SRH vs GT | ಟೈಟಾನ್ಸ್ ವಿರುದ್ಧ ಆಗುತ್ತಾ “ಸನ್ರೈಸ್”..?
ಇಂಡಿಯನ್ ಪ್ರಿಮಿಯರ್ ಲೀಗ್ ನ 21ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನ ಗೆದ್ದು ಟೂರ್ನಿಯಲ್ಲಿ ಅಜೇಯ ತಂಡವಾಗಿದೆ.
ಇತ್ತ ಸತತ ಎರಡು ಸೋಲುಗಳ ಬಳಿಕ ಕೇನ್ ವಿಲಿಯಮ್ ಸನ್ ನೇತೃತ್ವದ ಹೈದರಾಬಾದ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನ ಅಭಿಯಾನವನ್ನು ಮುಂದುವರೆಸಲು ಪ್ಲಾನ್ ಮಾಡಿಕೊಂಡಿವೆ.
ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೆಸ್
ಎರಡೂ ತಂಡಗಳಿಗೆ ಹೋಲಿಕೆ ಮಾಡಿದ್ರೆ ಗುಜರಾತ್ ಟೈಟಾನ್ಸ್ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗಳಲ್ಲಿ ಹಾರ್ದಿಕ್ ಸೇನಾ ಸಾಲಿಡ್ ಆಗಿದೆ.
ಶುಭ್ಮನ್ ಗಿಲ್ ಫಾರ್ಮ್ ಅದ್ಭುತವಾಗಿ ಕಾಣುತ್ತಿದೆ. ಸಾಯಿ ಸುದರ್ಶನ್ ಹೊಸ ಭರವಸೆ ಮೂಡಿಸಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯಾ ನಂಬರ್ 4ರಲ್ಲಿ ಉತ್ತಮ ಆಟ ಆಡುತ್ತಿದ್ದಾರೆ.
ಡೇವಿಡ್ ವಿಲ್ಲರ್, ಅಭಿನವ್ ಮನೋಹರ್ ಮತ್ತು ರಾಹುಲ್ ತೆವಾಟಿಯಾ ಮ್ಯಾಚ್ ಗತಿಯನ್ನ ಬದಲಿಸಬಲ್ಲ ಆಟಗಾರರಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ವಿದೇಶಿ ಖೋಟಾದ 3ನೇ ಆಟಗಾರನಾದರೂ ಟ್ರಂಪ್ ಕಾರ್ಡ್ ಬೌಲರ್.
ಮೊಹಮ್ಮದ್ ಶಮಿ, ದರ್ಶನ್ ನಾಲ್ಕಂಡೆ ಮತ್ತು ಲೊಕಿ ಫರ್ಗ್ಯೂಸನ್ ವೇಗದ ಬೌಲಿಂಗ್ ಕೋಟಾವನ್ನು ಭರ್ತಿ ಮಾಡಲಿದ್ದಾರೆ.
ರಶೀದ್ ಖಾನ್ ಸ್ಪಿನ್ ಬೌಲಿಂಗ್ಗೆ ಸಹಾಯ ಬೇಕು ಅಂದರೆ ರಾಹುಲ್ ತವಾಟಿಯಾ ಇದ್ದಾರೆ. ಸಾಯಿ ಸುದರ್ಶನ್ ಮತ್ತು ಅಭಿನವ್ ಮನೋಹರ್ ಕೂಡ ಚೆಂಡು ತಿರುಗಿಸಬಲ್ಲರು.
ಸನ್ ರೈಸರ್ಸ್ ಹೈದ್ರಾಬಾದ್:
ಸನ್ ರೈಸರ್ಸ್ ಬ್ಯಾಟಿಂಗ್ಗಿಂತ ಬೌಲಿಂಗ್ನಲ್ಲಿ ಹೆಚ್ಚು ಬಲವಾಗಿದೆ. ಬ್ಯಾಟಿಂಗ್ನಲ್ಲಿ ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮಾ ಸಿಎಸ್ಕೆ ವಿರುದ್ಧ ಸೂಪರ್ ಆಟ ಆಡಿದ್ದಾರೆ.
ಮಾರ್ಕೋ ಜೆನ್ಸನ್, ಏಡಿಯನ್ ಮಾರ್ಕ್ ರಾಂ ಮತ್ತು ನಿಕೊಲಸ್ ಪೂರನ್ ಮಿಂಚಲೇಬೇಕಾಗಿದೆ. ರಾಹುಲ್ ತ್ರಿಪಾಠಿ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ತಂಡದ ಸಮತೋಲನ ಕಾಡಬೇಕಾಗಿದೆ. ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಉಮ್ರನ್ ಮಲಿಕ್ ತಂಡದ ವೇಗದ ಬೌಲರ್ಗಳು.
ಪಿಚ್ & ಕಂಡೀಷನ್:
ಡಿ. ವೈ. ಪಾಟೀಲ್ ಮೈದಾನ ದೊಡ್ಡ ಮೊತ್ತ ಗಳಿಸುವ ಪಿಚ್ ಆಗಿದೆ. ಆದರೆ ಆರಂಭದಲ್ಲಿ ವೇಗದ ಬೌಲರ್ಗಳಿಗೆ ಸಿಗುವ ನೆರವು ಮತ್ತು ಪಂದ್ಯದ ಕೊನೆಯ ಹಂತದಲ್ಲಿ ಬೀಳುವ ಇಬ್ಬನಿ ಪಂದ್ಯದ ರೋಚಕತೆ ಹೆಚ್ಚಿಸುತ್ತದೆ. ಹೀಗಾಗಿ ಟಾಸ್ ಮೇಲೆ ತಂಡಗಳ ಕಣ್ಣಿದೆ.