SSLC ಫಲಿತಾಂಶ ಪ್ರಕಟ – ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021 – 22 ನೇ ಸಾಲಿನ SSLC ಫಲಿತಾಂಶವನ್ನ ಪ್ರಕಟಿಸಿದೆ. ಈ ಬಾರಿಯೂ ಸಹ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ.
ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು- ಶೇ. 90.29 ಬಾಲಕರು- ಶೇ. 81.30. ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅದರಲ್ಲಿ 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶ ನೋಡಲು ಇಲಾಖೆಯ ಲಿಂಕ್ ಮೂಲಕ ನೋಡಬಹುದು. https://karresults.nic.in
ಪೂರಕ ಪರೀಕ್ಷೆ- ಜೂನ್ 27, 2022 ರಿಂದ ಜೂನ್ 4 ರ ತನಕ ನಡೆಯಲಿದೆ. SSLC ಮರು ಮೌಲ್ಯಮಾಪನಕ್ಕೆ ಮೇ 30 ಕೊನೆ ದಿನಾಂಕ