ನಮಸ್ತೇ ಶರಣ್ಯ ಶಿವೇ ಸಾನುಕಂಪೇ ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ |
ನಮಸ್ತೇ ಜಗದ್ವಂದ್ಯಪಾದಾರವಿಂದೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ |

ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿ ಕಟೀಲಿನ ಕ್ಷೇತ್ರವಿದ್ದು, ಇಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಈ ಪವಿತ್ರ ದೇವಾಲಯವು ನಂದಿನಿ ನದಿಯ ಮಧ್ಯದಲ್ಲಿದೆ. ಕಟೀಲು ಎಂಬ ಹೆಸರು ಎರಡು ಪದಗಳಿಂದ ಬಂದಿದೆ – ‘ಕಟಿ’ ಅಂದರೆ ಸೊಂಟ ಮತ್ತು ‘ಇಳೆ’ ಎಂದರೆ ಭೂಮಿ. ಕಟೀಲು ಎಂದರೆ ಭೂಮಿಯ ಕೇಂದ್ರ ಪ್ರದೇಶ.
ಅರುಣಾಸುರನೆಂಬ ರಾಕ್ಷಸನು ತನ್ನ ಶಕ್ತಿಯಿಂದ ಬಲವಾಗಿ ಬೆಳೆದ್ದು ಭೂಮಿಯ ಮೇಲೆ ಶಾಂತಿಗೆ ಭಂಗ ಮಾಡುತ್ತಿದ್ದನು. ಅರುಣಾಸುರನು ಎರಡು ಅಥವಾ ನಾಲ್ಕು ಕಾಲಿನ ಜೀವಿಗಳಿಂದ ಕೊಲ್ಲಲಾಗದ ವಿಶೇಷ ಶಕ್ತಿಯನ್ನು ಬ್ರಹ್ಮನಿಂದ ಪಡೆದುಕೊಂಡಿದ್ದರಿಂದ ದೇವರುಗಳು ಅಸಹಾಯಕರಾಗಿದ್ದರು. ಅರುಣಾಸುರನ ಕೆಟ್ಟ ಕೆಲಸಗಳು ನಿಯಂತ್ರಣಕ್ಕೆ ಮೀರಿ ಬೆಳೆದಾಗ, ಆದಿಶಕ್ತಿಯು ಸುಂದರ ಮಹಿಳೆಯಾಗಿ ಭೂಮಿಗೆ ಬಂದಳು, ಅವನನ್ನು ಆಮಿಷವೊಡ್ಡಿ ಅರುಣಾಸುರನನ್ನು ಕೆರಳಿಸಿ ಚೇಷ್ಟೆ ಮಾಡಿದಳು. ಕೋಪಗೊಂಡ ಅರುಣಾಸುರನು ಆದಿಶಕ್ತಿಯನ್ನು ಕೊಲ್ಲಲು ಪ್ರಯತ್ನಿಸಿದನು, ಅವಳು ಬಂಡೆಯಾಗಿ ಮಾರ್ಪಟ್ಟು. ಅರುಣಾಸುರನು ಬಂಡೆಯನ್ನು ಒಡೆಯಲು ಪ್ರಯತ್ನಿಸಿದನು, ಈ ಸಮಯದಲ್ಲಿ ದೊಡ್ಡ ದೊಡ್ಡ ಉಗ್ರ ಜೇನುನೊಣಗಳ ಸರಣಿಯು ಹೊರಹೊಮ್ಮಿ ಅವನ ಪದೇ ಪದೇ ಕುಟುಕಿ ಮರಣದವರೆಗೂ ದಾಳಿ ಮಾಡಿದವೆಂದು ಐತಿಹ್ಯವಾಗಿದೆ, ರಾಕ್ಷಸನ ಮರಣ ನಂತರ ಋಷಿಗಳು, ಸಾಧು ಸಂತರು ಭಗವತಿ ಆದಿಶಕ್ತಿಗೆ ಅಭಿಷೇಕವನ್ನು ಮಾಡಿದರು, ಅವರು ನಂತರ ನಂದಿನಿ ನದಿಯ ಮಧ್ಯದಲ್ಲಿ ಲಿಂಗದ ರೂಪದಲ್ಲಿ ಅವತರಿಸಿದ್ದು, ಇದರ ಸುತ್ತ ದುರ್ಗಾ ಪರಮೇಶ್ವರಿ ದೇವಸ್ಥಾನ ನಿರ್ಮಾಣವಾಗಿದೆ.

ಇಲ್ಲಿನ ಪ್ರಮುಖ ಆಕರ್ಷಣೆ ಮತ್ತು ವಿಶೇಷತೆಗಳು:
*ದುರ್ಗಾಪರಮೇಶ್ವರಿ ವಿಗ್ರಹವು ಉದ್ಭವಮೂರ್ತಿಯಾಗಿದೆ. ಇಲ್ಲಿ ದೇವಿಗೆ ಮೊದಲು ಎಳನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲು ದೇವಿಗೆ ಎಳನೀರು ಅರ್ಪಿಸಿ ನಂತರ ಬೇರೆ ಅಭಿಷೇಕ ಮಾಡಲಾಗುತ್ತದೆ. ದೇವಿಯ ಗರ್ಭಗುಡಿ ಯಾವಾಗಲೂ ತೇವವಾಗಿರುತ್ತದೆ. ಭಕ್ತರಿಗೆ ನೀಡುವ ಕುಂಕುಮ ಕೂಡಾ ಒದ್ದೆಯಾಗಿರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
* ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ: ಇದು ಕಟೀಲು ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿದೆ. ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದಲ್ಲಿ ಈ ದೇವಾಲಯವಿದೆ.


* ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡ. ಕಟೀಲು ಮೇಳ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಈ ಯಕ್ಷಗಾನ ತಂಡವು ಒಂದು ಪ್ರಮುಖ ‘ಹರಕೆ ಸೇವಾ’ ತಂಡವಾಗಿದೆ. ಈ ಯಕ್ಷಗಾನ ಮೇಳಕ್ಕೆ ಅದರದ್ದೆ ಆದಂತಹ ಪಾವಿತ್ರ್ಯತೆಯ ಇತಿಹಾಸ ಹೊಂದಿದೆ. ಕರಾವಳಿಯ ಗಂಡುಕಲೆ, ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕರೆದೊಯ್ಯುವ ಸಲುವಾಗಿ ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳವು ಅರ್ಥಪೂರ್ಣ ಕಾರ್ಯವನ್ನ ಮಾಡುತ್ತಿದೆ. ಇಲ್ಲಿ 6 ಯಕ್ಷಗಾನ ತಂಡಗಳಿದ್ದು – ಇದೊಂದು ದಾಖಲೆಯೇ ಆಗಿದೆ. ಇದರಲ್ಲಿ 400ಕ್ಕೂ ಹೆಚ್ಚು ರಂಗಕರ್ಮಿಗಳು – ಕಲಾವಿದರು ಹಾಗೂ ಇತರರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ

* ನಂದಿನಿ ನದಿ: ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಭಕ್ತರಿಗೆ ಪುಣ್ಯಕರವೆಂದು ನಂಬಲಾಗಿದೆ.
* ಇತರೆ ದೇವಾಲಯಗಳು: ಈ ದೇವಾಲಯದ ಆವರಣದಲ್ಲಿ ಅನೇಕ ಸಣ್ಣ ದೇವಾಲಯಗಳಿವೆ.




*ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿ ಸೇವೆ ಮಾಡಿ, ಪ್ರಸಾದ ಸೇವಿಸಿದರೆ ಬಹುತೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿದೆ ಎಂಬ ನಂಬಿಕೆ ಇದೆ.


ಇಲ್ಲಿಗೆ ಭೇಟಿ ನೀಡುವ ಸಮಯ:
* ಈ ದೇವಾಲಯವು ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ತೆರೆದಿರುತ್ತದೆ.
* ಈ ದೇವಾಲಯವು ನವರಾತ್ರಿ ಉತ್ಸವಕ್ಕೆ ಹೆಸರುವಾಸಿಯಾಗಿದೆ.
*ದೇವಸ್ಥಾನದಲ್ಲಿ ಪ್ರತಿದಿನ 2 ಬಾರಿ ಅನ್ನದಾನ ನಡೆಯುತ್ತದೆ.
ಇಲ್ಲಿಗೆ ತಲುಪುವ ಬಗೆ:
* ಕಟೀಲು ಮಂಗಳೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿದೆ.
* ಮಂಗಳೂರಿನಿಂದ ಕಟೀಲುವರೆಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿವೆ.
* ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
* ಹತ್ತಿರದ ರೈಲು ನಿಲ್ದಾಣವು ಮಂಗಳೂರು ರೈಲು ನಿಲ್ದಾಣವಾಗಿದೆ.
“ಧಾರ್ಮಿಕತೆಯ ನೆಲೆಯಾಗಿ, ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ, ಯಕ್ಷಗಾನ ಸೇವೆಗೆ ಪುನೀತಳಾಗುವ ಶ್ರೀ ಕಟೀಲು ದುರ್ಗಾಪರಮೇಶ್ವರಿಯು ಎಲ್ಲರಿಗೂ ಒಳಿತನ್ನು ಮಾಡಲಿ ”









