ಬೆಂಗಳೂರು: ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸಗೌಡ ಕುರಿತಾದ ಸಿನಿಮಾ ಇದೇ ಯುಗಾದಿ ಹಬ್ಬದಂದು ಸೆಟ್ಟೇರಲಿದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಈ ಸಿನಿಮಾ ಸೆಟ್ಟೆರಲಿದ್ದು, ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ ಎನ್ನಲಾಗಿದೆ. ನಿರ್ಮಾಪಕ ಲೋಕೇಶ್ ಶೆಟ್ಟಿ ಮುಚ್ಚೂರು ಅವರ ಲೆಮನ್ ಗ್ರಾಸ್ ಸ್ಟುಡಿಯೋ ಪ್ರೊಡಕ್ಷನ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು ಇದಕ್ಕಾಗಿ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಲಾಗಿದೆ. ಡಾ. ನಿಖಿಲ್ ಮಂಜು ಈ ಚಿತ್ರ ನಿರ್ದೇಶಕರಾಗಿದ್ದು, ತುಮುಲ್ ಬಾಲ್ಯನ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ನಿರ್ದೇಶಕರು ಶ್ರೀನಿವಾಸಗೌಡ ಅವರ ಜೊತೆಗೆ 6 ಕಂಬಳ ಜಾಕಿಗಳನ್ನು ತೆರೆಯ ಮೇಲೆ ತರಲಿದ್ದಾರೆ. ನಿಶಾಂತ್ ಶೆಟ್ಟಿ, ಸುರೇಶ್ ಶೆಟ್ಟಿ ಹುಕ್ಕೇರಿ, ಆನಂದ್ ಇರ್ವತ್ತೂರು, ಆಲದಂಗಡಿ ರವಿಕುಮಾರ್ ಮತ್ತು ಪ್ರವೀಣ್ ಪಣಪಿಲ್ ಇರಲಿದ್ದಾರೆ.
ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...








