ಓಯ್ ಶ್ರೀ… ಅಲ್ಲಿ ನಿನ್ನ ಗರ್ಲ್ ಫ್ರೆಂಡ್ ಇಲ್ಲ.. ಸ್ವಲ್ಪ ಈ ಕಡೆ ಬಾ.. ಧೋನಿ
ಧೋನಿಯ ನಾಯಕತ್ವವನ್ನು ಮೆಚ್ಚಲೇಬೇಕಾಗಿರುವ ವಿಚಾರದಲ್ಲಿ ಇದು ಕೂಡ ಒಂದು. ಶ್ರೀಶಾಂತ್ ನಂತಹ ಪುಂಡಾಟ-ಹುಡುಗಾಟದ ಬೌಲರ್ ನನ್ನು ಕೂಡ ಧೋನಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರು. ಆಕ್ರಮಣಕಾರಿ ಪ್ರವೃತ್ತಿಯ ಬೌಲರ್ ಆಗಿದ್ದ ಶ್ರೀಶಾಂತ್ ತನ್ನ ಶ್ರೇಷ್ಠ ಬೌಲಿಂಗ್ ಜೊತೆಗೆ ತನ್ನ ವರ್ತನೆಯಿಂದ ಕುಖ್ಯಾತಿಯನ್ನೇ ಪಡೆದುಕೊಂಡಿದ್ದರು.
ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಶ್ರೀಶಾಂತ್ ಸ್ವಲ್ಪ ಓವರ್ ಆಗಿಯೇ ವರ್ತಿಸುತ್ತಿದ್ದರು. ಮೈಮೇಲೆ ದೇವ್ವ ಬಂದಂತೆ ವರ್ತಿಸುತ್ತಿದ್ದ ಶ್ರೀಶಾಂತ್ರನ್ನು ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟ. ಅಂತಹುದ್ದರಲ್ಲಿ ಧೋನಿ ಶ್ರೀಶಾಂತ್ಗೂ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಅಷ್ಟೇ ನಂಬಿಕಸ್ಥ ಬೌಲರ್ ಕೂಡ ಆಗಿದ್ದರು. ಶ್ರೀಶಾಂತ್ ಕೂಡ ಅಷ್ಟೇ.. ಧೋನಿಯ ಮೇಲೆ ಅಪಾರವಾದ ಗೌರವ, ಪ್ರೀತಿಯನ್ನಿಟ್ಟುಕೊಂಡಿದ್ದರು.
ಅದು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ. ಅಹಮದಾಬಾದ್ನಲ್ಲಿ ಡ್ 5 ವಿಕೆಟ್ ನಷ್ಟಕ್ಕೆ 391 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಕೇನ್ ವಿಲಿಯಮ್ಸ್ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರಗ್ಯಾನ್ ಓಜ್ಹಾ ಅವರು ಬೌಲಿಂಗ್ ಮಾಡುತ್ತಿದ್ದಾಗ ಆಗ ಧೋನಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಸ್ಕ್ವೇರ್ ನಲ್ಲಿದ್ದಾಗ ಶ್ರೀಶಾಂತ್ಗೆ ಸ್ವಲ್ಪ ಮುಂದೆ ಬಾ ಅಂತ ಹೇಳಿದ್ದರು. ಆದ್ರೆ ನಾಯಕನ ಸೂಚನೆಯನ್ನು ಶ್ರೀ ಕಡೆಗಣಿಸಿದ್ದರು. ಆಗ ಶ್ರೀಶಾಂತ್ ಗೆ ಓಯ್ ಶ್ರೀ ಅಲ್ಲಿ ನಿನ್ನ ಗರ್ಲ್ ಫ್ರೆಂಡ್ ಇಲ್ಲ.. ಸ್ವಲ್ಪ ಈ ಕಡೆ ಬಾ ಎಂದು ಹೇಳಿದ್ದರು.