ಚೀನಾಗೆ ಕೊಟ್ಟಿದ್ದ ವಿಂಡ್ ಫಾರ್ಮ್ ಪ್ರಾಜೆಕ್ಟ್ ಭಾರತಕ್ಕೆ ವಹಿಸಿದ ಶ್ರೀಲಂಕಾ
ಮೂಲತಃ ಚೀನಾದ ಸಂಸ್ಥೆಗೆ ನೀಡಲಾಗಿದ್ದ ಮೂರು ವಿಂಡ್ ಫಾರ್ಮ್‌ಗಳ ಅಭಿವೃದ್ಧಿಯನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ನಿರ್ಧರಿಸಿದೆ. ಕೊಲಂಬೊದಲ್ಲಿ ಎಂಇಎ ಎಸ್ ಜೈಶಂಕರ್ ಸಮ್ಮುಖದಲ್ಲಿ ಈ ಸಂಬಂಧ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದ ನಂತರ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿ ಮೂರು ಸಣ್ಣ ದ್ವೀಪಗಳಲ್ಲಿ (ನೈನಾತೀವು, ಅನಲೈತೀವು ಮತ್ತು ಡೆಲ್ಫ್ಟ್) ನಿರ್ಮಿಸಲಿರುವ USD 12 ಮಿಲಿಯನ್ ಯೋಜನೆಯನ್ನು 2019 ರಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಯಿಂದ ಧನಸಹಾಯದೊಂದಿಗೆ ಚೀನಾದ ಸಂಸ್ಥೆಗೆ ನೀಡಲಾಯಿತು. ಭಾರತವು ತನ್ನ ಕರಾವಳಿಯ ಸಾಮೀಪ್ಯವನ್ನು ಉಲ್ಲೇಖಿಸಿ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿತ್ತು. ಕಾರಣಾಂತರಗಳಿಂದ ಕಾಮಗಾರಿ ಆರಂಭವಾಗದೇ ಯೋಜನೆಯನ್ನು ಸ್ಥಗಿತಗೊಳಿಸಬೇಕಾಯಿತು.
Sri Lanka hands over three wind farm projects to India