ಬೆಂಗಳೂರು: ಇಂದು ಶ್ರೀ ರಾಮನವಮಿ.. ಸಾಮಾನ್ಯವಾಗಿ ಪ್ರತಿ ವರ್ಷ ಈ ದಿನದಂದು ಎಲ್ಲೆಡೆ ರಾಮನವಮಿಯ ಸಂಭ್ರಮ ಮನೆ ಮಾಡಿರುತ್ತಿತ್ತು. ಆದ್ರೆ ಈ ಬಾರಿ ಕೊರೊನಾದಿಂದಾಗಿ ರಾಮನವಮಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಯಾರೂ ಹೊರಬರದೇ ಮನೆಗಳಲ್ಲೇ ರಾಮನವಮಿ ಆಚರಿಸಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಕಳಕಳಿಯ ಮನವಿ. pic.twitter.com/c1vg8RQLWU
— B.S.Yediyurappa (@BSYBJP) April 2, 2020
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯ ಕೋರಿದ್ದಾರೆ. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನಾ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಮನವಿ ಮಾಡಿದ್ದಾರೆ.








