ನಾಳೆಗೆ (ನ. 20) ಯೋಜಿಸಲಾಗಿದ್ದ ರಾಜ್ಯಾದ್ಯಂತ ಬಾರ್ ಬಂದ್ ನಿರ್ಧಾರವನ್ನು ಬಾರ್ ಅಸೋಸಿಯೇಷನ್ ಹಿಂತೆಗೆದುಕೊಂಡಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಬಾರ್ ಮಾಲೀಕರ ಸಂಘ ಈ ಬಂದ್‌ಗೆ ಕರೆ ನೀಡಿತ್ತು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು ತಮ್ಮ ಪ್ರತಿಭಟನೆಯ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಬಾರ್ ಅಸೋಸಿಯೇಷನ್ ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗಡೆ ಮತ್ತು ಅವರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಭೆ ಬಳಿಕ ಅಧಿಕೃತ ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ನಾಳೆ ರಾಜ್ಯಾದ್ಯಂತ ಮದ್ಯಮಾರಾಟ ಮತ್ತು ಬಾರ್ ಬಂದ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.








