ಪರೀಕ್ಷೆ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳು ಪಾಸ್ – ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳು
ಬೆಂಗಳೂರು : ಪರೀಕ್ಷೆ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳು ಪಾಸ್ , ಹಿನ್ನೆಲೆ 878 ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದಾರೆ. ಈ ಮೂಲಕ 6 ಲಕ್ಷಕ್ಕೂ ಹೆಚ್ಚು ಪಿಯು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದ ನಿರ್ಧಾರವನ್ನ 878 ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. 878 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ 221 ವಿದ್ಯರ್ಥಿಗಳು , ಬಳ್ಳಾರಿ ಜಿಲ್ಲೆಯ 221 ಫ್ರೆಶರ್, 16 ರಿಪೀರ್ಸ್ ವಿದ್ಯಾರ್ಥಿಗಳು, ಕೊಟ್ಟೂರು ಇಂದು ಪಿಯು ಕಾಲೇಜಿನ 104 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ.
ಪ್ರತಿ ಬಾರಿ ಈ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ರ್ಯಾಂಕ್ ಬರುತ್ತಿತ್ತು. ಆದ್ರೆ ಈ ಬಾರಿ ಎಲ್ಲಾ ಉಲ್ಟಾಪಲ್ಟಾವಾಗಿದೆ. ಹೀಗಾಗಿ ಫಲಿತಾಂಶ ತಿರಸ್ಕಾರ ಮಾಡಿದ್ದಾರೆ ವಿದ್ಯರ್ಥಿಗಳು. ಪಿಯು ಬೋರ್ಡ್ ನೀಡಿದ ಅಂಕಗಳಿಗೆ ಅಸಮಾಧಾನ ಹೊರಹಾಕಿರುವ ವಿದ್ಯಾರ್ಥಿಗಳು SSLC, 1st PUC ಅಂಕ ಕಡಿಮೆ ಇದೆ. ಪರೀಕ್ಷೆ ಬರೆದರೆ ಇನ್ನೂ ಹೆಚ್ಚಿನ ಅಂಕ ಬರುತ್ತೆ ಎಂದು ಫಲಿತಾಂಶ ತಿರಸ್ಕರಿಸಿದ್ದಾರೆ. ಕೋವಿಡ್ ಹಾವಳಿಯಿಂದಾಗಿ ಈ ವರ್ಷ ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿದೆ. ಮೂರು ರ್ಷದ ಅಂಕವನ್ನ ಪರಿಗಣಿಸಿ ಫಲಿತಾಂಶ ನೀಡಿದ್ದ ಪಿಯೂ ಮಂಡಳಿ , ಫಲಿತಾಂಶಕ್ಕೆ SSLC, 1st PUC, 2nd PUC ಪ್ರಾಕ್ಟಿಕಲ್ ಅಂಕ ಪರಿಗಣಿಸಲಾಗಿತ್ತು.








