ಈಗಾಗಲೇ ದೇಶ ಹಾಗೂ ರಾಜ್ಯದಲ್ಲಿ ರುದ್ರ ಸ್ವರೂಪ ಪಡೆದಿರುವ ಮಹಾಮಾರಿ ಕೊರೊನಾ ಆಗಸ್ಟ್ ನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್ ಅವರು ಈ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಫೆಸಿಫಿಕ್ ಸ್ಟಡೀಸ್ ಆಗಿಲ್ಲ, ಹೀಗಾಗಿ ನಾವು ಈಗಿನಿಂದನೇ ನಿಗ್ರಹ ಮಾಡೋದು ಅವಶ್ಯಕ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವರು “ಹೆಚ್ಚು ಹೆಚ್ಚು ಟೆಸ್ಟ್ ಮಾಡೋದು…ಈ ರೀತಿಯಲ್ಲಿ ಸರ್ಕಾರ ಕಾರ್ಯಪ್ರೌರುತ್ತವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬಹಳ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡ್ತೇವೆ. ಕಳೆದ ಒಂದು ವಾರದಲ್ಲಿ ಗುಣ ಮುಖರಾಗಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಸೋಂಕಿತರ ಸಂಖ್ಯೆಗಿಂತ ಇದು ಹೆಚ್ಚಾಗ್ತಿದೆ. ಸಾವಿನ ಪ್ರಮಾಣ ಕೂಡ ಕಡಿಮೆಯಾಗಿದೆ. ದೇಶದ ಇತರೆ ರಾಜ್ಯಗಳು ಹಾಗು ಮಹಾನಗರಗಳಿಗೆ ಹೋಲಿಸಿದ್ರೆ, ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿದೆ. ಯಾರು ನಿಯಂತ್ರಣ ಮಾಡಿಲ್ಲ ಎಂದು ಹೇಳುವ ವಿಪಕ್ಷಗಳಿಗೆ ಇದೇ ಅಂಕಿ ಅಂಶ ಉತ್ತರ. ಇದನ್ನು ನೋಡಿ ಅವರು ಅರ್ಥ ಮಾಡಿಕೊಂಡ್ರೆ ಉತ್ತಮ. ಮಳೆಗಾಲದಲ್ಲಿ ಕೆಮ್ಮು, ಜ್ವರ, ನೆಗಡಿ ಬರೋದು ಸಾಮಾನ್ಯ. ಅದು ಕೊರೋನಾದಿಂದಲೇ ಬರಬೇಕು ಅಂತ ಏನಿಲ್ಲ. ಹಾಗಾಗಿ ಬಂದಂತವರು ಕೊರೋನಾ ಟೆಸ್ಟಿಂಗ್ ನ್ನು ಮಾಡಿಸಿಕೊಂಡ್ರೆ ಒಳ್ಳೆಯದು” ಎಂದು ತಿಳಿಸಿದ್ದಾರೆ.








