ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಬಂಗಾರು ತಿರುಪತಿ, ಕೋಲಾರ ಇತಿಹಾಸ ಮತ್ತು ಮಹಿಮೆ

Sri Venkataramana Swamy Temple, Golden Tirupati, History and Glory of Kolar

Shwetha by Shwetha
April 8, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಬಂಗಾರು ತಿರುಪತಿ ಎಂದು ಪ್ರಸಿದ್ಧವಾಗಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಟ್ಟಹಳ್ಳಿಯಲ್ಲಿದೆ. ಈ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ.

ಅನಾದಿ ಕಾಲದಿಂದಲೂ ಪುರಾಣ ಪ್ರಸಿದ್ದವಾಗಿರುವ ಮಂಗಳ ದಿವ್ಯಧಾಮ ಹಸಿರು ಗಿಡ ಮರಗಳ ಗುಡ್ಡಬೆಟ್ಟಗಳ ನಡುವೆ ಪಾಲಾರ್ ನದಿಯ ತೀರದಲ್ಲಿ ಸಸ್ಯ ಶ್ಯಾಮಲವಾಗಿ ನೋಡುಗರ ಕಣ್ಣು ಸೆಳೆಯುವ, ಮನಸ್ಸಿಗೆ ಆಹ್ಲಾದಕರ ಮನೋಭಾವವನ್ನು ತುಂಬುವ ಸೂರ್ಯಾಸ್ತ ಸಮಯದಲ್ಲಿ ಸಹಸ್ರಾರು ಶ್ವೇತ ಪಕ್ಷಿಗಳ ವಿಹಂಗಮ ನೋಟ ವೀಕ್ಷಕರ ಮನಸ್ಸಿಗೆ ಆನಂದವನ್ನು ತರುವ ನೂರೆಂಟು ದಿವ್ಯ ತಿರುಪತಿಗಳಲ್ಲಿ ಒಂದು ಕ್ಷೇತ್ರವಾಗಿ ರಾರಾಜಿಸುತ್ತಿರುವ ಭೃಗು ಮಹರ್ಷಿಗಳ ತಪೋಭೂಮಿಯಾಗಿ ಅನೇಕ ಭಕ್ತರ ಮನೋಭೀಷ್ಠವನ್ನು ಈಡೇರಿಸುವ ಪುಣ್ಯ ಕ್ಷೇತ್ರವಾಗಿ ವೈಖಾನಸ ಆಗಮ ಶಾಸ್ತ್ರ ಮತ್ತು ಸಂಪ್ರದಾಯದಂತೆ ನಿತ್ಯ ಪೂಜಾದಿಗಳು ನಡೆಯುತ್ತಿದ್ದು, ಪ್ರಖ್ಯಾತಿ ಗಳಿಸಿದ ಈ ಕ್ಷೇತ್ರ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆ ಕೆ.ಜಿ.ಎಫ್.ತಾಲ್ಲೂಕು ಬೇತಮಂಗಲ ಹೋಬಳಿಯ ಬಂಗಾರುತಿರುಪತಿ (ಗುಟ್ಟಹಳ್ಳಿ)ಯಲ್ಲಿ ಬಂಗಾರುಗಿರಿ ವಾಸನಾಗಿ ಶ್ರೀ ವೆಂಕಟೇಶ್ವರನು ಭಕ್ತರಿಗೆ ದರ್ಶನವನ್ನು ನೀಡುತ್ತಿರುತ್ತಾನೆ.

Related posts

ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ‘ನಡೆಸು ಬೆಳಕೆ..’ ಹಾಡು ಬಿಡುಗಡೆ: ಸಿದ್ ಶ್ರೀರಾಮ್ ಧ್ವನಿಗೆ ಮನಸೋತ ಸಿನಿಪ್ರಿಯರು

November 25, 2026
agroforestry-training-for-farmers-mandya-darshan-puttannaiah-puttannaiah-foundation-say-trees

ರೈತರಿಗೆ ಆಗ್ರೋ ಫಾರೆಸ್ಟ್ರಿ ತರಬೇತಿ – ಪರಿಸರ ಸಂರಕ್ಷಣೆ ಜೊತೆಗೆ ಆದಾಯ ವೃದ್ಧಿಯ ಗುರಿ –  ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

November 25, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

!!ಕೃತೌ ನಾರಸಿಂಹಶ್ಚ ತ್ರೇತಾ ರಘುನಾಯಕಃ ದ್ವಾಪರೇ ವಾಸುದೇವಶ್ಚ ಕಲೌ ವೇಂಕಟನಾಯಕಃ!!

ಅಖಂಡ ಭರತ ಭೂಮಂಡಲದಲ್ಲಿ ಎಷ್ಟೇ ಪುಣ್ಯ ಕ್ಷೇತ್ರಗಳಿದ್ದರೂ ಕಲಿಯುಗದಲ್ಲಿ ವೆಂಕಟೇಶ್ವರನೇ ಪ್ರತ್ಯಕ್ಷ ದೈವ ಅನೇಕ ಕುಟುಂಬಗಳಿಗೆ ಆರಾಧ್ಯ ದೈವನಾಗಿ ಈ ಕ್ಷೇತ್ರದಲ್ಲಿ ಶ್ರೀ ಶ್ರೀನಿವಾಸನು ಭಕ್ತರ ಅಭೀಷ್ಠ ವರಪ್ರದನಾಗಿ ನೆಲೆಸಿರುತ್ತಾನೆ.

ಕ್ಷೇತ್ರ ಮಹಿಮೆ:- ಈಕ್ಷೇತ್ರದಲ್ಲಿ ಶ್ರೀವೆಂಕಟೇಶ್ವರನು ಸ್ವಯಂಭು(ಉದ್ಬವಮೂರ್ತಿ)ಯಾಗಿ ಅವತರಿಸಿ ಭೃಗು ಮಹರ್ಷಿಯವರಿಗೆ ಮೋಕ್ಷವನ್ನು ನೀಡಿರುವ ಕ್ಷೇತ್ರವಾಗಿರುತ್ತೆ ವೆಂಕಟಾಚಲಾ ಮಹಾತ್ಮೆಯಲ್ಲಿ ತಿಳಿಸಿರುವಂತೆ ಭೃಗು ಮಹರ್ಷಿಯು ತ್ರಿಮೂರ್ತಿಗಳನ್ನು ಪರೀಕ್ಷಿಸಲು ನಿಶ್ಚಯ ಮಾಡಿ ಮೊದಲು ಬ್ರಹ್ಮ ಲೋಕಕ್ಕೆ ಹೋಗಿ ವಾಣೀಸಮೇತನಾಗಿ ಇರುವ ಬ್ರಹ್ಮನನ್ನು ಕಂಡು ಕುಪಿತನಾಗಿ ಬ್ರಹ್ಮನಿಗೆ ಲೋಕದಲ್ಲಿ ಪೂಜೆಯೇ ಇಲ್ಲದಂತೆ ಶಾಪ ಕೊಟ್ಟು ನಂತರ ಅಲ್ಲಿಂದ ಕೈಲಾಸಕ್ಕೆ ತೆರಳಿ ಪಾರ್ವತಿಯೊಡನೆ ಸಲ್ಲಾಪದಲ್ಲಿರುವ ಪರಮೇಶ್ವರನನ್ನು ಕಂಡು ಕೋಪೋದ್ರಿಕ್ತನಾಗಿ ಶಿವನಿಗೆ ಲಿಂಗರೂಪಿಯಾಗೆಂದು ಶಾಪವನ್ನು ನೀಡಿ ನಂತರ ಶ್ರೀ ವೈಕುಂಠಕ್ಕೆ ತೆರಳಿ ಅಲ್ಲಿ ಕ್ಷೀರ ಸಾಗರದಲ್ಲಿ ಶೇಷಶಯನನಾಗಿ ಯೋಗ ನಿದ್ರೆಯಲ್ಲಿರುವ ಶ್ರೀಮಹಾವಿಷ್ಣುವನ್ನು ಕಂಡು ಅತ್ಯುಗ್ರನಾಗಿ ಭೃಗು ಮಹರ್ಷಿಯು ಶ್ರೀಮಹಾವಿಷ್ಣುವಿನ ಲಕ್ಷೀನಿವಾಸವಾಗಿರುವ ವಕ್ಷಸ್ಥಳಕ್ಕೆ ತನ್ನ ಪಾದದಿಂದ ಒದೆಯಲು, ಆಗ ಎಲ್ಲವನ್ನು ತಿಳಿದಂತಹ ಶ್ರೀಮಹಾವಿಷ್ಣುವು ಶಾಂತಚಿತ್ತದಿಂದಲೆ ಮಹರ್ಷಿಯನ್ನು ಆದಿಶೇಷನ ಮೇಲೆ ಕುಳ್ಳಿರಿಸಿ ಪಾದ ಸೇವೆಯನ್ನು ಮಾಡಿ ಆತನ ಪಾದದಲ್ಲಿರುವ ಜ್ಞಾನ ನೇತ್ರವನ್ನು ತೆಗೆಯಲು ಆಗ ತನ್ನ ತಪ್ಪನ್ನು ಅರಿತ ಭೃಗು ಮಹರ್ಷಿಯು ಸ್ವಾಮಿಯನ್ನು ಕುರಿತು, ಜಗತ್ ಸೃಷ್ಟಿಕರ್ತನು ಮಹಾನುಭಾವನು ಆಗಿರುವ ನಿನ್ನ ವಕ್ಷಸ್ಥಳಕ್ಕೆ ಒದ್ದಿದ್ದರಿಂದ ನನಗೆ ಮಹಾ ಪಾಪ ಸಂಭವಿಸಿದೆ ನನ್ನ ಪಾಪಗಳನ್ನು ಪ್ರಕ್ಷಾಳನೆ(ತೊಳೆದು) ಮಾಡಿ ನನಗೆ ಮೋಕ್ಷವನ್ನು ನೀಡಬೇಕೆಂದು ಪ್ರಾರ್ಥಿಸಲು, ಆಗ ಸ್ವಾಮಿಯ ಭೃಗು ಮಹರ್ಷಿಯನ್ನು ಕುರಿತು ನೀನು ಕಲಿಯುಗಾರಂಭದಲ್ಲಿ ಭೂಪ್ರದಕ್ಷಿಣೆಯನ್ನು ಮಾಡಿ ಶೇಷಾಚಲ ಪರ್ವತ(ಬಂಗಾರುಗಿರಿ)ವೆಂಬ ಸ್ಥಳದಲ್ಲಿ ತಪಸ್ಸನ್ನಾಚರಿಸು, ನಾನು ನಿನಗೆ ಜ್ಞಾನನೇತ್ರದ ಮೂಲಕ ನಿನಗೆ ಮೋಕ್ಷವನ್ನು ನೀಡುತ್ತೇನೆಂದು ಅಭಯವನ್ನು ನೀಡುತ್ತಾನೆ. ಆಗ ಭೃಗು ಮಹರ್ಷಿ ಭೂಪ್ರದಕ್ಷಿಣೆಯನ್ನು ಮಾಡಿ ಶೇಷಾಚಲ (ಬಂಗಾರುತಿರುಪತಿ) ಪರ್ವತದಲ್ಲಿ ತಪಸ್ಸನ್ನಾಚರಿಸಿದನು ಕಲಿಯುಗದಲ್ಲಿ ಶ್ರೀಮಹಾವಿಷ್ಣುವು ಶ್ರೀನಿವಾಸನಾಗಿ ಅವತರಿಸಿ ಭೃಗು ಮಹರ್ಷಿಗೆ ಜ್ಞಾನ ನೇತ್ರದ ಮುಖಾಂತರ ದರ್ಶನ ನೀಡಿ ಮೋಕ್ಷವನ್ನು ನೀಡುತ್ತಾನೆ ಆದ ಕಾರಣ ಈ ಕ್ಷೇತ್ರವು ಇಂದಿಗೂ ಭೃಗು ನೇತ್ರ ದರ್ಶನವೆಂದೇ ಪ್ರತೀತಿ ಇಲ್ಲಿ ಸ್ವಾಮಿಯನ್ನು

ಭೃಗುಮಹರ್ಷಿ ನೋಡಿದಂತೆಯೇ ಭಕ್ತರು ನೋಡುವುದು ಇಲ್ಲಿನ ವಿಶೇಷ. ಇಲ್ಲಿನ ಭೃಗು ಕಿಂಡಿ ಆರು ರಂಧ್ರಗಳಿಂದ ಕೂಡಿದ್ದು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಆರು ಗುಣಗಳಿಂದ ಕೂಡಿರುತ್ತದೆ. ದೈವ ದರ್ಶನವನ್ನು ಪಡೆಯುವಾಗ ಭಕ್ತರು ಈ ಗುಣಗಳನ್ನು ಮರೆತು ತದೇಕ ದೃಷ್ಟಿಯಿಂದ ಭಗವತ್ ದರ್ಶನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ಎಂಬುದು ಶಾಸ್ತ್ರದಲ್ಲಿ ಹೇಳಿದೆ.

“ಶ್ರವಣಂ ಕರ್ತನಂ ವಿಷ್ಣೋ: ಸ್ಮರಣಂ ಪಾದ ಸೇವನಮ್I

ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಮ್”II

ಒಂಭತ್ತು ವಿಧವಾದ ಭಕ್ತಿಗಳಲ್ಲಿ ಯಾವುದರಿಂದಲಾದರೂ ಸರಿ ಪರಮಾತ್ಮನನ್ನು ಧ್ಯಾನಿಸಿ ಪೂಜಿಸಿದರೆ ಒಳ್ಳೆಯ ಫಲ ಸಿಗುತ್ತದೆ.

ನೂರೆಂಟು ದಿವ್ಯ ತಿರುಪತಿಗಳಲ್ಲಿ ಒಂದಾಗಿರುವ ಈ ಕ್ಷೇತ್ರವನ್ನು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರಕ್ಕೆ ಬಂಗಾರುತಿರುಪತಿ ಅಥವಾ ಬಂಗಾರುಗಿರಿನಿವಾಸ ಎಂಬ ಹೆಸರು ಪ್ರಾಪ್ತವಾಯಿತು.

ಪದ್ಮಾವತಿ(ಅಲುಮೇಲುಮಂಗ)ದೇವಸ್ಥಾನ:-ಈ ಕ್ಷೇತ್ರದಲ್ಲಿ ವೆಂಕಟೇಶ್ವರನು ಏಕಾಂತನಾಗಿ ಉದ್ಭವವಾಗಿರುವುದರಿಂದ ಮತ್ತೊಂದು ಗಿರಿ(ಬೆಟ್ಟ)ದಲ್ಲಿ ಶ್ರೀಪದ್ಮಾವತಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗಿದೆ.

ಭೂವರಾಹಸ್ವಾಮಿ ದೇವಸ್ಥಾನ:- ಈ ದೇವಾಲಯದಲ್ಲಿ ಭೂದೇವಿ ಸಮೇತ ಆದಿ ವರಾಹನಾಗಿ ಬೆಟ್ಟದ ಬುಡದ ಸಮೀಪ ಸ್ವಾಮಿ ಪುಷ್ಕರಣಿ(ಕಲ್ಯಾಣಿ)ಹತ್ತಿರ ಭಕ್ತರಿಗೆ ಪ್ರಥಮ ದರ್ಶನ ನೀಡುತ್ತಾನೆ.

ಈ ದೇವಾಲಯದ ಕ್ಷೇತ್ರಪಾಲಕನಾಗಿ ವೀರಾಂಜನೇಯನು ಮತ್ತು ಪರಿವಾರ ದೇವತೆಗಳಾಗಿ ಗಣಪತಿ, ನವಗ್ರಹ,ನಾಗರ ದೇವತೆ,ಗರುಡ ವಿಶ್ವಕ್ಸೇನ ದೇವಾಲಯಗಳು ಪ್ರಮುಖವಾಗಿ ಕಾಣಸಿಗುತ್ತವೆ.

ಪ್ರತಿ ವರ್ಷ ಮಾಘ ಶುದ್ಧ ಹುಣ್ಣಿಮೆ ಬ್ರಹ್ಮ ರಥೋತ್ಸವ ಮತ್ತು ಶಿವರಾತ್ರಿ ಫಾರಣೆ ಜಾತ್ರೆ ಶ್ರಾವಣ ಮಾಸದ ಎರಡು, ಮೂರು ಮತ್ತು ನಾಲ್ಕನೇಯ ಶುಕ್ರವಾರ ರಾತ್ರಿ ಪುಷ್ಕರಣಿಯಲ್ಲಿ ತೆಪೋತ್ಸವ ಮತ್ತು ಶನಿವಾರಗಳಂದು ಜಾತ್ರೆ ವಿಶೇಷವಾಗಿ ನಡೆಯುತ್ತದೆ.

ಬಾಗಿಲು ತೆರೆಯುವ ಸಮಯ
07:30 AM IST – 07:30 AM IST
07:30 AM IST – 07:30 AM IST

ಬಾಗಿಲು ಮುಚ್ಚುವ ಸಮಯ

07:30 AM IST – 07:30 AM IST

ಸಾಮಾನ್ಯ ದರ್ಶನ

ಬಂಗಾರು ತಿರುಪತಿಯು ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವದಿಂದಾಗಿ ಅನೇಕ ಭಕ್ತರನ್ನು ಆಕರ್ಷಿಸುತ್ತದೆ. ಇದು ಕೋಲಾರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.

ShareTweetSendShare
Join us on:

Related Posts

ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ‘ನಡೆಸು ಬೆಳಕೆ..’ ಹಾಡು ಬಿಡುಗಡೆ: ಸಿದ್ ಶ್ರೀರಾಮ್ ಧ್ವನಿಗೆ ಮನಸೋತ ಸಿನಿಪ್ರಿಯರು

by admin
November 25, 2026
0

ಬೆಂಗಳೂರು: ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ, ಧೀರೇನ್ ಹಾಗೂ ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾ ಡಿಸೆಂಬರ್ 11ರಂದು ರಾಜ್ಯಾದ್ಯಂತ...

agroforestry-training-for-farmers-mandya-darshan-puttannaiah-puttannaiah-foundation-say-trees

ರೈತರಿಗೆ ಆಗ್ರೋ ಫಾರೆಸ್ಟ್ರಿ ತರಬೇತಿ – ಪರಿಸರ ಸಂರಕ್ಷಣೆ ಜೊತೆಗೆ ಆದಾಯ ವೃದ್ಧಿಯ ಗುರಿ –  ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

by admin
November 25, 2026
0

ಮಂಡ್ಯ: ಪರಿಸರ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ, ದೀರ್ಘಾವಧಿ ಕೃಷಿ ಪದ್ಧತಿಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಐದು ಗ್ರಾಮಗಳ 25 ರೈತರಿಗೆ...

criticism-over-cm-dk-shivakumar-foreign-tour-amid-asha-workers-protest-freedom-park-bengaluru

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ಪಂದಿಸದ ಸಿಎಂ, ವಿದೇಶ ಪ್ರವಾಸದಲ್ಲಿ ಬ್ಯುಸಿ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

by admin
November 25, 2026
0

ಸ್ವಾತಂತ್ರ್ಯ ಉದ್ಯಾನದಲ್ಲಿ 7ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ; ಕೊಟ್ಟ ಭರವಸೆ ಈಡೇರಿಸಲು ಸರ್ಕಾರಕ್ಕೆ ಇನ್ನೆಷ್ಟು ದಿನ ಬೇಕು ಎಂದು ಪ್ರಶ್ನೆ ಬೆಂಗಳೂರು: ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ...

r-ashoka-criticizes-congress-govt-over-bengaluru-jatre-demands-focus-on-civic-issues-potholes-garbage-traffic

ಬೆಂಗಳೂರು ಜಾತ್ರೆಗಿಂತ ಮೊದಲು ನಗರದ ಸಮಸ್ಯೆಗಳಿಗೆ ಮುಕ್ತಿ ಕೊಡಿ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರ್‌. ಅಶೋಕ್ ವಾಗ್ದಾಳಿ

by admin
November 25, 2026
0

₹20 ಕೋಟಿ ವೆಚ್ಚದಲ್ಲಿ 13 ದಿನಗಳ ಜಾತ್ರೆಗೆ ಸಿದ್ಧತೆ; ಕಸದ ಸಮಸ್ಯೆ, ಗುಂಡಿಮಯ ರಸ್ತೆಗಳು, ಟ್ರಾಫಿಕ್‌ ಜಂಜಾಟಕ್ಕೆ ಪರಿಹಾರ ಯಾವಾಗ ಎಂದು ಪ್ರಶ್ನೆ ಬೆಂಗಳೂರು: ಬೆಂಗಳೂರಿನಲ್ಲಿ ಅದ್ಧೂರಿ...

r-ashoka-slams-govt-over-asha-workers-protest-demands-apology-from-minister-narendraswamy-bengaluru

ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಕಂಠಿಹಾರವಲ್ಲ, ಶ್ರಮಕ್ಕೆ ತಕ್ಕ ಗೌರವಧನ: ಸರ್ಕಾರದ ವಿರುದ್ಧ ಆರ್‌. ಅಶೋಕ್ ವಾಗ್ದಾಳಿ

by admin
November 25, 2026
0

8ನೇ ದಿನವೂ ಮುಂದುವರಿದ ಅಹೋರಾತ್ರಿ ಧರಣಿ; ಸಚಿವ ನರೇಂದ್ರಸ್ವಾಮಿ ಹೇಳಿಕೆಗೆ ಆಕ್ರೋಶ, ಆಶಾ ಕಾರ್ಯಕರ್ತೆಯರ ಕ್ಷಮೆಯಾಚನೆಗೆ ಆಗ್ರಹ ಬೆಂಗಳೂರು: ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಕಂಠಿಹಾರವಲ್ಲ, ಹಗಲಿರುಳು ಜನರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram