ಸಿಎಂ ಬದಲಾವಣೆ ಆಗೋವರೆಗೂ ರಾಜ್ಯ ಉದ್ಧಾರ ಆಗಲ್ಲ : ಯತ್ನಾಳ್
ಬೆಂಗಳೂರು : ಇವರು ಬದಲಾವಣೆ ಆಗೋವರೆಗೂ ರಾಜ್ಯ ಉದ್ಧಾರ ಆಗೋಕೆ ಸಾಧ್ಯ ಇಲ್ಲ ಎಂದು ಮತ್ತೆ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಯಲ್ಲಿ ನೇಕಾರರ ಸಮಸ್ಯೆ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ್ರು. ಇದಕ್ಕೆ ಉತ್ತರಿಸಿದ ಸಚಿವ ಶ್ರೀಮಂತ ಪಾಟೀಲ್ ಆಶಾ ಕಾರ್ಯಕರ್ತೆಯರಿಗೆ ಸೀರೆ ಖರೀದಿಸಿ ವಿತರಿಸುವ ಬಗ್ಗೆ ಭರವಸೆ ನೀಡಿದ್ರು.
ಈ ವೇಳೆ ಶ್ರೀಮಂತ ಪಾಟೀಲ್ ಉತ್ತರದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಧಾನಗೊಂಡು, ರೈತರು ಹಾಗೂ ನೇಕಾರರು ಸರ್ಕಾರದ ಎರಡು ಕಣ್ಣು ಗಳು ಇದ್ದಂತೆ ಅಂತಾರೆ.
ಆದರೆ ನೇಕಾರರ ಸಮಸ್ಯೆ ಆಲಿಸಲು ಸೂಕ್ತ ಕ್ರಮಗಳು ಕೈಗೊಳ್ಳೋದಿಲ್ಲ. ಹಣಕಾಸು ಇಲಾಖೆಯವರು ಕೂಡ ರಾಜ್ಯದ ಅಭಿವೃದ್ಧಿ ಗೆ ಸ್ಪಂದನೆ ನೀಡೋದಿಲ್ಲ.
ರಾಜ್ಯದಲ್ಲಿ ಯಾರು ಸಿಎಂ ಆದರೂ ಇದೆ ಪರಿಸ್ಥಿತಿ ಇರುತ್ತೆ. ಎಲ್ಲರ ಸಿಎಂ ಹಾಗೂ ಎಲ್ಲರ ಹಣೆಬರಹವೂ ಇದೆ ಆಗಿದೆ. ಹೀಗಾಗಿ ಇವರು ಬದಲಾವಣೆ ಆಗುವರೆಗೂ ರಾಜ್ಯ ಮಾತ್ರ ಉದ್ಧಾರ ಆಗೋಕೆ ಸಾಧ್ಯ ಇಲ್ಲ ಎಂದು ಕಿಡಿಕಾರಿದರು.
ಅಂದಹಾಗೆ ಯತ್ನಾಳ್ ಅವರು ಇಂದು ಬೆಳಿಗ್ಗೆ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಕುರಿತು ಸಿಎಂ ವಿರುದ್ಧ ಗರಂ ಆಗಿದ್ದರು.