ತಿರುಪತಿಗೆ ಬೇಟಿಕೊಟ್ಟು ಶ್ರೀನಿವಾಸನ ದರ್ಶನ ಪಡೆದ ಶ್ರೀಲಂಕ ಪ್ರಧಾನಿ…..
ಭಾರತ ಪ್ರವಾಸದಲ್ಲಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ತಮ್ಮ ಪತ್ನಿಯೊಂದಿಗೆ ಆಂಧ್ರಪ್ರದೇಶದ ತಿರುಪತಿ ಆಗಮಿಸಿದ್ದಾರೆ. ವೆಂಕಟೇಶ್ವರನ ದರ್ಶನ ತೆಗೆದುಕೊಂಡಿದ್ದಾರೆ. ರಾಜಪಕ್ಸೆ ಅವರ ಪತ್ನಿ ಶಿರಂತಿ ಅವರೊಂದಿಗೆ ಡಿಸೆಂಬರ್ 23 ರಂದು ತಿರುಪತಿ ತಲುಪಿದ್ದರು ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಇಬ್ಬರೂ ಸಾಂಪ್ರದಾಯಿಕ ಉಡುಪು ಧರಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ರಾಜಪಕ್ಸೆ ಅವರು ಪೂಜೆಯ ಸಮಯದಲ್ಲಿ ದೇವಸ್ಥಾನಕ್ಕೆ ಹುಂಡಿಗೆ ದೇಣಿಗೆ ಸಮರ್ಪಿಸಿದರು. ರಾಜಪಕ್ಸೆ ಅವರು ಪ್ರಧಾನಿಯಾದ ನಂತರ ವೆಂಕಟೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದು ಇದು ಎರಡನೇ ಬಾರಿ. ಶ್ರೀಲಂಕಾ ಪ್ರಧಾನಿ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ನಂತರ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ಅವರು ಆತ್ಮೀಯ ಸ್ವಾಗತವನ್ನು ನೀಡಿದರು.