Sriramulu-ಸಿದ್ದರಾಮಯ್ಯ ಒಬ್ಬ ಜೋಕರ್, ಶಕುನಿ, ರಾಕ್ಷಸ, ದ್ರೋಹಿ ಎಂದು ವಾಗ್ದಾಳಿಗಿಳಿದ ಶ್ರೀರಾಮುಲು
ಬಳ್ಳಾರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದು ಕೊಂಡರು.
“ಕಾಂಗ್ರೆಸ್‌ನ ಘಟಾನುಘಟಿ ನಾಯಕರು, ಸಿಎಂಗಳು ಬಳ್ಳಾರಿಗೆ ಬಂದು ಭಾರೀ ದೊಡ್ಡ ಸಮಾವೇಶ ಮಾಡಿದರು, ನಾನು ಸೂಕ್ಷ್ಮವಾಗಿ ಗಮನಿಸಿದ್ದೆನೆ, ನಿನ್ನೆ ನಡೆದ ಸಮಾವೇಶವು ಸರ್ಕಸ್ ನಂತೆ ನಡೆಯಿತು, ಸಿದ್ದರಾಮಯ್ಯನವರು ಆ ಸರ್ಕಸ್‌ನ ಜೋಕರ್‌ನಂತೆ ಕಂಡರು”
ಯುದ್ಧಭೂಮಿಯಲ್ಲಿನ ಉತ್ತರಕುಮಾರನಂತೆ ಜಂಭ ಕೊಚ್ಚಿಕೊಂಡ ಉತ್ತರಕುಮಾರ ಎಂದು ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶನಿವಾರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ, ಸರ್ಕಾರ ಹಾಗೂ ನಮ್ಮ ಬಗ್ಗೆ ಆಧಾರ ರಹಿತವಾಗಿ ಮಾಡಿದ್ದ ಎಲ್ಲ ಆರೋಪಗಳಿಗೂ ದಾಖಲೆ ಸಮೇತ ಪ್ರತ್ಯುತ್ತರ ನೀಡಲಾಯಿತು
ನನ್ನ ಬಗ್ಗೆ ವೇದಿಕೆಯಲ್ಲಿ ವೀರಾವೇಶದ ಭಾಷಣ ಮಾಡಿದ್ದ ಮಾಜಿ ಸಿ.ಎಂ. @siddaramaiah
ಅವರ ಪಾಪದ ಕೊಡ ತುಂಬಿದ್ದು, 2023ರ ವಿಧಾನಸಭೆ ಚುನವಣೆಯನ್ನು ಮೂಲೆಗುಂಪಾಗಿ ಕಾಂಗ್ರೆಸ್ ಪಕ್ಷಕ್ಕೆ ಕೊನೆಯ ಮೊಳೆ ಹೊಡೆಯುವುದು ಶತಸಿದ್ದ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಲಾಯಿತು.
ನೂರು ಸಿದ್ದರಾಮಯ್ಯನವರಂತವರು ಬಂದರೂ ಎದುರಿಸುವ ಶಕ್ತಿ ನನಗೆ ರಾಜ್ಯದ ಜನತೆ ಕೊಟ್ಟಿದ್ದಾರೆ. ಜಾತಿ ಮತ್ತು ಧರ್ಮಗಳ ನಡುವೆ ಬೆಂಕಿ ಹಚ್ಚಿದ ಇಂತಹವರಿಗೆ ನಾನು ಜಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ದಲಿತ ವಿರೋಧಿಗಳು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.