ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅರಮನೆ ಆವರಣದಲ್ಲಿ ಅದ್ದೂರಿ ಸೆಟ್ ಅಡಿಯಲ್ಲಿ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಕ್ಷಿತಾರವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್ ನ ಉದ್ಯಮಿ ಲಲಿತ್ ಸಂಜೀವ್ ರೆಡ್ಡಿಯೊಂದಿಗೆ ಅದ್ದೂರಿಯಾಗಿ ನಡೆಯಿತು.
ನೂತನ ದಂಪತಿಗಳಿಗೆ ಉದ್ಯಮಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಪಕ್ಷ ಭೇದ ಮರೆತು ಶುಭ ಕೋರಿದರು. ಬದ್ಧ ವೈರಿಗಳೆಂದು ಕರೆಯಿಸಿಕೊಳ್ಳುವ ರಾಜಕಾರಣಿಗಳು ವೇದಿಕೆಯಲ್ಲಿ ಒಂದಾಗಿ ನಿಂತು ಫೋಟೋ ತೆಗೆಯಿಸಿಕೊಂಡರು.
ಶ್ರೀರಾಮುಲು ಅವರ ಸ್ನೇಹಿತ ಜನಾರ್ದನ ರೆಡ್ಡಿ ಅವರು ರಕ್ಷಿತಾ ವಿವಾಹ ಸಮಾರಂಭದ ನೇತೃತ್ವ ವಹಿಸಿಕೊಂಡು ಅತಿಥಿಗಳನ್ನು ಬರಮಾಡಿಕೊಂಡರು.
ತಮ್ಮ ವಿರುದ್ಧ 150 ಕೋಟಿ ಗಣಿ ಲಂಚದ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿವಾಹಕ್ಕೆ ಆಗಮಿಸಿದಾಗ ಅವರನ್ನು ಜನಾರ್ದನ ರೆಡ್ಡಿ ನಗುಮೊಗದಿಂದ ಸ್ವಾಗತಿಸಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಚ್.ಡಿ ರೇವಣ್ಣ ಹಾಗೂ ಇತರರು ವಿವಾಹ ಸಮಾರಂಭಕ್ಕೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು.
ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...








