ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಆದಿನಾಥೇಶ್ವರಸ್ವಾಮಿ ದೇವಸ್ಥಾನ, ಆದ್ಯಪಾಡಿ, ದಕ್ಷಿಣ ಕನ್ನಡ‌ ಇತಿಹಾಸ ಮತ್ತು ಮಹಿಮೆ

Sri Adinatheswaraswamy Temple, Adyapadi, Dakshina Kannada History and Glory

Shwetha by Shwetha
March 16, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಕರ್ನಾಟಕ ರಾಜ್ಯದ ಪಡುವಣ ಕಡಲ ತೀರದಲ್ಲಿ ಸಸ್ಯ ಸಂಪತ್ತಿನಿಂದ ಮೆರೆಯುವ ದಕ್ಷಿಣ ಕನ್ನಡ ತೌಳ ರಾಜ್ಯ ಈ ತುಳುನಾಡು, ಆಸ್ತಿಕ ಜನಗಳು ಕೂಡಿ ಬದುಕಿ ಬಾಳುವ ನಾಡು, ದೇವರು, ದೈವಗಳು, ಗರಡಿಗಳು ತುಂಬಿರುವ ಬೀಡು, ದೇವಾಲಯ, ಭೂತಸ್ಥಾನ, ನಾಗಬನಗಳು ಕಂಗೊಳಿಸುವ ಚೆಂಗೂಡು, ಇಂತಹ ರಾಜ್ಯದಲ್ಲಿ ಶ್ರೀ ಆದಿನಾಥೇಶ್ವರ ದೇವಸ್ಥಾನವು ಮುಖ್ಯವಾದವುಗಳಲ್ಲಿ ಒಂದಾಗಿದೆ.

ಈ ಮಂದಿರವು ಮಂಗಳೂರು ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಮೂರು ಕಿಲೋಮೀಟರ್ ದೂರ ಇರುವ ಆದ್ಯಪಾಡಿ ಗ್ರಾಮದಲ್ಲಿದೆ. ಈ ದೇವಳದ ಉತ್ತರಕ್ಕೆ ದೊಡ್ಡ ಬೆಟ್ಟವಿದೆ.

Related posts

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

April 3, 2026
ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

April 3, 2026

ಕೊಡಪಾನದಲ್ಲಿ ತೆಗೆದು ಅಭಿಷೇಕ ಮಾಡಬೇಕು. “ಅಭಿಷೇಕ ಪ್ರಿಯ ಶಂಕರ” ಎಂಬಂತೆ ಎಷ್ಟು ಅಭಿಷೇಕ ಮಾಡಿದೂ ಬಾವಿಯ ನೀರು ಒತ್ತುವುದಿಲ್ಲ. ದೇವಳಯದ ಅರ್ಚಕ ವರ್ಗದವರು ಕೂಡ ಸ್ನಾನ ಮಾಡದೆ ಆ ತೀರ್ಥ ಬಾವಿಯನ್ನು ಮುಟ್ಟುವಂತಿಲ್ಲ. ಅರ್ಚಕ ವರ್ಗದವರಲ್ಲದೆ ಬಾವಿಯ ನೀರನ್ನು ಯಾರು ಮುಟ್ಟುವಂತಿಲ್ಲ. ಫಲ್ಗುಣಿ(ಗುರುಪುರ) ಹೊಳೆಯಿದೆ. ದೇವಸ್ಥಾನದ ಮುಂಭಾಗದಲ್ಲಿ ಎರಡು ಕೆರೆಗಳಿವೆ. ಇದರಲ್ಲಿ ವರ್ಷವಿಡಿ ಶುದ್ಧವಾದ ನೀರು ಹರಿದುಕೊಂಡಿರುತ್ತದೆ. ಶ್ರೀ ದೇವರ ಬಲಭಾಗದಲ್ಲಿ ಮುಂಡಿತ್ತಾಯ ಮತ್ತು ಎಡಭಾಗದಲ್ಲಿ ಕಲ್ಲಿನ ಗೋಡೆಯಂತಿರುವ ಬಂಡೆಕಲ್ಲಿನಲ್ಲಿ ರಕ್ತೇಶ್ವರಿ ದೈವವಿದೆ. ನೈರುತ್ಯ ಪಾರ್ಶ್ವದಲ್ಲಿಶ್ರೀ ಗಣಪತಿ ದೇವರ ಗುಡಿಯಿದೆ. ಈಶಾನ್ಯ ಪಾರ್ಶ್ವದಲ್ಲಿ ನಾಗ ದೇವರ ಗುಡಿಯಿದೆ. ಗರ್ಭಗುಡಿಯ ಉತ್ತರ ಭಾಗದಲ್ಲಿ ಋಷಿವನವೆಂಬ ಪ್ರಖ್ಯಾತಿಯ ಜಾಗವಿದೆ ರೂಡಿಯಲ್ಲಿ ಋಷಿವನವೆಂದು ಕರೆಯುತ್ತಾರೆ. ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ.

ಈ ಲಿಂಗದಲ್ಲಿ ಶಿವಶಕ್ತಿ, ವಿಷ್ಣುಶಕ್ತಿ, ದುರ್ಗಾಶಕ್ತಿ ಹಾಗೂ ವಿಶೇಷವಾಗಿ ನಾಗಶಕ್ತಿಯೂ ಪ್ರಬಲವಾಗಿ ಕೂಡಿದೆ ಎಂಬುದಾಗಿ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಆ ಪ್ರಯುಕ್ತ ಉತ್ಸವದ ಕೊನೆಯ ದಿವಸ ಇಲ್ಲಿ ಭಕ್ತಾದಿಗಳಿಂದ ಉರುಳುಸೇವೆ ನಡೆಯುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಶ್ರೀ ದೇವರ ಎಡಭಾಗದಲ್ಲಿ ಒಂದು ತೀರ್ಥ ಬಾವಿಯಿದೆ. ಇದು ಪ್ರಕೃತಿ ನಿರ್ಮಿತ ಬಾವಿ ಈ ಬಾವಿಯ ನೀರಿನಿಂದಲೇ ದೇವರ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ಈ ನೀರನ್ನು ಕೈಯಿಂದಲೇ

ಆದ್ಯಪಾಡಿ ಕ್ಷೇತ್ರವು ಉಬ್ಬಸ (ಅಸ್ತಮಾ) ರೋಗಿಗಳಿಗೆ ಸಂಜೀವಿನಿ ವನವಾಗಿದೆ. ಶ್ರೀ ದೇವರ ಪ್ರಸಾದ ಸೇವನೆಯಿಂದ ಅತೀ ಶ್ರೀಘ್ರವಾಗಿ ಉಬ್ಬಸ ರೋಗವು ಮಾಯವಾಗಿ ಬಿಡುತ್ತದೆ. ಸಾವಿರಾರು ಉಬ್ಬಸ ರೋಗಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈಗಲೂ ಪಡೆಯುತ್ತಾ ಇದ್ದಾರೆ. ಅದಲ್ಲದೆ ಸಂತಾಸ ಪ್ರಪ್ತಿಗಾಗಿ ಪ್ರಾರ್ಥಿಸುವ ಭಕ್ತರಿಗೆ ಸಂತಾನನ ಕರುಣಿಸುತ್ತಾನೆ. ಚಿಕ್ಕ ಮಕ್ಕಳ ಮಣ್ಣು ತಿನ್ನುವ ಚಟವಿದ್ದರೆ ಬೆಲ್ಲದ ಹರಕೆಯಿಂದ ಶಾಶ್ವತ ಚಟವನ್ನು ದೂರ ಮಾಡಿಕೊಳ್ಳಬಹುದು. ಅಲ್ಲದೆ ಆರಾದಿಸಿದರೆ ಭಕ್ತರ ಕಷ್ಟಗಳನ್ನು ದೂರ ಮಾಡುವ ಪ್ರದಾಯಕನಾಗಿದ್ದಾನೆ ಶ್ರೀ ಆದಿನಾಥೇಶ್ವರ.

ಸಾವಿರಾರು ವರ್ಷಗಳ ಹಿಂದೆ ಶ್ರೀ ದೇವರ ಸನ್ನಿಧಿಯು ಈಗ ಇರುವ ದೇವಳದ ಬಡಗು ಪಾರ್ಶ್ವದಲ್ಲಿ ಬೆಟ್ಟದ ಮೇಲಿತ್ತು ಆ ಕಾಲದಲ್ಲಿ ಈಗ ಇರುವ ಕ್ಷೇತ್ರವು ಅರಣ್ಯಮಯವಾಗಿತ್ತು. ಅರ್ಚಕರು ಹೊಳೆಯಿಂದ ನೀರು ತಂದು ಪೂಜೆಯ ಕಾರ್ಯ ನೆರವೇರಿಸುತ್ತಿದ್ದರು. ಕ್ರಮೇಣ ಅರ್ಚಕರು ವಯಸ್ಸಾದಂತೆ ನದಿಯಿಂದ ನೀರು ತಂದು ಬೆಟ್ಟವೇರಿ ಪೂಜಾ ಕಾರ್ಯಗಳನ್ನು ಮಾಡಲು ಅಶಕ್ತರಾದರು. ಇದರಿಂದ ಬಳಿಕದ ಅರ್ಚಕರು ಒಂದು ದಿನ ಪೂಜೆ ಮಾಡಿ ದೇವರ ಎದುರು ಕಂಬನಿಯಿಂದ ಈ ರೀತಿ ಪ್ರಾರ್ಥಿಸಿದರು “ಇನ್ನು ಮುಂದೆ ನಿನ್ನ ಪೂಜೆ ಮಾಡಲು ನನಗೆ ವೃದ್ಧಾಪ್ಯದ ದೆಸೆಯಿಂದ ಅಸಾಧ್ಯವಾಗಿದೆ. ಆದ್ದರಿಂದ ನೀನು ಕೃಪೆದೋರಿ ನದಿಯ ಬಳಿಯಲ್ಲಿ ಬಂದು ನಿಂತರೆ ನಿನಗೆ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಭಿಷೇಕ ಪೂಜೆ ಮಾಡುತ್ತೇನೆ” ಎಂದು ತಮ್ಮ ಮನೆಗೆ ಬಂದರು. ಅವರ ಭಕ್ತಿಯ ಪ್ರಾರ್ಥನೆಗೆ ಮೆಚ್ಚಿದ ಶ್ರೀ ದೇವರು ಸ್ವಪ್ನದಲ್ಲಿ ಮೈದೋರಿ “ನಿನ್ನ ಪ್ರಾರ್ಥನೆಯಂತೆ ನಾನು ಹೊಳೆಯ ಬದಿಗೆಬರುವೆನು. ಅದರಂತೆ ಅರ್ಚಕರು ಮಾರನೇ ದಿನ ದೇವರಿಗೆ ಅಭಿಷೇಕ ಮಾಡಿ ಹಿಂತಿರುಗಿ ಬರುವಾಗ ವಾದ್ಯ ಘೋಷಣೆಯೊಂದಿಗೆ ಬರುವ ಧ್ವನಿಯು ಕೇಳುತ್ತದೆ. ಈಗೀನ ಗರ್ಭಗುಡಿ ಇರುವ ಸ್ಥಳಕ್ಕೆ ಬಂದಾಗ ಧ್ವನಿಯು ನಿಂತಾಗ ಅರ್ಚಕರು ಹಿಂತಿರುಗಿ ನೋಡಿದರು. ಆ ಸ್ಥಳದಲ್ಲಿಯೇ ಕಲ್ಲಿನ ರೂಪದಲ್ಲಿ ಅವರು ಅದೃಶ್ಯರಾಗಿರುತ್ತಾರೆ ಎಂದು ಮಾಹಿತಿ.

ಹೀಗೆ ಕೆಲವು ವರ್ಷಗಳಾದಾಗ ಈಗಿರುವ ಕ್ಷೇತ್ರದ ಹತ್ತಿರವೇ ಒಂದು ಮುಂಡಾಲ ಜಾತಿಯ ಸಂಸಾರವು ವಾಸವಾಗಿತ್ತು. ಆ ದಂಪತಿಗಳ ಹಿರಿಮಗ ಅಪಮೃತ್ಯುವಿಗೆ ತುತ್ತಾದ. ಇದಾದ ಕೆಲವು ದಿನಗಳ ನಂತರ ಕುಕ್ಕೆ ಹಣೆಯಲು ಬೀಳಲಿಗಾಗಿ ಅಲೆಯುತ್ತಾ ಇದ್ದ ದಂಪತಿಗಳಿಗೆ ಶಿಲೆಯ ಮೇಲಿದ್ದ ಒಳ್ಳೆಯ ಬೀಳಲನ್ನು ನೋಡಿ ಕಡಿಯುತ್ತಿರುವಾಗ ಅವಳ ಕೈಯಲ್ಲಿದ್ದ ಕತ್ತಿ ಶಿಲೆ ಮೇಲೆ ತಗಲಿ ಧಾರಾಕಾರವಾಗಿ ರಕ್ತ ಬರಲು ಪ್ರಾರಂಭವಾಯಿತು. ಇದನ್ನು ನೋಡಿ ಹೆದರಿದ ಹೆಂಗಸು ತನ್ನ ಅಳಿದ ಮಗನ ಹೆಸರನ್ನು ಹಿಡಿದು “ಓ ಮಗ ಅದ್ದಾ” ಎಂಬುದಾಗಿ ಉದ್ಗಾರ ತೆಗೆದಳು. ಆದ್ದರಿಂದ ಈ ಕ್ಷೇತ್ರಕ್ಕೆ ಆದ್ಯಪಾಡಿ ಎಂದು ಹೆಸರಾಯಿತು.

ಆ ಘಟನೆಯು ನಂತರ ಮುಂಡಾಲ ಹೆಂಗಸು ಜಾಗವನ್ನು ಬಿಟ್ಟು ಈಚೆಗೆ ಬರುವಾಗ ಒಬ್ಬ ಮುನಿಯು ತಪಸ್ಸು ಮಾಡುವುದನ್ನು ನೋಡಿದಳು. ಮುನಿಯ ಬಳಿಯಲ್ಲಿ ನಡೆದ ಘಟನೆಯನ್ನು ವಿವರಿಸಿದಳು. ಆ ಕಥೆಯನ್ನು ಆಲಿಸಿದ ಋಷಿಯು ತನ್ನ ದಿವ್ಯ ದೃಷ್ಟಿಯನ್ನು ಶಿಲೆಯ ಕಡೆಗೆ ಬೀರಿದನು. ಆಗ ಶಿವನು ಅಲ್ಲಿ ಐಕ್ಯವಾಗಿರುವುದು ಅವನ ದಿವ್ಯ ದೃಷ್ಟಿಗೆ ಗೋಚರವಾಯಿತು. ತನ್ನ ತಪಸ್ಸಿಗೆ ಮೆಚ್ಚಿ ಶಿವನು ಲಿಂಗದಲ್ಲಿ ಸಾಕ್ಷಾತ್ಕಾರವಾಗಿದ್ದಾನೆಂದು ತಿಳಿದು ಅಲ್ಲಿಯೇ ಶಿವನಿಗೆ ಗರ್ಭಗುಡಿಯನ್ನು ನಿರ್ಮಾಣ ಮಾಡಿ ಆರಾಧಿಸಲು ಪ್ರಾರಂಭಿಸಿದನು. ಆ ಮುನಿಯನ್ನು ಕಣ್ವ ಮಹರ್ಷಿಗಳೆಂದು ನಂಬಿದ್ದಾರೆ. ಕ್ರಮೇಣ ಕಾಲದ ಪರಿವರ್ತನೆಯಿಂದ ತನ್ನ ತಪಸ್ಸಿಗೆ ಭಂಗಬರಬಹುದೆಂದು ಆಲೋಚಿಸಿ ಅಲ್ಲಿಯೇ ಅಜ್ಞಾತರಾಗಿ ತಪಸ್ಸನ್ನು ಮುಂದುವರಿಸಿದರೆ ಎಂಬುದಾಗಿ ವದಂತಿ. ಈ ಸ್ಥಳವನ್ನು ‘ಋಷಿವನ’ ಎಂದು ಕರೆಯಲಾಯಿತು. ಈಗಲೂ ಅಲ್ಲಿ ಮಹರ್ಷಿಗಳು ಜೀವಂತವಾಗಿದ್ದಾರೆಂದು ಜನರ ನಂಬಿಕೆ ಆ ಋಷಿವನ ಸ್ಥಳದಲ್ಲಿ ಅಗೆಯಬಾರದು. ಕಸಕಟ್ಟಿಗಳನ್ನು ಒಗೆಯಬಾರದು. ಅದನ್ನು ಶುದ್ಧವಾಗಿರಿಸಬೇಕೆಂದು, ಕ್ಷೇತ್ರದ ಅಸ್ತಿತ್ವದ ಬಗ್ಗೆ ಎಷ್ಟು ವರ್ಷವಾಯಿತೆಂದು ಹೇಳಲು ಯಾವ ಆಧಾರವೂ ಇಲ್ಲ. ಆದರೆ ಶಿಲಾಶಾಸನದ ಪ್ರಕಾರ ರಾಜಾ ವೀರಪ್ರತಾಪಸಿಂಹನ ಕಾಲದಲ್ಲಿ ದೇವಸ್ಥಾನವು ಅವನ ಆಡಳಿತದಲ್ಲಿತ್ತು ಎಂದು ಸ್ಪಷ್ಟವಾಗಿ ಹೇಳಬಹುದು. ಅಲ್ಲಿಂದ ದೇವಸ್ಥಾನದ ಆಡಳಿತವು ಚೌಟರಸರ ಆಳ್ವಿಕೆ ಒಳಪಟ್ಟಿತ್ತು. ಆ ನಂತರ ಜೈನರಸರ ಆಳ್ವಿಕೆಯಲ್ಲಿದ್ದು ಕ್ರಮೇಣ ಬ್ರಾಹ್ಮಣ ವಂಶಕ್ಕೆ ವರ್ಗಾಯಿಸಲ್ಪಟ್ಟಿತ್ತು.

ಚೌಟರಸರ ಆಳ್ವಿಕೆಯ ಕಾಲದಲ್ಲಿ ಚೌಟರಸನ ಪಟ್ಟದರಸಿಗೆ ಒಂದು ದಿನ ಉಬ್ಬಸ ರೋಗ ಪ್ರಾರಂಭವಾಯಿತು. ರಾಜವೈದ್ಯರು ಹಾಗೂ ಅನೇಕ ಊರುಗಳಿಂದ ಬಂದ ಪರಿಣತ ವೈದ್ಯರು ಶುಶ್ರೂಷೆ ಮಾಡಿದರೂ ರೋಗ ವಾಸಿಯಾಗಲಿಲ್ಲ. ಇದರಿಂದ ಬೇಸರಗೊಂಡ ರಾಣಿಯು ಜೀವನದಲ್ಲಿ ಜಿಗುಪ್ಸೆಗೊಂಡು ಭಕ್ತ್ತಿಯಿಂದ ದೇವರನ್ನು ಆರಾಧಿಸತೊಡಗಿದಳು. ಅವಳ ಭಕ್ತಿಗೆ ಮೆಚ್ಚಿ ರಾತ್ರಿ ಸ್ವಪ್ನದಲ್ಲಿ ದೇವರು ಕಾಣಿಸಿಕೊಂಡು ಆದ್ಯಪಾಡಿ ಶ್ರೀ ಆದಿನಾಥೇಶ್ವರನ ದರ್ಶನ ಮಾಡಿ ತೀರ್ಥ ಪ್ರಸಾದವನ್ನು ಸೇವಿಸಿದಲ್ಲಿ ರೋಗವು ವಾಸಿಯಾಗುವುದು ಎಂಬುದಾಗಿ ಅಭಯ ನೀಡಿದರು. ಮರುದಿನವೇ ರಾಣಿಯು ಆದಿನಾಥೇಶ್ವರ ದರ್ಶನ ಮಾಡಿ ಭಕ್ತಿಯಿಂದ ಹನ್ನೆರಡು ದಿವಸ ತೀರ್ಥಪ್ರಸಾದಗಳನ್ನು ಸೇವಿಸಿ ರೋಗದಿಂದ ಮುಕ್ತಳಾದಳು. ಇದರಿಂದ ಸಂತಸಗೊAಡ ಮಹಾರಾಣಿ ತನ್ನ ಕೊರಳಲ್ಲಿದ್ದ ತಾಳಿಬಂದಿಯನ್ನು ದೇವರಿಗೆ ಅರ್ಪಿಸಿದಳು. ಅದನ್ನು ಈಗಲೂ ಜಾತ್ರೆಯ ಸಮಯದಲ್ಲಿ ದೇವರಿಗೆ ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ. ಅನಂತರ ಮಹಾರಾಣಿ ದೇವರಲ್ಲಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಾ ಬಂದ ಭಕ್ತಾದಿಗಳ ಉಬ್ಬಸ ಕಾಯಿಲೆಯನ್ನು ತೀರ್ಥಪ್ರಸಾದದಿಂದ ಗುಣಪಡಿಸಬೇಕೆಂದು ಆದಿನಾಥೇಶ್ವರನಲ್ಲಿ ಬೇಡಿಕೊಂಡಳು. ಇವರ ಭಕ್ತಿಗೆ ಒಲಿದ ಶ್ರೀ ದೇವರು ರಾಣಿಯ ಕೋರಿಕೆಯನ್ನು ಈಡೇರಿಸಿದರು. ಅನಂತರ ನೇವಸವು ಬರೆ ತೀರ್ಥ ಪ್ರಸಾದದಿಂದ ಗುಣವಾಗುತ್ತಿದೆ. ಈಗಲೂ ನಾನಾ ಊರಿನಿಂದ ಉಬ್ಬಸ ರೋಗಿಗಳು ಬಂದು ಹರಿಕೆಯನ್ನು ಸಲ್ಲಿಸಿ ದೇವರ ಪ್ರಸಾದ ಸೇವಿಸಿ ಉಬ್ಬಸ ರೋಗದಿಂದ ಮುಕ್ತರಾಗುತ್ತಾ ಇದ್ದಾರೆ. ಬೂದುಕುಂಬಳಕಾಯಿ, ಬೆಳ್ಳಿ ಸರಿಗೆ, ಹುರಿಹಗ್ಗ, ಗಂಧದ ಕೊರಡು, ಒಳ್ಳೆಮೆಣಸು ಕಾಣಿಕೆಯಾಗಿರುತ್ತದೆ.

ವೀರ ಪ್ರತಾಪ ಸಿಂಹನು ಪ್ರತಿ ದ್ವಾದಶಿಯಂದು ಬ್ರಾಹ್ಮಣಾರಾಧನೆ ನಡೆಯಬೇಕೆಂದು ಕೆಲವು ಜಮೀನುಗಳನ್ನು ದೇವರಿಗೆ ಉಂಬಳಿ ಕೊಟ್ಟಿದ್ದಾನೆಂದು ಶಿಲಾಶಾಸನದಿಂದ ತಿಳಿದುಬರುತ್ತದೆ.

ಬ್ರಾಹ್ಮಣಾರಾಧನೆಯ ಅಡುಗೆಗೆ ಬೂದುಕುಂಬಳಕಾಯಿಯನ್ನು ಉಪಯೋಗಿಸುತ್ತಿದ್ದರು. ಹಿಂದಿನ ಕಾಲದಲ್ಲಿ ದೇವಸ್ಥಾನದ ಛಾವಣಿಯು ದಂಬೆ ಹಂಚಿನಿಂದ ರಚಿತವಾಗಿದ್ದು ಆ ಛಾವಣಿಯ ರಚನೆಗೆ ಹುರಿಹಗ್ಗವನ್ನು, ವೈಶಾಖ ಮಾಸದಲ್ಲಿ ಶ್ರೀ ದೇವರಿಗೆ ಬೆಲ್ಲದ ಪಾನಕಕ್ಕಾಗಿ ಒಳ್ಳೆಮೆಣಸನ್ನೂ, ಶ್ರೀಗಂಧವು ದೇವರ ಪೂಜಾದಿ ಕಾರ್ಯಗಳಿಗೆ ಮತ್ತು ಪ್ರಸಾದವನ್ನಾಗಿಯೂ, ಬೆಳ್ಳಿಬೆಟ್ಟದೊಡೆಯ ಶಿವನಾದುದರಿಂದ ಶಿವನಿಗೆ ಪ್ರಿಯವಾದ ಬೆಳ್ಳಿಯನ್ನು ಸರಿಗೆಯ ರೂಪದಲ್ಲಿಯೂ, ಶ್ರೀ ದೇವರ ನಿತ್ಯ ವಿನಿಯೋಗಕ್ಕೆ ಹಣದ ಅವಶ್ಯ ಇದ್ದುದರಿಂದ ಕಾಣಿಕೆ ರೂಪದಲ್ಲಿ ಹಣವನ್ನು ಉಬ್ಬಸರೋಗಿಗಳು ಹರಕೆಯ ರೂಪದಲ್ಲಿ ಒಪ್ಪಿಸುತ್ತಿದ್ದಾರೆ. ಈ ಮೇಲಿನ ಹರಕೆಗಳಲ್ಲಿ ಯಾವುದೇ ವಸ್ತುವಿನ ಕೊರತೆಯಾದರೂ ಉಬ್ಬಸರೋಗವು ಸಂಪೂರ್ಣ ಗುಣಮುಖವಾಗುವುದಿಲ್ಲವೆಂದು ತಿಳಿದು ಬರುತ್ತದೆ.

12, 13 ನೇ ಶತಮಾನಕ್ಕೆ ಸೇರಿದ್ದು 800 ವರ್ಷಗಳಾಗಿದೆ. ಉದ್ಭವ ಮೂರ್ತಿಯು ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ. ದೇವರ ದರುಶನಕ್ಕೆ ಬರುವ ಭಕ್ತರ ಉಬ್ಬಸ ಕಾಯಿಲೆ, ಅಸ್ತಮಾ ಸಂತಾನ ಭಾಗ್ಯ, ಮದುವೆ, ಮುಂತಾದ ಫಲಗಳು ಲಭಿಸುತ್ತವೆ. ದೇವಾಲಯವು ಅಭೀಷೇಕ ತೀರ್ಥ, ಗಂಧ, ಪ್ರಸಾದ ಉಬ್ಬಸ ಕಾಯಿಲೆಗೆ ವಿಶೇಷತೆಯಿಂದ ಪ್ರಸಿದ್ಧಿಯಾಗಿದೆ. ಜಾತ್ರಾ ಸಮಯದಲ್ಲಿ ನಡೆಯುವ ತುಲಾಭಾರ, ಕಂಚಿಲು ಸೇವೆ, ಶತರುದ್ರಭಿಷೇಕ, ರಂಗಪೂಜೆ ಇತ್ಯಾದಿ, ದೇವಾಲಯವು ಮಂಗಳೂರು ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಮೂರು ಕಿಲೋ ಮೀಟರ್ ದೂರ ಇರುವ ಆದ್ಯಪಾಡಿ ಗ್ರಾಮದಲ್ಲಿದೆ. ಉತ್ತರಕ್ಕೆ ದೊಡ್ಡ ಬೆಟ್ಟವಿದೆ, ದಕ್ಷಿಣಕ್ಕೆ ಫಲ್ಗುಣಿ ಹೊಳೆಯಿದೆ. ಶ್ರೀ ದೇವಾಲಯದ ಗರ್ಭಗುಡಿಯ ಎಡಭಾಗದಲ್ಲಿ ಕಲ್ಲು, ಬಂಡೆ, ಮರ, ಮಣ್ಣು, ಗುಡ್ಡದಿಂದ ಕೂಡಿದ ಋಷಿವನವೆಂಬ ಪ್ರಖ್ಯಾತಿ ಜಾಗವಿದೆ ಅದನ್ನು ಋಷಿವನವೆಂದು ಕರೆಯುತ್ತಾರೆ. ದೇವಾಲಯವು ಶಿಲಾಶಾಸನದ ಪ್ರಕಾರ ಕಾರ್ಕಳದ ರಾಜಾ ವೀರ ಪ್ರತಾಪ ಸಿಂಹನ ಕಾಲದಲ್ಲಿ ದೇವಸ್ಥಾನವು ಅವನ ಆಡಳಿತದಲ್ಲಿತ್ತು ಅಲ್ಲಿಂದ ದೇವಸ್ಥಾನವು ಚೌಟರಸರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಜೈನರಸರ ಆಲ್ವಿಕೆಯಲ್ಲಿದ್ದು ನಂತರ ಬ್ರಾಹ್ಮಣರ ಆಡಳಿತಕ್ಕೆ ಒಳಪಟ್ಟಿದೆ. ದೇವಾಲಯದ ಸಮೀಪ ಬಂಡೆಯಲ್ಲಿ ಶಾಸನಗಳಲ್ಲಿ ದೇವಾಲಯದ ಸಂಬಂಧದ ಉಲ್ಲೇಖವಿದೆ. ದೇವಾಲಯವು ಉದ್ಭವ ಮೂರ್ತಿಯಾಗಿರುತ್ತದೆ. ದೇವಾಲಯದಲ್ಲಿ ಧ್ವಜಾರೋಹಣದ ದಿನದಂದು ಕಂಚಿಲು ದೀಪ ಸೇವೆ ಎಂಬ ವಿಶೇಷ ಸೇವೆ ನಡೆಯುತ್ತದೆ. ಬಾಲಗ್ರಹ ಪೀಡಿತ ಮಕ್ಕಳಿಗೆ ಹೇಳಿಕೊಳ್ಳುವ ಹರಕೆ 7 ವರ್ಷದ ಮಕ್ಕಳಿಗೆ ಸೀಮಿತ ತುಲಾಭಾರ ಸೇವೆಯು ಭಕ್ತಾದಿಗಳು ತಮ್ಮ ಕಷ್ಟ ಪರಿಹಾರಕ್ಕೆ ವಸ್ತು ರೂಪದಲ್ಲಿ ತನ್ನಷ್ಟೆ ಬಾರದ ನೀಡುವ ಒಂದು ಸಾಂಕೇತಿಕ ಕ್ರಮಕ್ಕೆ ತುಲಾಭಾರ ಅನ್ನುತ್ತಾರೆ. ದೇವರ ಗಂಧ ಪ್ರಸಾದದ ವಿಶೇಷತೆ. ದೇವಾಲಯದಲ್ಲಿ ಜಾತ್ರಾ ಸಮಯದಂದು ಕೆರೆಯ ತೀರ್ಥ ಸ್ನಾನ ಮಾಡಿ ಉರುಳು ಸೇವೆ. ದೇವರ ತೀರ್ಥ ಪ್ರಸಾದ ಪರಿಹಾರ.

ಬಾಗಿಲು ತೆರೆಯುವ ಸಮಯ
07:00 AM IST – 02:00 PM IST

05:00 PM IST – 08:00 PM IST

ಬಾಗಿಲು ಮುಚ್ಚುವ ಸಮಯ
08:30 PM IST – 08:30 PM IST

ShareTweetSendShare
Join us on:

Related Posts

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

by Shwetha
April 3, 2026
0

ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...

ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

by Shwetha
April 3, 2026
0

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸದ್ಯ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೆ, ಈ ಸೂತಕದ ಮನೆಯಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆಗಳನ್ನು ಮಾಡುತ್ತಿರುವುದು ವಿವಾದಕ್ಕೆ...

ಶಾಂತಿ ದಲ್ಲಾಳಿಯಾಗಲು ಹೊರಟ ಪಾಕಿಸ್ತಾನಕ್ಕೆ ಕತಾರ್‌ನಿಂದ ತೀವ್ರ ಮುಖಭಂಗ: ಉಗ್ರರ ನಾಡಿಗೆ ವೀಸಾ ಬ್ಯಾನ್ ಭಾರತಕ್ಕೆ ರಾಜಮರ್ಯಾದೆ

ಶಾಂತಿ ದಲ್ಲಾಳಿಯಾಗಲು ಹೊರಟ ಪಾಕಿಸ್ತಾನಕ್ಕೆ ಕತಾರ್‌ನಿಂದ ತೀವ್ರ ಮುಖಭಂಗ: ಉಗ್ರರ ನಾಡಿಗೆ ವೀಸಾ ಬ್ಯಾನ್ ಭಾರತಕ್ಕೆ ರಾಜಮರ್ಯಾದೆ

by Shwetha
April 3, 2026
0

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಮುಖಭಂಗವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಉದ್ವಿಗ್ನತೆಯ ನಡುವೆ ಶಾಂತಿ ದಲ್ಲಾಳಿಯಂತೆ ವರ್ತಿಸಲು ಮುಂದಾದ ಪಾಕಿಸ್ತಾನಕ್ಕೆ ಪಶ್ಚಿಮ ಏಷ್ಯಾದ ಪ್ರಬಲ ರಾಷ್ಟ್ರ...

ಪೊಲೀಸರು 24 ಗಂಟೆಯೂ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

ಪೊಲೀಸರು 24 ಗಂಟೆಯೂ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

by Shwetha
April 3, 2026
0

ರಾಜ್ಯದಲ್ಲಿ ಸೈಬರ್ ಅಪರಾಧ ಸೇರಿದಂತೆ ಹಲವು ರೀತಿಯ ಅಪರಾಧಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ, ಅವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಪೊಲೀಸರನ್ನು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕೋರಮಂಗಲದಲ್ಲಿ...

ಹೃದಯವಿದ್ರಾವಕ ಘಟನೆ: 11 ತಿಂಗಳ ಮಗು ಸಾವು, ತಾಯಿಯ ಆತ್ಮಹತ್ಯೆ

ಹೃದಯವಿದ್ರಾವಕ ಘಟನೆ: 11 ತಿಂಗಳ ಮಗು ಸಾವು, ತಾಯಿಯ ಆತ್ಮಹತ್ಯೆ

by Shwetha
April 3, 2026
0

ಮನ ಕಲುಕುವ ಘಟನೆ ಬೆಂಗಳೂರು ನಗರದಲ್ಲಿ ಸಂಭವಿಸಿದೆ. ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದ್ದು, ಈ ದುಃಖವನ್ನು ಸಹಿಸಲಾರದೆ ತಾಯಿ ಆತ್ಮಹತ್ಯೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram