ಸೋನು ಸೂದ್ ಗಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನಕ್ಕೆ ರೆಡಿಯಾದ ಸ್ಟಾರ್ ನಿರ್ದೇಶಕ..!
ಸದಾ ನೆಗೆಟಿವ್ ರೋಲ್ಸ್ ಗಳಲ್ಲೇ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ರೀಲ್ ಲೈಫ್ ನ ವಿಲ್ಲನ್ ಸೋನು ಸೂದ್ ಆಫ್ ಸ್ಕ್ರೀನ್ ನ ರಿಯಲ್ ಹೀರೋ ಅನ್ನೋದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕಳೆದ ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಬಡವರು , ಶ್ರೀಮಂತರು ಅಂತ ನೋಡದೇ ಅಗತ್ಯವಿದ್ದರಿಗೆ ಸಹಾಯ ಮಾಡುತ್ತಲೇ ಇರುವ ಸೋನು ಬಡವರ ಪಾಲಿನ ದೇವರಾಗಿದ್ದಾರೆ.. ಜನರ ಮನದಲ್ಲಿ ಸೋನು ಇಮೇಜ್ ಬದಲಾಗಿಬಿಟ್ಟಿದೆ.. ಇನ್ಮುಂದೆ ಸೋನು ಸೂದ್ ಅವರನ್ನ ವಿಲ್ಲನ್ ಆಗಿ ನೋಡುವುದು ಅದನ್ನ ಒಪ್ಪುವುದು ಜನರಿಗೆ ಕಷ್ಟವಾಗಬಹುದು.
ಸೋನು ಮಾನವೀಯತೆಯ ಗುಣಕ್ಕೆ ಒಂದೆಡೆ ಜನ ಜೈಕಾರ ಹಾಕ್ತಿದ್ದಾರೆ.. ಅದೇ ಮತ್ತೊಂದೆಡೆ ಸೋನು ಸೂದ್ ಗೆ ಸಿನಿಮಾಗಳ ಅವಕಾಶಗಳು ಹೆಚ್ಚಾಗುತ್ತಲೇ ಇವೆ.. ಆದ್ರೆ ವಿಲ್ಲನ್ ಗಾಗಿ ಅಲ್ಲ. ಬದಲಾಗಿ ಅನೇಕರು ಸೋನು ಸೂದ್ ಮುಂದೆ ಸಿನಿಮಾದ ನಾಯಕನಾಗುವ ಆಫರ್ ಗಳನ್ನ ಇಟ್ಟಿದ್ದಾರೆ. ಈ ನಡುವೆ ತೆಲುಗಿನ ಸ್ಟಾರ್ ನಿರ್ದೇಶಕ ಕ್ರಿಶ್ ಸೋನು ಸೂದ್ ಅವರ ಜೊತೆ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.. ಹೌದು ವೇದಂ , ಕೃಷ್ಣಂ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಕ್ರಿಶ್ ಅವರು ಸೋನು ಸೂದ್‌ಗಾಗಿಯೇ ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಸಜ್ಜಾಗಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಸೋನು ಸೂದ್ ಹಾಗೂ ಕ್ರಿಶ್ ಒಳ್ಲೆಯ ಸ್ನೇಹಿತರಾಗಿದ್ದು, ಈ ಹಿಂದೆ ಇಬ್ಬರು ಬಾಲಿವುಡ್ ನ ಮಣಿಕರ್ಣಿಕಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದ್ರೆ ಕಂಗನಾ ಜೊತೆ ಕರಿರಿಕ್ ಮಾಡಿಕೊಂಡ ನಂತರ , ಕಂಗನಾ ಸೋನು ಸೂದ್ ಅವರನ್ನ ಸಿನಿಮಾದಿಂದ ಹೊರ ಹಾಕಿಸಿದ್ದರು. ಆ ನಂತರ ಕ್ರಿಶ್ ಸಹ ಸಿನಿಮಾದಿಂದ ಹೊರನಡೆದಿದ್ದರು.. ಬಳಿಕ ಕಂಗನಾ ಖುದ್ದು ನಿರ್ದೇಶಕರ ಕ್ಯಾಪ್ ತೊಟ್ಟು ಸಿನಿಮಾ ಮುಂದುವರೆಸಿದ್ದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.