ಹಾವೇರಿ: ಎಸ್ ಎಸ್ ಎಲ್ ಪರೀಕ್ಷಾ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ಆದ್ರೆ ಕೆಲವರು ಟಾಪರ್ ಗಳಾಗಿದ್ರೆ, ಇನ್ನೂ ಕೆಲವರು ಫೇಲ್ ಆಗಿರೋರು ಉಂಟು. ಮತ್ತೆ ಕೆಲವರು ತಾವು ಅಂದುಕೊಂಡಷ್ಟು ತೃಪ್ತಿಕರವಾದ ಶ್ರೇಣಿ ಸಿಕ್ಕಿಲ್ಲ ಎಂಬ ಬೇಜಾರಿನಲ್ಲಿ ಇರುವವರು ಇದ್ದಾರೆ. ಇದರ ಹೊರತಾಗಿ ಪರ್ಸಂಟೇಜ್ ಹೋದ್ರೆ ಹೋಯ್ತು ಪಾಸ್ ಆದ್ನಲ್ಲ ಸಾಕು ಎನ್ನುವಂತಹ ವಿದ್ಯಾರ್ಥಿಗಳು ಹೆಚ್ಚು. ಆದ್ರೆ ಹಾವೇರಿಯಲ್ಲಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಕಡಿಮೆ ಪರ್ಸೆಂಟೇಜ್ ಬಂದಿದೆ ಎಂದು ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದಲ್ಲಿ 16 ವರ್ಷದ ಭಾರತಿ ಕೋಟಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆದ್ರೆ ಬೇಸರದ ಸಂಗತಿಯೇನು ಅಂದರೆ ಈ ವಿದ್ಯಾರ್ಥಿನಿ ಶೇ. 64 ಪರ್ಸಂಟೇಜ್ ಪಡೆಯುವ ಮೂಲಕ ಫಸ್ಟ್ ರ್ಯಾಂಕ್ ನಲ್ಲಿ ಪಾಸ್ ಆಗಿದ್ದಳು. ಆದ್ರೆ ಕಡಿಮೆ ಅಂಕ ಪಡೆದೆ ಎಂಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿ ಕಾಗಿನೆಲೆ ಗ್ರಾಮದ ಕನಕದಾಸ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋರೆಕಾಯಿ ರಾಗಿ ರೊಟ್ಟಿ Taste Super
ಸೋರೆಕಾಯಿ ರಾಗಿ ರೊಟ್ಟಿ Taste Super ಬೇಕಾಗುವ ಸಾಮಾನುಗಳು: ರಾಗಿ ಹಿಟ್ಟು: 2 ಕಪ್ ಅಕ್ಕಿ ಹಿಟ್ಟು: 1 ಚಮಚ ಸೋರೆಕಾಯಿ: 1 (ಚಿಕ್ಕದಾಗಿ ತುರಿದದ್ದು )...