ ಮನುಷ್ಯ ಇಷ್ಟೊಂದು ಆಟಗಳಲ್ಲಿ ಮಹತ್ ಸಾಧನೆ ಮಾಡಲು ಸಾಧ್ಯವೇ ಎಂಬುದಕ್ಕೆ ಎಬಿಡಿ ಜೀವಂತ ಉದಾಹರಣೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ಆಡುವ ಡಿವಿಲಿಯರ್ಸ್ ನಮ್ಮ ತಂಡದಲ್ಲೂ ಇದ್ದಾರೆ ಎಂಬುದು ನಮ್ಮ ಹೆಮ್ಮೆ.
ಕ್ರೀಡಾ ಲೋಕದ ಮೆಗಾ ಸ್ಟಾರ್, ಆರ್ ಸಿಬಿಯ ಸೂಪರ್ ಸ್ಟಾರ್.. ಒನ್ ಅಂಡ್ ಓನ್ಲಿ ಎಬಿಡಿ. ಹ್ಯಾಪಿ ಬರ್ತ್ ಡೇ ಅಬ್ಬಾಸ್..
ಮಹೇಶ್ ಎಂ ದಂಡು
fifawordcup-2026: ಈತ ಬರೀ ಫುಟ್‍ಬಾಲ್ ಆಟಗಾರನಲ್ಲ.. ಸಾವಿರಾರು ಬಡ ಪ್ರತಿಭೆಗಳಿಗೆ ಬೆಳಕು ನೀಡೋ ನಂದಾದೀಪ..!
ಬಡತನ ಅವನ ಕಾಲಿಗೆ ಬೂಟ್‍ಗಳನ್ನು ಕೊಡಲಿಲ್ಲ. ಆದ್ರೆ ಹೃದಯಕ್ಕೆ ಧೈರ್ಯ ಕೊಟ್ಟಿತ್ತು. ಹಸಿವು ಆತನ ಹೊಟ್ಟೆಯನ್ನು ಸುಡುವಂತೆ ಮಾಡಿತ್ತು. ಆದ್ರೆ ಕಂಡ ಕನಸುಗಳನ್ನು ಸುಡಲಿಲ್ಲ. ಹೊಟ್ಟೆ ತುಂಬಾ...








