ಹುಬ್ಬಳ್ಳಿ: ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ನಲ್ಲಿ ಯುವಕರ ಗುಂಪೊಂದು ಪರಸ್ಪರ ಬಡಿದಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ರಾಘು ಎಂಬಾತನನ್ನು ಮಂಜುನಾಥ ಎಂಬುವನು ತಳಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಣದ ವಿಚಾರದಲ್ಲಿ ಹೊಡೆದಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕಸಬಾ ಪೇಟೆ ಪೊಲೀಸ್ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಗಣಪತಿ ವಿಸರ್ಜನೆ ವೇಳೆಯೂ ಹುಬ್ಬಳ್ಳಿಯಲ್ಲಿ ಯುವಕರು ಗುಂಪು ಹೊಡೆದಾಡಿಕೊಂಡು ಮೂವರು ಮೃತಪಟ್ಟಿದ್ದರು. ಇದರಿಂದ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಲಾಗುತ್ತಿದೆ.
https://www.facebook.com/1323148871140362/videos/723433648183821/