Stock market : ವಿಶ್ವ ಷೇರು ಮಾರುಕಟ್ಟೆ ಕುಸಿತ – ಭಾರತದ ಮೇಲೂ ಪರಿಣಾಮ….
ವಿಶ್ವದ ಷೇರು ಮಾರುಕಟ್ಟೆ ಕುಸಿತಗೊಂಡಿದೆ. ಅದರಲ್ಲೂ US ಬ್ಯಾಂಕ್ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡ ಪರಿಣಾಮ ಭಾರತದ ಷೇರು ಮಾರುಕಟ್ಟೆ ಮೇಲೂ ಪ್ರತಿಫಲಿಸಿದೆ. ಶುಕ್ರವಾರ ಭಾರತದ ಹೂಡಿಕೆದಾರರು 2.67 ಲಕ್ಷ ಕೋಟಿ ರೂ ಕಳೆದುಕೊಂಡಿದ್ದಾರೆ.
ಬಿಎಸ್‌ಇ ಸೆನ್ಸೆಕ್ಸ್ 671 ಅಥವಾ ಶೇಕಡಾ 1.12 ರಷ್ಟು ಕುಸಿದು ದಿನದ ಅಂತ್ಯಕ್ಕೆ 58,885 ಕ್ಕೆ ಬಂದು ನಿಂತಿದೆ. ನಿಫ್ಟಿ 50 177 ಪಾಯಿಂಟ್ ಅಥವಾ 1 % ನಷ್ಟು ಕುಸಿದು ದಿನದ ಅಂತ್ಯಕ್ಕೆ 17,324 ತಲುಪಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್ (ಶೇ. 2.6 ರಷ್ಟು ಇಳಿಕೆ), ಎಚ್‌ಡಿಎಫ್‌ಸಿ, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಸೇರಿದಂತೆ ಹಣಕಾಸು ಷೇರುಗಳು ಹೆಚ್ಚು ಕುಸಿತವನ್ನ ಕಂಡಿದೆ. ಬಿಗ್ ಕ್ಯಾಪ್ ಸ್ಟಾಕ್ ಗಳಾದ RIL, L&T, M&M, ಮತ್ತು ಏಷ್ಯನ್ ಪೇಂಟ್ಸ್, 1.5 ಪ್ರತಿಶತದಷ್ಟು ಕುಸಿತ ಕಂಡಿವೆ. BSE ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇ 1 ರಷ್ಟು ಕಡಿಮೆಗೆ ಇಳಿದಿದೆ.
ಇನ್ನೊಂದೆಡೆ ಲಂಡನ್ ಶಾಂಘೈ ಪ್ರಾಂಕ್ ಫರ್ಟ್ ಮತ್ತು ಟೋಕಿಯೋ ಮಾರುಕಟ್ಟೆಗಳು ಕುಸಿತವನ್ನ ಅನುಭವಿಸಿವೆ. ಅಮೆರಿಕಾದಲ್ಲಿ ಉದ್ಯೋಗ ಕಡಿತದ ಪರಿಣಾಮ ಷೇರು ಮಾರುಕಟ್ಟೆಯ ಮೇಲೆ ಬೀರಿದೆ.
Stock market: World stock market crash – Impact on India too…