ರಾಜ್ಯದಲ್ಲೇ ತಯಾರಾಗಲಿದೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ
ರಾಯಚೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ.
ಇನ್ನು ಕೊರೊನಾ ಲಸಿಕಾ ಅಭಿಯಾನ ಕೂಡ ದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ಮತ್ತಷ್ಟು ವೇಗ ಕೊಡಲು ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ತಜ್ಞರ ಸಮಿತಿ ನಿನ್ನೆ ಅನುಮೋದನೆ ನೀಡಿದ ಬೆನ್ನಲ್ಲೇ ಇದೀಗ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ.
ಈ ಮಧ್ಯೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಇನ್ನು ಮುಂದೆ ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ರಾಜ್ಯದಲ್ಲಿ ಲಸಿಕೆ ಉತ್ಪಾದಿಸಲಿದೆ.
ಲಸಿಕೆಯ ಭಾರತೀಯ ಮಾರುಕಟ್ಟೆ ಭಾಗೀದಾರ ಕಂಪನಿ ಡಾ.ರೆಡ್ಡಿಸ್ ಲ್ಯಾಬೋರೇಟರಿಸ್ ಜೊತೆ ಮಾತುಕತೆ ಪೂರ್ಣಗೊಂಡಿದ್ದು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಫಾರ್ಮಾ ಕಂಪನಿ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.
ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಧಾರವಾಡದ ಯುನಿಟೆಡ್ ನಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಿದೆ.
ಧಾರವಾಡದ ಯುನಿಟ್ ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು. 100 ಮಿಲಿಯನ್ ಡೋಸ್ ತಯಾರಿಕೆ ಗುರಿಯಿಟ್ಟುಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮೊದಲ ಡೋಸ್ ಲಸಿಕೆ ತಯಾರಾಗಲಿದೆ.