srirmulu | ಸಿದ್ದರಾಮಯ್ಯ ಒಬ್ಬ ರಾಕ್ಷಸ
ಬಳ್ಳಾರಿ : “ ಶ್ರೀ ರಾಮುಲು ಪೆದ್ದ” ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ “ ಸಿದ್ದರಾಮಯ್ಯ ಒಬ್ಬ ರಾಕ್ಷಸ” ಅಂತಾ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ರಾಮುಲು ಪೆದ್ದ, ಪೆದ್ದನ ಜೊತೆ ನಾನು ಚರ್ಚೆ ಮಾಡಲಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ವಕೀಲಿ ಹೇಗೆ ಮಾಡಿದ್ದಾನೆ ಅನ್ನೋದು ನಾನು ನೋಡಿದ್ದೇನೆ.

ಸಂಡೇ ಮಾತ್ರ ವಕೀಲ ಕೆಲಸ ಮಾಡಿದ್ದಾನೆ ಅಂತಾ ಏಕವಚನದಲ್ಲಿ ರಾಮುಲು ವಾಗ್ದಾಳಿ ನಡೆಸಿದ್ದಾರೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ರಾಕ್ಷಸ, ಅದಕ್ಕಾಗಿಯೇ ಚಾಮುಂಡೇಶ್ವರಿ ಕ್ಷೇತ್ರದ ಜನರು ಮುಖಕ್ಕೆ ಮಸಿ ಬಳಿದು ಸೋಲಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಎರಡು ಹೋಳು ಮಾಡಿದ್ದಾರೆ. ನಾನು ರಾಹುಲ್ ಗಾಂಧಿಯ ಹಾಗೇ ಪೆದ್ದ ಅಲ್ಲ ಎಂದು ಹೇಳಿದ್ದಾರೆ.