ssc recruitment 2023 : 11 ಸಾವಿರ MTS, ಮತ್ತು ಹವಾಲ್ದಾರ್ ಹುದ್ದೆಗಾಗಿ ನೇಮಕಾತಿ ಆಹ್ವಾನ…
ಮಲ್ಟಿ-ಟಾಸ್ಕಿಂಗ್ ಸರ್ವೀಸಸ್ (MTS) ಮತ್ತು ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿಯನ್ನ ನಡೆಸುತ್ತಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್– ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದು.
SSC MTS, ಹವಾಲ್ದಾರ್ ನೇಮಕಾತಿ 2023 ಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 17 2023. ಈ ನೇಮಕಾತಿ ಒಟ್ಟು 11,409 ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ :
ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ 10 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನವಾಗಿರಬೇಕು
MTS ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು ಮತ್ತು ಹವಾಲ್ದಾರ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 27 ವರ್ಷಗಳು.
ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT/CBE) ಹಾಜರಾಗಬೇಕಾಗುತ್ತದೆ.
ಅರ್ಹತೆ ಪಡೆದ ನಂತರ ದೈಹಿಕ ದಕ್ಷತೆಯ ಪರೀಕ್ಷೆಗೆ (PET) ಹಾಜರಾಗಬೇಕಾಗುತ್ತದೆ, ಇದು ಹವಾಲ್ದಾರ್ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ.
ಅಂತಿಮವಾಗಿ, ಡಾಕ್ಯುಮೆಂಟ್ ಪರಿಶೀಲನೆ ಇರಲಿದೆ.
ಅರ್ಜಿ ಶುಲ್ಕ
SSC MTS, ಹವಾಲ್ದಾರ್ ನೇಮಕಾತಿ ಪರೀಕ್ಷೆ 2023 ಕ್ಕೆ 100 ರುಪಾಯಿ ಅರ್ಜಿ ಸಲ್ಲಿಸಬೇಕು. SC/ST/ESM/PwBd ಮತ್ತು ಮಹಿಳೆಯರಿಗೆ ವಿನಾಯಿತಿ ನೀಡಲಾಗಿದೆ.
ssc recruitment 2023 : Recruitment invitation for 11 thousand MTS, and Havaldar post…