ಶ್ರೀ ಸೂಕ್ತಿ:- ಸುಮಂಗಲಿಯರಿಗೆ ಧರ್ಮಶಾಸ್ತ್ರ –
ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು.
ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು,
ಯಾವುದೇ ಕಾರಣಕ್ಕೂ ಕಣ್ಣಲ್ಲಿ ನೀರು ಹಾಕಬಾರದು.
ಮನೆಗೆ ಬಂದ ಹೆಂಗಸರಿಗೆ ಅರಿಶಿನ, ಕುಂಕುಮ, ತಾಂಬೂಲಗಳನ್ನು ಕೊಟ್ಟೆ ಕಳಿಸಬೇಕು.
ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ ಒಡೆಯಕೂಡದು ಮತ್ತು ಒಡೆವ ಜಾಗದಲ್ಲೂ ಇರಕೂಡದು.
ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ದೀಪ ಹಚ್ಚಬಾರದು.
ಸೂರ್ಯೋದಯಕ್ಕೆ ಮುಂಚೆ ಬೀದೀ ಬಾಗಲಿಗೆ ನೀರು ಹಾಕಿ ರಂಗೋಲಿ ಇಡಬೇಕು. ಇದನ್ನು ಮನೆಯವರೇ ಮಾಡಬೇಕು. ಲಕ್ಷ್ಮಿ ಒಳಗೆ ಬರಲು ಇದು ಚಿಹ್ನೆ.
ಕೈಯಲ್ಲಿ ಯಾವಾಗಲೂ ಉಪ್ಪು,ಪಲ್ಯಗಳನ್ನು ಬಡಿಸಬಾರದು.
ಮನೆಯಲ್ಲಿ ಏನಾದರೂ ಇಲ್ಲದಿದ್ದಲ್ಲಿ, ತುಂಬಿದೆ ಎಂದು ಹೇಳಬೇಕು. ಇಲ್ಲ ಎಂದು ಹೇಳಬಾರದು.
ದಿಂಬಿನ ಮೇಲೆ ಕೂರಬಾರದು.
ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು ಅದೇ ರೀತಿ ಅವರು ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಎಂದು ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಕಾಫಿ ಕೊಟ್ಟು ತುಂಬಾ ಅತಿಥಿ ಮರ್ಯಾದೆಗಳನ್ನು ಮಾಡುತ್ತಿದ್ದಾರೆ. ಪರೋಕ್ಷವಾಗಿ ನಾವು ಅಶುಭವನ್ನು ಕೋರಿಕೊಳ್ಳಲು ಇದು ನಾಂದಿ ಆಗುತ್ತದೆ.
ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು.
ಮನೆಯ ಅಕ್ಕ-ತಂಗಿಯರಿಗೆ ವಷ೯ಕ್ಕೊಮ್ಮೆಯಾದರೂ ತವರಿಗೆ ಕರೆಸಿ ಅರಿಸಿನ ಕುಂಕುಮ. ಫಲ ತಾಂಬೂಲದ ಜೊತೆಗೆ ಹಣ ಅಥವಾ ಒಡವೆಗಳನ್ನು ಕೊಟ್ಟು ಹರಸಿದರೆ ಮನೆತನ ತುಂಬ ಎತ್ತರಕ್ಕೆ ಬೆಳೆಯುತ್ತದೆ.
ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.
ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ.
ಉಪ್ಪು, ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ.
ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಕಾಗೆಗೆ ದನಗಳಿಗೆ ನಾವು ಊಟ ಮಾಡುವ ಮುನ್ನ, ನಾಯಿ, ಬೆಕ್ಕಿಗೆ ಊಟ ಮಾಡಿದ ಬಳಿಕ ಅನ್ನ ಇಡಿ.
ಒಡೆದ ತೆಂಗಿನ ಕಾಯಿ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು.
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿಕಾಲಿನಲ್ಲಿ ನಿಲ್ಲುವುದು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ.
ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು.
ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.
ಯಾವಾಗಲೂ ನಮ್ಮ ಬಾಯಲ್ಲಿ ಪೀಡೆ, ದರಿದ್ರ, ಶನಿ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು.
ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ. ಹತ್ತು ದಿನಗಳಿಗೆ ಒಮ್ಮೆ ಮಂಗಳ ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು
ಶ್ರಾದ್ಧ ದಿನಗದಂದು ಮನೆಯ ಮುಂದೆ ರಂಗೋಲಿ ಹಾಕಬಾರದು.
ದಿಂಬಿನ ಕವರ್, ಬೆಡ್ ಶೀಟ್‌ಗಳನ್ನು ಆಗಾಗ ಒಗೆಯುತ್ತಿರಬೇಕು. ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮಿ ಕ್ರಿಮಿಗಳು ಸಾಕಷ್ಟು ಇರುತ್ತವೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ.
ಒಳ್ಳೆಯ ಕೆಲಸಗಳನ್ನು ಶುಕ್ಲಪಕ್ಷದಿಂದ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು.
ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು.
ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ. – ಧರ್ಮಶಾಸ್ತ್ರ
ಕೃಷ್ಣಾರ್ಪಣಮಸ್ತು